
Viral Video : ಇಡೀ ಸಾಮಾಜಿಕ ಜಾಲತಾಣದ ತುಂಬಾ ಹಾಲೋವಿನ್ ಪಾರ್ಟಿಗೆ ಸಂಬಂಧಿಸಿದ ಫೋಟೋ ವಿಡಿಯೋಗಳೇ ತುಂಬಿವೆ. ವಿವಿಧ ಮೇಕಪ್, ವೇಷಭೂಷಣಗಳಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರ ತನಕವೂ ಬಗೆಬಗೆಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಎಷ್ಟು ಸಾಧ್ಯವೋ ಅಷ್ಟು ಭಯಾನಕವಾಗಿ ಕಾಣಿಸಿಕೊಳ್ಳಲು ದಿನಗಟ್ಟಲೆ ಮೇಕಪ್, ಉಡುಗೆ ತೊಡುಗೆಗಾಗಿ ಕಾಲ ಕಳೆಯುತ್ತಿದ್ದಾರೆ. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ. ಪಾರ್ಟಿಗೆ ಹೋಗಲು ಈ ಮಹಿಳೆ ಹೇಗೆ ತಯಾರಾಗಿದ್ದಾಳೆ ಮತ್ತು ಆರಂಭದಿಂದ ಕೊನೆಯವರೆಗೂ ಹೇಗೆ ತನ್ನನ್ನು ಭಯಂಕರವಾಗಿ ಅಲಂಕರಿಸಿಕೊಂಡಿದ್ದಾಳೆ ಎಂದು.
ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿರುವ ಈ ಮಹಿಳೆ ತನ್ನನ್ನು ತಾ ಅತ್ಯಂತ ಕೆಟ್ಟ, ಭಯಾನಕ ಬ್ಯಾಟ್ ವುಮನ್ನಂತೆ ಅಲಂಕರಿಸಿಕೊಂಡಿದ್ದಾಳೆ. ಈ ಅವತಾರ ತಾಳಲು ಆಕೆ 9 ತಾಸು ವ್ಯಯಿಸಿದ್ದಾಳೆ. ಆ ಉಗುರು, ಹಲ್ಲು, ರೆಕ್ಕೆ, ರೆಕ್ಕೆ, ಆ ಕಪ್ಪು ಉಡುಗೆ ನೋಡಿದ ಯಾರಿಗೂ ಭಯ ಬರುವುದು ಖಚಿತ!
25,3 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಈ ವಿಡಿಯೋ ಪಡೆದಿದೆ. 1,141 ಕ್ಕೂ ಹೆಚ್ಚು ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ. ಕೆಲವರು ಕ್ಯಾಟ್ ಹಾಲೋವೀನ್ ಎಂದಿದ್ದಾರೆ. ಆದರೆ ಇದು ನೋಡಲು ಬಾವುಲಿಯಂತಿದೆ. ನೀವು ಬಹಳ ಪ್ರತಿಭಾವಂತರು ಎಂದು ಶ್ಲಾಘಿಸಿದ್ದಾರೆ ನೆಟ್ಟಿಗರೊಬ್ಬರು. ಇಷ್ಟೊಂದು ತಾಳ್ಮೆಯಿಂದ ಪರಿಪೂರ್ಣವಾಗಿ ನಿಮ್ಮನ್ನು ನೀವೇ ಸ್ವತಃ ಅಲಂಕರಿಸಿಕೊಂಡಿದ್ದೀರಿ, ವಾಹ್! ಎಂದಿದ್ದಾರೆ ಮತ್ತೊಬ್ಬರು. ಅನೇಕರು ರೀಟ್ವೀಟ್ ಮಾಡಿ ತಮ್ಮ ತಮ್ಮ ಹಾಲೋವೀನ್ ವೇಷಗಳ ವಿಡಿಯೋ, ಫೋಟೋ ಹಂಚಿಕೊಂಡಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:24 pm, Mon, 31 October 22