Uttar Pradesh: ಸಾರ್ವಜನಿಕರ ಮೇಲೆ ದೌರ್ಜನ್ಯ ನಡೆಸುವುದನ್ನು ಪೊಲೀಸರಂತೂ ತಮ್ಮ ಹಕ್ಕೆಂದೇ ಭಾವಿಸಿರುವುದನ್ನು ನಾವು ಸಾಮಾನ್ಯವಾಗಿ ನೋಡುತ್ತಲೇ ಇರುತ್ತೇವೆ. ಅಂಥ ಪೊಲೀಸರ (Police) ಮೇಲೇ ಕೈಯ್ಯೆತ್ತುವುದೆಂದರೆ? ಅದೂ ನಡುರಸ್ತೆಯಲ್ಲಿ ಚಪ್ಪಲಿ ಝಳಪಿಸುತ್ತಾ ಅದರಿಂದ ಪೊಲೀಸನೊಬ್ಬನ ಮುಖಮೂತಿಗೆಲ್ಲ ಬಾರಿಸಿ ಓಡಿಸುವುದೆಂದರೆ? ತಕ್ಕ ಶಾಸ್ತಿಯಾಯಿತು ಎನ್ನುತ್ತೀರೋ? ಇದೆಂಥಾ ನಾಚಿಕೆಗೇಡು ಎಂದು ತಲೆ ತಗ್ಗಿಸುತ್ತೀರೋ? ಒಟ್ಟಿನಲ್ಲಿ ಇಂಥ ಅಸಾಮಾನ್ಯ ಘಟನೆ ನಡೆದದ್ದಂತೂ ನಿಜ.
ಇದನ್ನೂ ಓದಿ : Viral Video: ನಡುರಸ್ತೆಯಲ್ಲಿ ಯುವತಿಯ ಡ್ಯಾನ್ಸ್; ಮೈಚಳಿ ಬಿಟ್ಟು ಕುಣಿಯಲು ಧೈರ್ಯ ಬೇಕು ಎಂದ ನೆಟ್ಟಿಗರು
ಉತ್ತರಪ್ರದೇಶದ ಗಾಝಿಯಾಬಾದ್‌ನಲ್ಲಿ ನಡೆದ ಈ ಘಟನೆಯ ವಿಡಿಯೋ X ತುಂಬೆಲ್ಲಾ ಹರಿದಾಡುತ್ತಿದ್ದು ಮಂದಿ ಅದಕ್ಕೆ ತರಹೇವಾರಿಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ‘ಪೊಲೀಸರು ಜನಸೇವೆ ಮಾಡದೇ ರಾಜಕಾರಣಿಗಳ ಕೈಯಾಳುಗಳಾಗಿ ಗೌರವ ಕಳೆದುಕೊಂಡದ್ದೇ ಇದಕ್ಕೆಲ್ಲಾ ಕಾರಣ ಎಂದೊಬ್ಬರು ಹೇಳಿದ್ದಾರೆ. ‘ಭಾರತದ ಉದ್ದಗಲಕ್ಕೂ ಬರೀ ಭ್ರಷ್ಟ ಅದಕ್ಷ ಪೊಲೀಸರೇ ತುಂಬಿಕೊಂಡಿದ್ದಾರೆ, ಕೆಲ ಒಳ್ಳೆಯವರನ್ನು ಬಿಟ್ಟರೆ… ಅವರಿಗೆ ಇದಿಷ್ಟೇ ‘ಮರ್ಯಾದೆ’ ಸಾಲದು’ ಎಂದು ಕಟಕಿಯಾಡಿದವರು ಹಲವರು. ‘ಒಬ್ಬ ಮಹಿಳೆಯ ಜೊತೆ ಹೇಗೆ ನಡೆದುಕೊಳ್ಳಬೇಕು ಎಂಬ ಅರಿವಿಲ್ಲದ ಈ ಸಮವಸ್ತ್ರಧಾರಿ ಗೂಂಡಾಗಳಿಗೆ ಹೀಗೇ ಆಗಬೇಕು’ ಎಂದಷ್ಟು ಮಂದಿ ಇದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.
उत्तर प्रदेश गाजियाबाद के NH9 कनवानी पुस्ता रोड पर ट्रैफिक पुलिस कर्मी दरोगा से ई रिक्शा चालक महिला भिड़ी आपस में जोरदार मारपीट की गई जिसमें हाथ चप्पल जूते सब चले pic.twitter.com/17CouYyVTN
— Mαɳιʂԋ Kυɱαɾ αԃʋσƈαƚҽ 🇮🇳🇮🇳 (@Manishkumarttp) October 11, 2023
ಪೊಲೀಸರ ಪ್ರಕಾರ ಕಂಡಕಂಡಲ್ಲಿ ಇ-ರಿಕ್ಷಾ ನಿಲ್ಲಿಸಿ ಟ್ರಾಫಿಕ್ ಜಾಮ್ ಮಾಡುತ್ತಿದ್ದ ಈ ಮಹಿಳೆಯ ವಾಹನವನ್ನು ತೆಗೆಸಲು ಹೋದಾಗ ವ್ಯಗ್ರಳಾದ ಅವಳು ಈ ರೀತಿ ಹಲ್ಲೆ ನಡೆಸಿದ್ದಾಳೆ. ಅಲ್ಲಿಯ ಪೊಲೀಸ್ ವರಿಷ್ಠಾಧಿಕಾರಿ ಸ್ಪಷ್ಟೀಕರಣ ಕೊಡುತ್ತ, ‘ನಗರಗಳಲ್ಲಿ ಇ-ರಿಕ್ಷಾಗಳ ಹಾವಳಿ ಹೆಚ್ಚಾಗಿದೆ. ತಮ್ಮ ಕರ್ತವ್ಯ ಮಾಡುತ್ತಿದ್ದ ಪೊಲೀಸ್ ಸಿಬ್ಬಂದಿಯ ಮೇಲಿನ ಹಲ್ಲೆಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ’ ಎಂದಿದ್ದಾರೆ. ‘ಆ ಮಹಿಳೆಯನ್ನು ಕೂಡಲೇ ಬಂಧಿಸಬೇಕು’ ಎಂದು ಒಂದಷ್ಟು ಜನ ಹೇಳಿದ್ದರೂ ಒಟ್ಟಿನಲ್ಲಿ ಪೊಲೀಸರ ಬಗ್ಗೆ ಸಹಾನುಭೂತಿ ತೋರಿದವರು ಬೆರಳೆಣಿಕೆಯಷ್ಟು.
ನಿಮ್ಮೂರಿನ ಪೋಲೀಸರ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