Video Viral: ನಾಯಿಯ ಈ ಸೊಗಸಾದ ಆಟಕ್ಕೆ ನೀವು ಬೆರಗಾಗದೆ ಏರಲು ಸಾಧ್ಯವೇ ಇಲ್ಲ! ಇಲ್ಲಿದೆ ಆ ವೀಡಿಯೊ!

| Updated By: ಅಕ್ಷತಾ ವರ್ಕಾಡಿ

Updated on: May 04, 2023 | 5:49 PM

ನಾಯಿಯೊಂದು ಕೊಳದಿಂದ ಚೆಂಡನ್ನು ಹಿಡಿದುಕೊಂಡು ನೀರಿನೊಳಗೆ ಬೀಳುವ ವೀಡಿಯೊ ಸಿಕ್ಕ ಪಟ್ಟೆ ವೈರೆಲ್ ಆಗಿದ್ದು ನಿಮ್ಮನ್ನು ನಗಿಸುವುದರಲ್ಲಿ ಸಂಶಯವೇ ಇಲ್ಲ. ಹಾಗಾದರೆ ಬನ್ನಿ ನೋಡಕ್ಕೊಂಡು ಬರೋಣ?

Video Viral: ನಾಯಿಯ ಈ ಸೊಗಸಾದ ಆಟಕ್ಕೆ ನೀವು ಬೆರಗಾಗದೆ ಏರಲು ಸಾಧ್ಯವೇ ಇಲ್ಲ! ಇಲ್ಲಿದೆ ಆ ವೀಡಿಯೊ!
Viral Video
Image Credit source: Hindusthan Times
Follow us on

ಸಾಕು ಪ್ರಾಣಿಗಳು ಆಟ ಆಡುವುದನ್ನು ನೋಡುವುದೇ ಚೆಂದ. ಅವರ ತುಂಟಾಟ, ಹೊಡೆದಾಟ, ಸರ್ಕಸ್ ಎಲ್ಲವೂ ಮಜವಾಗಿರುತ್ತದೆ. ಇಂತಹದ್ದೇ ಒಂದು ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗಿದ್ದು ನಿಮ್ಮ ಮುಖದಲ್ಲಿ ನಗು ತರಿಸದೆಯೇ ಇರಲಾರದು. ಈ ನಾಯಿಯ ವೀಡಿಯೊ ತುಂಬಾ ಸುಂದರವಾಗಿದ್ದು ನೀರನ್ನು ಸ್ಪರ್ಶಿಸದೆಯೇ ಚೆಂಡನ್ನು ಎತ್ತಿಕೊಳ್ಳ ಬೇಕು ಎಂಬ ಬಯಕೆಯಿಂದ ಹರಸಾಹಸ ಪಟ್ಟು ತೆಗೆದುಕೊಳ್ಳಲು ನೋಡುತ್ತಿರುವ ವೀಡಿಯೊ ಇದಾಗಿದ್ದು ಆ ನಾಯಿಯ ಮುದ್ದಾದ ಮುಖ, ಅದು ಕಷ್ಟ ಪಡುತ್ತಿರುವ ರೀತಿ ಯಾರನ್ನೂ ಬೇಕಾದರೂ ಒಲಿಸಿಕೊಳ್ಳಬಹುದು ಎಂಬಂತಿದೆ. ಅಷ್ಟು ಮುಗ್ಧತೆ. ಆದರೆ ಇದಕ್ಕಿಂತ ಮಜಾ ಇರುವ ಸಂಗತಿ ಎಂದರೆ ಮುಂದೆ ಏನಾಗುತ್ತದೆ ಎಂಬುವುದು. ಕಷ್ಟ ಪಟ್ಟು ಉಪಾಯದಿಂದ ಚೆಂಡನ್ನು ಬಾಯಲ್ಲಿ ಕಚ್ಚಿಕೊಳ್ಳುತ್ತದೆ ಆದರೆ ಕೆಲವು ಸೆಕೆಂಡುಗಳ ನಂತರ ಕಾಲು ಜಾರಿ ಕೊಳಕ್ಕೆ ಬೀಳುತ್ತದೆ.

