ATM New Rules: ಹೊಸ ವರ್ಷದಿಂದ ದುಬಾರಿಯಾಗಲಿದೆ ಎಟಿಎಂ ಕ್ಯಾಶ್ ವಿತ್​ಡ್ರಾ ಶುಲ್ಕ: ಹೊಸ ದರದ ಮಾಹಿತಿ ಇಲ್ಲಿದೆ

ATM charges: ಜನವರಿ 1 ರಿಂದ ಗ್ರಾಹಕ ತನ್ನ ಉಚಿತ ಮಿತಿಗಳನ್ನು ಮೀರಿ ಹಣ ಹಿಂತೆಗೆದರೆ ಒಂದು ವಹಿವಾಟಿಗೆ ರೂ. 21 ಪಾವತಿಸಬೇಕಾಗುತ್ತದೆ ಎಂದು ಆರ್‌ಬಿಐ ಹೇಳಿದೆ. ಆರ್‌ಬಿಐ ಜೂನ್‍ನಲ್ಲಿ ಮಾಸಿಕ ಮಿತಿಯನ್ನು ಮೀರಿದ ವಹಿವಾಟಿನ ಶುಲ್ಕವನ್ನು ಹೆಚ್ಚಳ ಗೊಳಿಸುವುದಾಗಿ ಘೋಷಿಸಿತ್ತು.

ATM New Rules: ಹೊಸ ವರ್ಷದಿಂದ ದುಬಾರಿಯಾಗಲಿದೆ ಎಟಿಎಂ ಕ್ಯಾಶ್ ವಿತ್​ಡ್ರಾ ಶುಲ್ಕ: ಹೊಸ ದರದ ಮಾಹಿತಿ ಇಲ್ಲಿದೆ
ATM New Rules
Follow us
TV9 Web
| Updated By: Vinay Bhat

Updated on: Dec 27, 2021 | 1:03 PM

ಹೊಸ ವರ್ಷ (New Year) ಜನವರಿ 1 2022 ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ (Price Hike) ಬಿಸಿ ಜೋರಾಗಿ ತಟ್ಟಲಿದೆ. ಈಗಾಗಲೇ ದಿನಬಳಕೆ ವಸ್ತುಗಳು, ಎಲೆಕ್ಟ್ರಾನಿಕ್‌, ಆಟೋಮೊಬೈಲ್‌ ಜೊತೆಗೆ ಇನ್ನಷ್ಟುಸೇವೆಗಳು ಹಾಗೂ ಸರಕುಗಳ ಬೆಲೆ ಹೆಚ್ಚಳವಾಗಲಿದೆ ಎಂದು ತಿಳಿದುಬಂದಿದೆ. ಇದರ ಜೊತೆಗೆ 2022 ಜನವರಿ 1ರಿಂದ ಎಟಿಎಂ (ATM) ವಿತ್‌ಡ್ರಾ ಪ್ರಕ್ರಿಯೆ ಮೇಲೆ ಬ್ಯಾಂಕುಗಳು ವಿಧಿಸುತ್ತಿದ್ದ ಶುಲ್ಕವನ್ನು ಆರ್‌ಬಿಐ (RBI) ಪರಿಷ್ಕರಿಸಿದೆ. ಎಟಿಎಂಗಳಿಂದ ನಗದು ಹಿಂಪಡೆಯುವುದು ಹೆಚ್ಚು ದುಬಾರಿಯಾಗಲಿದೆ. ಮುಂದಿನ ತಿಂಗಳಿನಿಂದ ಎಟಿಎಂ ಬಳಕೆದಾರರು ಉಚಿತ ಎಟಿಎಂ ವಹಿವಾಟಿನ (Free Transaction) ಮಿತಿಯನ್ನು ಮೀರಿದರೆ ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇಲ್ಲಿಯವರೆಗೆ ಸಾರ್ವಜನಿಕ ರಂಗದ ಬ್ಯಾಂಕುಗಳು ಹಾಗೆಯೇ ಖಾಸಗಿ ಬ್ಯಾಂಕುಗಳು ಒಂದು ವಹಿವಾಟಿಗೆ ರೂ. 20 ವಿಧಿಸುತ್ತಿದ್ದವು.ಇದೀಗ ಈ ಶುಲ್ಕದಲ್ಲಿ 2014ರ ನಂತರ ಮೊದಲ ಬಾರಿಗೆ ಬದಲಾವಣೆ ಆಗಿದೆ (ATM New Rules).

ಜನವರಿ 1 ರಿಂದ ಗ್ರಾಹಕ ತನ್ನ ಉಚಿತ ಮಿತಿಗಳನ್ನು ಮೀರಿ ಹಣ ಹಿಂತೆಗೆದರೆ ಒಂದು ವಹಿವಾಟಿಗೆ ರೂ. 21 ಪಾವತಿಸಬೇಕಾಗುತ್ತದೆ ಎಂದು ಆರ್‌ಬಿಐ ಹೇಳಿದೆ. ಆರ್‌ಬಿಐ ಜೂನ್‍ನಲ್ಲಿ ಮಾಸಿಕ ಮಿತಿಯನ್ನು ಮೀರಿದ ವಹಿವಾಟಿನ ಶುಲ್ಕವನ್ನು ಹೆಚ್ಚಳ ಗೊಳಿಸುವುದಾಗಿ ಘೋಷಿಸಿತ್ತು. ಆರ್‌ಬಿಐ ಈ ಹಿಂದೆ ಹೊರಡಿಸಿದ ಸುತ್ತೋಲೆಯಲ್ಲಿ ಗ್ರಾಹಕರ ತಿಂಗಳಿನ ವಹಿವಾಟಿನ ಮಿತಿ ಹೆಚ್ಚಿದ್ದಲ್ಲಿ ಮುಂದಿನ ವಹಿವಾಟಿಗೆ 21 ರೂ. ಶುಲ್ಕವನ್ನು ವಿಧಿಸುವ ಬಗ್ಗೆ ತಿಳಿಸಿದೆ. ಆರ್‌ಬಿಐ ಮಾರ್ಗಸೂಚಿಯ ಪ್ರಕಾರ, ಆಕ್ಸಿಸ್ ಬ್ಯಾಂಕ್ ಹಾಗೂ ಇತರ ಬ್ಯಾಂಕ್‍ಗಳ ಉಚಿತ ಮಿತಿಗಿಂತ ಹೆಚ್ಚಿನ ವಹಿವಾಟಿನ ಶುಲ್ಕ 21 ರೂ. ಪ್ಲಸ್ ಜಿಎಸ್‍ಟಿ ಇರಲಿದೆ.

