ಇಂಟರ್ನೆಟ್ನಲ್ಲಿ ಸದಾ ವಿಚಿತ್ರವಾದ, ತಮಾಷೆಯಾದ ವಿಡಿಯೋಗಳು ಕಾಣುತ್ತಲೇ ಇರುತ್ತವೆ. ಅದೇ ರೀತಿಯ ಫನ್ನಿ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Video Viral) ಆಗಿದೆ. ಹಣ ಡ್ರಾ ಮಾಡಲು ಎಟಿಎಂಗೆ ಹೋದ ಯುವತಿಯೊಬ್ಬಳು ಗರಿ ಗರಿ ನೋಡುಗಳು ಕೈಗೆ ಬಂದ ನಂತರ ಖುಷಿಯಿಂದ ಕುಣಿದು ಕುಪ್ಪಳಿಸುತ್ತಾಳೆ. ಹಣವನ್ನು ಡ್ರಾ ಮಾಡಿದ ನಂತರ ಕಾರ್ಡ್ ತೆಗೆಯುವಾಗಲೂ ಆಕೆ ಅದೇ ರೀತಿಯ ಸ್ಟೆಪ್ ಹಾಕಿ ಡ್ಯಾನ್ಸ್ ಮಾಡುತ್ತಾಳೆ. ಈ ವಿಡಿಯೋದ ಸಿಸಿಟಿವಿ ದೃಶ್ಯಾವಳಿ (CCTV Footage) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಎಟಿಎಂ ಒಳಗೆ ಇಬ್ಬರು ಹುಡುಗಿಯರು ಕಾಣಿಸಿಕೊಂಡಿದ್ದಾರೆ. ಕಪ್ಪು ಟಾಪ್ ಮತ್ತು ಕಪ್ಪು ಮಾಸ್ಕ್ ಧರಿಸಿರುವ ಹುಡುಗಿ ಹಣವನ್ನು ಡ್ರಾ ಮಾಡುತ್ತಿದ್ದಂತೆ, ಖುಷಿಯಿಂದ ಸ್ಟೆಪ್ ಹಾಕುತ್ತಾಳೆ. ಈ ವಿಡಿಯೋದ ಕೊನೆಯಲ್ಲಿ ಅವಳು ಹಣವನ್ನು ಡ್ರಾ ಮಾಡುವುದನ್ನು ಪೂರ್ಣಗೊಳಿಸಿದಾಗ, ಅವಳು ಕೃತಜ್ಞತೆಯಿಂದ ಎಟಿಎಂ ಯಂತ್ರಕ್ಕೆ ನಮಸ್ಕಾರ ಮಾಡುವುದನ್ನು ಕೂಡ ನೋಡಬಹುದು.
ಸೋಷಿಯಲ್ ಮೀಡಿಯಾದ ಬಳಕೆದಾರರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ಎಟಿಎಂನಿಂದ ಹಣವನ್ನು ಡ್ರಾ ಮಾಡಿದ ನಂತರ ಈ ರೀತಿಯೆಲ್ಲ ಮಾಡಬೇಕಾ? ಎಂದು ಕಮೆಂಟ್ ಮಾಡಿದ್ದಾರೆ. ಎಟಿಎಂನಲ್ಲಿ ಆ ಯುವತಿ ಮಾಡಿದ ಡ್ಯಾನ್ಸ್ ಎಲ್ಲೆಡೆ ವೈರಲ್ ಆಗಿದೆ.
ಬಹುಶಃ ಆ ಯುವತಿಗೆ ಮೊದಲ ಸಂಬಳ ಸಿಕ್ಕಿರಬಹುದು. ಅದಕ್ಕೇ ಇಷ್ಟು ಖುಷಿಯಿಂದ ಹಣ ಡ್ರಾ ಮಾಡುತ್ತಿದ್ದಾಳೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿರುವ ವಿಡಿಯೋವನ್ನು ನೋಡುತ್ತಿರುವ ಸಿಬ್ಬಂದಿ ಕೂಡ ಆ ಯುವತಿಯ ಡ್ಯಾನ್ಸ್ ಸ್ಟೈಲ್ಗೆ ನಕ್ಕು ನಕ್ಕು ಸುಸ್ತಾಗಿದ್ದಾರೆ.
ಇದನ್ನೂ ಓದಿ: Viral Video: ಒಡಿಶಾದ ಉರಿ ಬಿಸಿಲಿಂದ ಕಾರಿನ ಬಾನೆಟ್ ಮೇಲೇ ಚಪಾತಿ ಬೇಯಿಸಬಹುದು!; ವಿಡಿಯೋ ವೈರಲ್
Viral Video: ಮೊನಾಲಿಸಾ ಪೇಂಟಿಂಗ್ಗೆ ಊದುಬತ್ತಿ ಹಚ್ಚಿ ಪೂಜೆ ಮಾಡಿದ ಸೀರಿಯಲ್ ನಾಯಕಿ; ಈ ವಿಡಿಯೋ ಮಿಸ್ ಮಾಡಬೇಡಿ!