ಮರಕುಟಿಗವು 317 ಕಿ.ಗ್ರಾಂ ಓಕ್​ಹಣ್ಣುಗಳನ್ನು ಸಂಗ್ರಹಿಸಿದ ವಿಡಿಯೋ ಇಲ್ಲಿದೆ

Woodpecker : ಕ್ಯಾಲಿಫೋರ್ನಿಯಾದ ಮನೆಯೊಂದರಲ್ಲಿ ಈ ಕುತೂಹಲಕಾರಿ ಘಟನೆ ನಡೆದಿದೆ. ಈ ಮರಕುಟಿಗದ ಶ್ರಮಕ್ಕೆ ನೀವು 700 ಪೌಂಡ್​ ಹಣ ಪಾವತಿಸಬೇಕು ಎಂದು ಹೇಳುತ್ತಿದ್ದಾರೆ ನೆಟ್ಟಿಗರು.

ಮರಕುಟಿಗವು 317 ಕಿ.ಗ್ರಾಂ ಓಕ್​ಹಣ್ಣುಗಳನ್ನು ಸಂಗ್ರಹಿಸಿದ ವಿಡಿಯೋ ಇಲ್ಲಿದೆ
ಮರಕುಟಿಕವು ಸಂಗ್ರಹಿಸಿದ ಓಕ್​ಹಣ್ಣುಗಳ ರಾಶಿ (ಬಲಬದಿಯ ಮರಕುಟಿಗದ ಚಿತ್ರ ಪ್ರಾತಿನಿಧಿಕ)

Updated on: Feb 10, 2023 | 11:24 AM

Viral News : ಮರಕುಟಿಗವು (Woodecker) ಜಗತ್ತಿನಾದ್ಯಂತ ಸುಮಾರು 200 ತಳಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ಇದು ಪಿಸಿಡೆ ಎಂಬ ಪಕ್ಷಿಕುಟುಂಬಕ್ಕೆ ಸೇರಿದ್ದು. ಇದೊಂದು ಸುಂದರವಾದ ಪಕ್ಷಿ. ಮರದ ಕಾಂಡ, ರೆಂಬೆಗಳನ್ನು ತನ್ನ ಕೊಕ್ಕಿನಿಂದ ಕುಟ್ಟಿ ಅದರೊಳಗಿರು ಕ್ರಿಮಿಗಳನ್ನು ತಿನ್ನುತ್ತದೆ. ಇದರ ಗಟ್ಟಿಮುಟ್ಟಾದ ಕೊಕ್ಕು, ಹರಿತ ಉಗುರುಗಳುಳ್ಳ ಕಾಲುಗಳಿಂದ ನಿಮಿಷಕ್ಕೆ 120 ಕ್ಕಿಂತಲೂ ಹೆಚ್ಚು ಸಲ ಕುಕ್ಕುವ ಸಾಮರ್ಥ್ಯವನ್ನು ಇದು ಹೊಂದಿದೆ.  ಇದೀಗ ಈ ಪಕ್ಷಿ ಭಾರೀ ಸುದ್ದಿಯಲ್ಲಿದೆ. ಕ್ಯಾಲಿಫೋರ್ನಿಯಾದ ಮನೆಯೊಂದರೊಳಗೆ ಮರಕುಟಿಗವು ಸುಮಾರು 317 ಕಿ.ಗ್ರಾಂ ನಷ್ಟು ಓಕ್​ಹಣ್ಣುಗಳನ್ನು (Acorns) ಸಂಗ್ರಹಿಸಿಟ್ಟಿದೆ.

ಕ್ಯಾಲಿಫೋರ್ನಿಯಾದ ಸಾಂಟಾ ರೋಸಾದಲ್ಲಿರುವ ವ್ಯಕ್ತಿಯೊಬ್ಬ ತನ್ನ ಮನೆಗೆ ಕೀಟನಾಶಕ ಸಿಂಪರಣೆ ಮಾಡಲು ಏಜೆನ್ಸಿಗೆ ಕರೆದಿದ್ದಾನೆ. ಆಗ ಗೋಡೆ, ಕಿಂಡಿಗಳನ್ನು ಸ್ವಚ್ಛ ಮಾಡುವಾಗ ಓಕ್​ಹಣ್ಣುಗಳು ಕೈಗೆ ಸಿಕ್ಕಿವೆ. ಕಿಂಡಿಯೊಳಗೆ ಕೈಹಾಕಿ ಗಂಟೆಗಟ್ಟಲೆ ಇವುಗಳನ್ನು ಹೊರತೆಗೆದಾಗ ಸುಮಾರು 317 ಕಿ.ಗ್ರಾ. ರಾಶಿ ಸೇರಿದೆ.

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : 35 ವರ್ಷದ ಆನೆಯ ಜೀವ ಉಳಿಸಲು ಕೈಜೋಡಿಸಿದ ಭಾರತೀಯ ಸೇನೆ; ನೋಡಿ ವಿಡಿಯೋ

ನಿಕ್ಸ್​ ಎಕ್ಸ್‌ಟ್ರೀಮ್ ಪೆಸ್ಟ್ ಕಂಟ್ರೋಲ್‌ನ ಮಾಲೀಕ ನಿಕ್ ಕ್ಯಾಸ್ಟ್ರೋ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಒಟ್ಟು ಎಂಟು ಚೀಲಗಳನ್ನು ಈ ಹಣ್ಣುಗಳಿಂದ ತುಂಬಿಡಲಾಗಿದೆ. ಫೇಸ್​ಬುಕ್​ನ ಈ ಪೋಸ್ಟ್​ಗೆ 1,200 ಜನರು ಲೈಕ್​ ಮಾಡಿದ್ದಾರೆ. ಸುಮಾರು 983 ಜನರು ಈ ಪೋಸ್ಟ್​ ಹಂಚಿಕೊಂಡಿದ್ದಾರೆ. 267 ಜನರು ಪ್ರತಿಕ್ರಿಯಿಸಿದ್ದಾರೆ.

ಪಾಪ ಆ ಮರಕುಟಿಗವು ಅದೆಷ್ಟು ಶ್ರಮವಹಿಸಿದೆ. ಅವರ ಶ್ರಮಕ್ಕೆ ನೀವು 700 ಪೌಂಡ್​ ಹಣವನ್ನು ಕೊಡಬೇಕು ಎಂದಿದ್ದಾರೆ ನೆಟ್ಟಿಗರು. ಬಡಮರಕುಟಿಗ, ಅದಕ್ಕೆ ಆಹಾರದ ಕೊರತೆಯಾಗಿದೆಯೋ ಏನೋ ಎಂದು ಇನ್ನೊಬ್ಬರು ಹೇಳಿದ್ದಾರೆ. ಅಳಿಲು ಕೂಡ ಹೀಗೆ ಮಾಡಿರುವ ಸಾಧ್ಯತೆ ಇದೆ. ಮರಕುಟಿಗವೇ ಎಂದು ಹೇಗೆ ಹೇಳುತ್ತೀರಿ? ಎಂದು ಮತ್ತೊಬ್ಬರು ಕೇಳಿದ್ದಾರೆ. ನಿಮ್ಮ ಈ ಪೋಸ್ಟ್​ ನೋಡಿದ ಅನೇಕ ಚಾನೆಲ್​​ಗಳು ಇದನ್ನು ವರದಿ ಮಾಡಿವೆ ಎಂದು ಹಲವರು ಹೇಳಿದ್ದಾರೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:04 am, Fri, 10 February 23