Shocking Video: ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಇದ್ದಕ್ಕಿದ್ದಂತೆಯೇ ತಲೆ ಕೂದಲಿಗೆ ಆವರಿಸಿಕೊಂಡ ಬೆಂಕಿ; ಮಹಿಳೆ ಕಂಗಾಲು

Viral Video: ವಿಡಿಯೋದಲ್ಲಿ ಗಮನಿಸುವಂತೆ ಮಹಿಳೆಯ ಕೂದಲಿಗೆ ಬೆಂಕಿ ಆವರಿಸಿಕೊಳ್ಳುವಾಗ ಮಹಿಳೆಯು ತಯಾರಿಸುತ್ತಿರುವ ಖಾದ್ಯಕ್ಕೆ ಕೆಲವು ಪದಾರ್ಥಗಳನ್ನು ತೆಗೆದುಕೊಳ್ಳಲು ಕೆಳಕ್ಕೆ ಬಾಗಿರುತ್ತಾಳೆ. ಭಯಾನಕ ದೃಶ್ಯವಿದು ವಿಡಿಯೋ ನೋಡಿ..

Shocking Video: ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಇದ್ದಕ್ಕಿದ್ದಂತೆಯೇ ತಲೆ ಕೂದಲಿಗೆ ಆವರಿಸಿಕೊಂಡ ಬೆಂಕಿ; ಮಹಿಳೆ ಕಂಗಾಲು
ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಇದ್ದಕ್ಕಿದ್ದಂತೆಯೇ ತಲೆ ಕೂದಲಿಗೆ ಆವರಿಸಿಕೊಂಡ ಬೆಂಕಿ
Edited By:

Updated on: Sep 30, 2021 | 9:05 AM

ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ತಲೆ ಕೂದಲಿಗೆ ಇದ್ದಕ್ಕಿದ್ದಂತೆಯೇ ಬೆಂಕಿ ಕಾಣಿಸಿಕೊಂಡಿದೆ. ಭಯಾನಕ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಸುಮಾರು 45 ಸೆಕೆಂಡುಗಳ ಕಾಲ ಆಕೆಗೆ ತನ್ನ ತಲೆ ಕೂದಲಿಗೆ ಬೆಂಕಿ ಹತ್ತಿಕೊಂಡಿರುವುದು ಗೊತ್ತೇ ಆಗಿಲ್ಲ. ಈ ದೃಶ್ಯವನ್ನು ಮೊದಲು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದ್ದು, ಬಳಿಕ ವಿಡಿಯೋ ಇತರ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಹರಿದಾಡುತ್ತಿದೆ.

ವಿಡಿಯೋದಲ್ಲಿ ಗಮನಿಸುವಂತೆ ಮಹಿಳೆಯ ಕೂದಲಿಗೆ ಬೆಂಕಿ ಆವರಿಸಿಕೊಳ್ಳುವಾಗ ಮಹಿಳೆಯು ತಯಾರಿಸುತ್ತಿರುವ ಖಾದ್ಯಕ್ಕೆ ಕೆಲವು ಪದಾರ್ಥಗಳನ್ನು ತೆಗೆದುಕೊಳ್ಳಲು ಕೆಳಕ್ಕೆ ಬಾಗಿರುತ್ತಾಳೆ. ಅಡುಗೆಗೆ ಬೇಕಾದ ಕೆಲವು ಪದಾರ್ಥಗಳನ್ನು ತೆಗೆಯಲು ಮುಂದಾಗುತ್ತಾಳೆ. ಆ ಸಮಯದಲ್ಲಿ ಬೆಂಕಿ ಮಹಿಳೆಯ ಕೂದಲಿಗೆ ಹತ್ತಿಕೊಂಡಿದೆ.

ಮಹಿಳೆಗೆ ತನ್ನ ತಲೆ ಕೂದಲಿಗೆ ಬೆಂಕಿ ಆವರಿಸಿಕೊಂಡಿರುವುದು ಗೊತ್ತೇ ಆಗಿಲ್ಲ. ಸುಮಾರು 45 ಸೆಕೆಂಡುಗಳ ಕಾಲ ಆಕೆ ಅಡುಗೆ ಮನೆಯಲ್ಲಿ ಆಕಡೆ ,ಈಕಡೆ ಓಡಾಡುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಬೆಂಕಿ ತಲೆ ಕೂದಲಿಗೆ ಪೂರ್ತಿಯಾಗಿ ಆವರಿಸಿಕೊಳ್ಳುತ್ತಿದ್ದಂತೆಯೇ ಮಹಿಳೆ ಎಚ್ಚರಗೊಂಡಿದ್ದಾಳೆ. ಬಳಿಕ ಬೆಂಕಿ ನಂದಿಸಿದ್ದಾಳೆ. ಸೆಪ್ಟೆಂಬರ್ 16 ನೇ ತಾರೀಕಿನಂದು ಘಟನೆ ನಡೆದಿದೆ. ಆದರೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ.

ಇದನ್ನೂ ಓದಿ:

Viral Video: ಎಲ್ಲೆಡೆ ಸಖತ್ ಸದ್ದು ಮಾಡ್ತಿದೆ ಈ ‘ದೇಸಿ ಮೈಕಲ್ ಜಾಕ್ಸನ್’ ನೃತ್ಯ; ವಿಡಿಯೊ ನೋಡಿ

Viral Video: ಆರ್ಡರ್ ಫುಡ್ ಹೊತ್ತೊಯ್ಯುತ್ತಿದ್ದ ಡ್ರೋನ್ ಮತ್ತು ಕಾಗೆ ನಡುವೆ ಜಗಳ; ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ವಿಡಿಯೋ