ಮೆಟ್ರೋ ನಗರಗಳಲ್ಲಿ ಇತರ ಬ್ಯಾಂಕ್‌ಗಳ ಎಟಿಎಂಗಳಿಂದ 3 ಉಚಿತ ವಹಿವಾಟುಗಳನ್ನು ಮಾಡಲು ಮತ್ತು  ಇತರ ನಗರಗಳಲ್ಲಿ 5 ವಹಿವಾಟುಗಳನ್ನು ಮಾಡಲು ಗ್ರಾಹಕರಿಗೆ ಅವಕಾಶ ನೀಡಲಾಗಿದೆ. ಇದು ಹಣಕಾಸು ಮತ್ತು ಹಣಕಾಸುೇತರ ವಹಿವಾಟುಗಳನ್ನು ಒಳಗೊಂಡಿರುತ್ತದೆ.

ಇದಲ್ಲದೇ ಪ್ರತಿ ವಹಿವಾಟಿಗೆ ಇಂಟರ್ ಚೇಂಜ್ ಶುಲ್ಕವನ್ನು ಹೆಚ್ಚಿಸಲು ಆರ್ ಬಿಐ ಅನುಮೋದನೆ ನೀಡಿದೆ. ಹಣಕಾಸು ವಹಿವಾಟಿನ ಶುಲ್ಕವನ್ನು 15 ರೂ.ನಿಂದ 17 ರೂ.ಗೆ ಹೆಚ್ಚಿಸಲಾಗಿದೆ. ಹಣಕಾಸಿಲ್ಲದ ವಹಿವಾಟಿಗೆ ಇಂಟರ್ ಚೇಂಜ್ ಶುಲ್ಕವನ್ನು 5 ರೂ.ನಿಂದ 6 ರೂ.ಗೆ ಹೆಚ್ಚಿಸಲಾಗಿದೆ. ಇದು 1 ಆಗಸ್ಟ್ 2021 ರಿಂದ ಜಾರಿಗೆ ಬಂದಿದೆ.

ಇನ್ನು ಸರಕು ಮತ್ತು ಸೇವಾ ತೆರಿಗೆ (GST) ವ್ಯವಸ್ಥೆಯು ಜನವರಿ 1, 2022ರಿಂದ ಪ್ರಮುಖ ಬದಲಾವಣೆಗಳಿಗೆ ಒಳಗಾಗಲಿದೆ. ಇವುಗಳಲ್ಲಿ ರೆಸ್ಟೋರೆಂಟ್ ವಲಯದಲ್ಲಿ ಒದಗಿಸಲಾದ ಸಾರಿಗೆ ಮತ್ತು ಸೇವೆಗಳ ಮೇಲೆ ಇ-ಕಾಮರ್ಸ್ ಸೇವಾ ಆಪರೇಟರ್(E-commerce service operator)ಗಳ ಮೇಲಿನ ತೆರಿಗೆ ಹೊಣೆಗಾರಿಕೆಯೂ ಸೇರಿದೆ. ಆ್ಯಪ್ ಮೂಲಕ ಆಟೋ, ಕಾರ್, ಬುಕಿಂಗ್ ಮಾಡಲು ಶೇಕಡ 5 ರಷ್ಟು ಜಿಎಸ್‌ಟಿ ಪಾವತಿಸಬೇಕಿದೆ. ಪಾದರಕ್ಷೆಗಳ ಮೇಲೆ ಶೇ. 12 ರಷ್ಟು, ರೆಡಿಮೇಡ್ ಬಟ್ಟೆ ಸೇರಿ ಎಲ್ಲಾ ಮಾದರಿ ಬಟ್ಟೆಗಳ ಮೇಲೆ ಶೇ. 12 ರಷ್ಟು ಜಿಎಸ್‌ಟಿ ಕಟ್ಟಬೇಕಿದೆ. ಹತ್ತಿಬಟ್ಟೆ ಬಿಟ್ಟು ಉಳಿದ ಬಟ್ಟೆಗಳ ಬೆಲೆ ಏರಿಕೆ ಆಗಲಿದೆ.

GST: ಹೊಸ ವರ್ಷಕ್ಕೆ ಮತ್ತೊಂದು ಶಾಕಿಂಗ್ ನ್ಯೂಸ್: ಜ. 1 ರಿಂದ ಓಲಾ, ಉಬರ್‌, ಸ್ವಿಗ್ಗಿ, ಜೊಮ್ಯಾಟೋ ಸೇವೆ ದುಬಾರಿ

(ATM Cash Withdrawal Charges are set to be hiked by Rs 1 from January 2022 Here is the new charges)

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್