Home made Ice Cream : ಆರೋಗ್ಯಕ್ಕೂ ಸಿಹಿ ಈ ಹೋಮ್ ಮೇಡ್ ಐಸ್ ಕ್ರೀಮ್, ಮನೆಯಲ್ಲಿ ಮಾಡುವುದು ಹೇಗೆ?
ಬೇಸಿಗೆಯೂ ಶುರುವಾಗಿದ್ದು, ಬಿಸಿಲಝಳವನ್ನು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಪ್ಪಿ ತಪ್ಪಿ ಏನಾದರೂ ಹೊರಗಡೆ ಹೋಗಿ ಬಂದರಂತೂ ತಣ್ಣಗೆಯ ಪಾನೀಯ ಅಥವಾ ಐಸ್ ಕ್ರೀಮ್ ಸವಿಯಬೇಕೇನಿಸುತ್ತದೆ. ಎಲ್ಲರೂ ಇಷ್ಟ ಪಡುವ ಐಸ್ ಕ್ರೀಮ್ ಅನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ಕೆಲವೇ ಕೆಲವು ಸಾಮಗ್ರಿಗಳು ಇದ್ದು ಬಿಟ್ಟರೆ ಮನೆಯಲ್ಲೇ ಐಸ್ ಕ್ರೀಮ್ ತಯಾರಿಸಿ ಸೇವಿಸುವುದರಿಂದ ಆರೋಗ್ಯಕಾರಿ ಲಾಭಗಳು ಇವೆ.
ಐಸ್ ಕ್ರೀಮ್ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಮಕ್ಕಳಿಂದ ಹಿಡಿದು ದೊಡ್ಡವರೆಗೂ ಇಷ್ಟ ಪಟ್ಟು ಸೇವಿಸುತ್ತಾರೆ. ಈ ಬೇಸಿಗೆಯಲ್ಲಿ ಸುಡುವ ಬಿಸಿಲಿನ ನಡುವೆ ತಣ್ಣನೆಯ ಐಸ್ ಕ್ರೀಮ್ ತಿನ್ನುವುದು ಎಲ್ಲರಿಗೂ ಇಷ್ಟನೇ. ಮಾರುಕಟ್ಟೆಯಲ್ಲಿ ವಿಧ ವಿಧವಾದ ಐಸ್ ಕ್ರೀಮ್ ಲಭ್ಯವಿದ್ದು, ಹೊರಗಡೆಯಿಂದ ತಂದು ಐಸ್ ಕ್ರೀಮ್ ತಿನ್ನುವ ಬದಲು ಮನೆಯಲ್ಲೇ ಸುಲಭವಾಗಿ ಐಸ್ ಕ್ರೀಮ್ ತಯಾರಿಸಿ ಸೇವಿಸಿದರೆ ಆರೋಗ್ಯಕ್ಕೆ ಹಿತ. ಮನೆಯಲ್ಲೇ ತಾಜಾ ಹಣ್ಣುಗಳಿದ್ದರೆ ಸುವಾಸನೆಭರಿತವಾದ ಐಸ್ ಕ್ರೀಮ್ ಮಾಡಿ ಸವಿಯಬಹುದಾಗಿದೆ.
ಮನೆಯಲ್ಲೇ ಮಾಡಬಹುದಾದ ಐಸ್ ಕ್ರೀಮ್ಗಳು
- ಆಪಲ್ ಐಸ್ ಕ್ರೀಮ್ : ಮೊದಲಿಗೆ ಸೇಬುಹಣ್ಣುಗಳ ಸಿಪ್ಪೆ ಹಾಗೂ ಬೀಜಗಳನ್ನು ತೆಗೆಯಿರಿ. ಇತ್ತ ಗ್ಯಾಸ್ ಸ್ಟವ್ ಮೇಲೆ ಹಾಲನ್ನು ಮಧ್ಯಮ ಉರಿಯಲ್ಲಿ ಕುದಿಯಲು ಇಡಿ. ಸ್ವಲ್ಪ ಸಕ್ಕರೆ ಸೇರಿಸಿ ಚೆನ್ನಾಗಿ ಕುದಿಸಿಕೊಳ್ಳಿ. ಆ ಬಳಿಕ ಬಾದಾಮಿ ಮತ್ತು ಗೋಡಂಬಿ ಸೇರಿಸಿಕೊಳ್ಳಿ ಹಾಲು ಗಟ್ಟಿಯಾದ ಬಳಿಕ ಸ್ಟವ್ ಆಫ್ ಮಾಡಿ. ಇದಕ್ಕೆ ಕತ್ತರಿಸಿದ ಸೇಬು ಸೇರಿಸಿ ಮುಚ್ಚಿದ ಪಾತ್ರೆಗೆ ಹಾಕಿ ಮೂರ್ನಾಲ್ಕು ಗಂಟೆಗಳ ಕಾಲ ಪ್ರಿಡ್ಜ್ ನಲ್ಲಿಟ್ಟರೆ, ಹೋಮ್ ಮೇಡ್ ಆಪಲ್ ಐಸ್ ಕ್ರೀಮ್ ಸವಿಯಲು ಸಿದ್ಧವಾಗಿರುತ್ತದೆ.
