ಬೇಸಿಗೆಯಲ್ಲಿ ತಂಪಾದ ಐಸ್ ಕ್ರೀಮ್ ತಿನ್ನಲು ಎಲ್ಲರೂ ಇಷ್ಟಪಡುತ್ತಾರೆ. ಆದರೆ ಇದೀಗಾ ವೈರಲ್ ಆಗುತ್ತಿರುವ ವಿಡಿಯೋ ನೋಡಿದರೆ ನೀವು ಐಸ್ ಕ್ರೀಮ್ನಿಂದ ದೂರ ಉಳಿಯುವುದಂತೂ ಖಂಡಿತಾ. ಉತ್ತರ ಪ್ರದೇಶದ ಲಕ್ನೋದ ಲುಲು ಮಾಲ್‌ನಲ್ಲಿರುವ ನೇಷನ್ ಶಾಪ್ನ ಫಲೂದದಲ್ಲಿ ಹುಳ ಪತ್ತೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಲಕ್ನೋದ ಲುಲು ಮಾಲ್‌ಗೆ ಪ್ರತಿದಿನ ಸಾವಿರಾರು ಜನರು ಶಾಪಿಂಗ್ ಹಾಗೂ ಫ್ಯಾಮಿಲಿಯೊಂದಿಗೆ ಸಮಯ ಕಳೆಯಲು ಭೇಟಿ ನೀಡುತ್ತಾರೆ. ಇಂತಹ ಮಾಲ್‌ನಲ್ಲಿ ಬೇಜಾವಬ್ದಾರಿ ಕಂಡು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
#लखनऊ#लुलुमॉल के फालूदा नेशन में निकला #कुल्फी में कीड़ा !
लोगो की सेहत से #खिलवाड़ !#फूड_विभाग भी नामी कंपनी के प्रोडक्ट पर जांच के नाम पर कर रहा खानापूर्ति !लुलु मॉल के अंदर फूड प्रोडक्ट पर कई बार घटिया सामग्री की शिकायत के हो चुके है #विडियो_वायरल !#फूड_विभाग द्वारा… pic.twitter.com/rdT3E1LoSe
— Anand Mishra (@AnandMi38424236) March 28, 2024
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋಗೆ ಸಾಕಷ್ಟು ನೆಟ್ಟಿಗರು ಕಾಮೆಂಟ್ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದಾರೆ. ‘ಇದು ಸಣ್ಣ ವಿಷಯವಲ್ಲ ಈ ಕುರಿತು ಇಲಾಖೆ ಕ್ರಮ ಕೈಗೊಳ್ಳಬೇಕು’ ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಯುವತಿಯ ಕಿಡ್ನಿ ವೈಫಲ್ಯಕ್ಕೆ ಕಾರಣವಾದ ಹೇರ್ ಸ್ಟ್ರೈಟ್ನಿಂಗ್ ಟ್ರೀಟ್ಮೆಂಟ್
ಲುಲು ಮಾಲ್‌ನಲ್ಲಿ ಕಳಪೆ ಆಹಾರ ಪೂರೈಕೆ ಆರೋಪ ಮತ್ತು ಘಟನೆಗಳು ಇದೇ ಮೊದಲಲ್ಲ. ಮಾಲ್‌ನಲ್ಲಿ ಕಳಪೆ ಗುಣಮಟ್ಟದ ಆಹಾರದ ಬಗ್ಗೆ ಈಗಾಗಲೇ ಸಾಕಷ್ಟು ದೂರುಗಳಿವೆ. ಹಲವು ವಿಡಿಯೋಗಳು ಕೂಡ ವೈರಲ್ ಆಗುತ್ತಿವೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