- ಮ್ಯಾಂಗೋ ಐಸ್ ಕ್ರೀಮ್ : ಮಾವಿನ ಹಣ್ಣಿನ ತುಂಡುಗಳನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಿ. ಆದರೆ ನೀರು ಸೇರಿಸಿಕೊಳ್ಳಬೇಡಿ. ಆ ಬಳಿಕ ವಿಪ್ಪಿಂಗ್ ಕ್ರೀಮ್ ಗೆ ಈ ಮಾವಿನಹಣ್ಣಿನ ರಸ ಸೇರಿಸಿ, ಚೆನ್ನಾಗಿ ಕದಡಿಕೊಳ್ಳಿ. ಮುಚ್ಚಳವಿರುವ ಪಾತ್ರೆಗೆ ಈ ಮಿಶ್ರಣವನ್ನು ಹಾಕಿ ಐದಾರು ಘಂಟೆಗಳ ಕಾಲ ಫ್ರಿಡ್ಜ್ನಲ್ಲಿಟ್ಟರೆ ಐಸ್ ಕ್ರೀಮ್ ಸವಿಯಲು ಸಿದ್ಧ.
- ಚಾಕ್ಲೇಟ್ ಕೇಕ್ ಐಸ್ ಕ್ರೀಮ್ : ಮೊದಲು ವಿಪ್ಪಿಂಗ್ ಕ್ರೀಮ್ ಅನ್ನು ಹಾಕಿ ಚೆನ್ನಾಗಿ ಕಲಸಿಕೊಂಡ ಬಳಿಕ ಕಂಡೆನ್ಸರ್ ಮಿಲ್ಕ್ ಸೇರಿಸಿಕೊಳ್ಳಿ. ನಂತರದಲ್ಲಿ ಚಾಕೊಲೇಟ್ ಕೇಕ್ ಕ್ರಂಬ್ಸ್ ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ. ಆ ಬಳಿಕ ಅಡುಗೆ ಸೋಡಾ ಮತ್ತು ಸಕ್ಕರೆ ಸೆರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಮುಚ್ಚಿದ ಪಾತ್ರೆಯಲ್ಲಿ ಹಾಕಿ ರಾತ್ರಿಯಡೀ ಫ್ರಿಡ್ಜ್ನಲ್ಲಿ ಇಟ್ಟರೆ ರುಚಿ ರುಚಿಯಾದ ಐಸ್ ಕ್ರೀಮ್ ರೆಡಿ.
ಮನೆಯಲ್ಲೆ ತಯಾರಿಸಿದ ಐಸ್ ಕ್ರೀಮ್ ಆರೋಗ್ಯಕಾರಿ ಪ್ರಯೋಜನಗಳು
- ಐಸ್ ಕ್ರೀಮ್ ಉತ್ತಮ ಗುಣಮಟ್ಟದ್ದಾಗಿದ್ದು, ರಾಸಾಯನಿಕಗಳನ್ನು ಬಳಸದೇ ಮಾಡಿದ್ದೇ ಆದಲ್ಲಿ ದೇಹಕ್ಕೆ ಉಪಯುಕ್ತ ಪೋಷಕಾಂಶಗಳನ್ನು ಒದಗಿಸುತ್ತದೆ. ಈ ಐಸ್ ಕ್ರೀಮ್ ಸೇವನೆಯಿಂದ ಎಂಡಾರ್ಫಿನ್ ಹಾರ್ಮೋನ್ ಹೆಚ್ಚು ಬಿಡುಗಡೆಯಾಗಿ ಮನಸ್ಸಿಗೆ ಸಂತೋಷವನ್ನು ನೀಡುತ್ತದೆ.
- ಮನೆಯಲ್ಲೇ ತಯಾರಿಸಿದ ಐಸ್ ಕ್ರೀಮ್ ಸೇವನೆಯಿಂದ ದೇಹಕ್ಕೆ ಕ್ಯಾಲ್ಸಿಯಂ ಲಭಿಸುತ್ತದೆ. ಇದು ಮೂಳೆಗಳು ಮತ್ತು ಹಲ್ಲುಗಳನ್ನು ಬಲ ಪಡಿಸಿ ದೇಹವನ್ನು ಶಕ್ತಿಯುತವಾಗಿರಿಸುತ್ತದೆ.
- ಮನೆಯಲ್ಲಿ ತಯಾರಿಸುವ ಐಸ್ ಕ್ರೀಮ್ ನಲ್ಲಿ ಸಕ್ಕರೆ ಪ್ರಮಾಣವು ಕಡಿಮೆಯಿರುತ್ತದೆ. ಮಧುಮೇಹಿ ಕಾಯಿಲೆಯಿದ್ದರೆ ಈ ಹೋಮ್ ಮೇಡ್ ಐಸ್ ಕ್ರೀಮ್ ಸೇವನೆಯಿಂದ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದಾಗಿದೆ.
- ಮಾರುಕಟ್ಟೆಯಲ್ಲಿ ದೊರೆಯುವ ಐಸ್ ಕ್ರೀಮ್‌ಗಳನ್ನು ಸಾಮಾನ್ಯವಾಗಿ ಕೃತಕ ಬಣ್ಣಗಳು, ರಾಸಾಯನಿಕಗಳನ್ನು ಸೇರಿಸಲಾಗುತ್ತದೆ. ಆದರೆ ಮನೆಯಲ್ಲೇ ತಯಾರಿಸುವ ನೈಸರ್ಗಿಕ ಐಸ್ ಕ್ರೀಮ್ ಸೇವನೆಯೂ ದೇಹಕ್ಕೆ ಯಾವುದೇ ಅಡ್ಡಪರಿಣಾಮಗಳಿಲ್ಲ.
- ಆರೋಗ್ಯಕರ ಪದಾರ್ಥಗಳನ್ನು ಈ ಐಸ್ ಕ್ರೀಮ್ ನಲ್ಲಿ ಬಳಸಲಾಗುವ ಕಾರಣ ನಿಮ್ಮನ್ನು ರಿಫ್ರೆಶ್ ಆಗಿಸುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