ಈ ವೀಡಿಯೊವನ್ನು ರೆಡ್ಡಿಟ್ ನಲ್ಲಿ ಹಂಚಿಕೊಳ್ಳಲಾಗಿದೆ. ಅಲ್ಲದೆ ಈ ವೀಡಿಯೊ ಗೆ ಶೀರ್ಷಿಕೆಯನ್ನು ನೀಡಿದ್ದು “ಸೊಗಸಾಗಿ ಚೆಂಡನ್ನು ಹಿಡಿದರು, ಆದರೆ …” ಎಂದು ಬರೆದುಕೊಂಡಿದ್ದಾರೆ. ಈಜುಕೊಳದ ಅಂಚಿನಲ್ಲಿ ನಾಯಿ ನಿಂತಿದ್ದು, ಅದರ ಮುಂದೆ ಚೆಂಡು ತೇಲುತ್ತಿರುವುದನ್ನು ತೋರಿಸುವುದರೊಂದಿಗೆ ಕ್ಲಿಪ್ ತೆರೆದುಕೊಳ್ಳುತ್ತದೆ. ನಾಯಿ ಬಹಳ ಎಚ್ಚರಿಕೆಯಿಂದ ಚೆಂಡಿಗೆ ಹತ್ತಿರವಾಗಿ ಕುಳಿತು ನೀರನ್ನು ಸ್ಪರ್ಶಿಸದೆ ಅದನ್ನು ಎತ್ತಿಕೊಳ್ಳುತ್ತದೆ. ಆದರೆ ಚೆಂಡು ಸಿಕ್ಕಿದ ಖುಷಿಗೆ ಹಿಂದೆ ಸರಿಯುತ್ತಾ ಕಾಲು ಜಾರಿ ಕೊಳದ ಒಳಗೆ ಬೀಳುತ್ತದೆ.

Gracefully caught the ball, but…
by u/thelonelyasshole in AnimalsBeingDerps

ಇದನ್ನೂ ಓದಿ: ಡೋಲೋ 650 ಶಶಿರೇಖಾ; ನಿಮ್ಮ ಮನೆಮಗಳೀಗ ಮಾಡೆಲಿಂಗ್​ಗೂ ಸೈ?

ಈ ವೀಡಿಯೊ ಪೋಸ್ಟ್ ಮಾಡಿದಾಗಿನಿಂದ, 28,000 ಕ್ಕೂ ಹೆಚ್ಚು ಲೈಕ್ ಸಂಗ್ರಹಿಸಿದೆ ಮತ್ತು ಇವುಗಳ ಸಂಖ್ಯೆ ಘಂಟೆ ಘಂಟೆಗೂ ಹೆಚ್ಚುತ್ತಿದೆ. ಈ ವೀಡಿಯೊಗೆ ಟನ್ ಗಟ್ಟಲೆ ಕಾಮೆಂಟ್ ಗಳು ಬಂದಿವೆ. ರೆಡ್ಡಿಟ್ ಬಳಕೆದಾರರು ಹೇಗೆ ಪ್ರತಿಕ್ರಿಯಿಸಿದರು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ: “ಇದು ನನ್ನ ದಿನವನ್ನು ಸುಂದರವಾಗಿಸಿದೆ. ನಂಬಲಸಾಧ್ಯ” ಎಂದು ಬಳಕೆದಾರರೊಬ್ಬರು ಹೇಳಿದದ್ದಾರೆ. “ನನಗೆ ಇದು ಹೆಚ್ಚು ಸಂಬಂಧಿಸುತ್ತದೆ” ಎಂದು ತಮ್ಮ ಭಾವನೆಯನ್ನು ಇನ್ನೊಬ್ಬ ಬಳಕೆದಾರರು ಹಂಚಿಕೊಂಡಿದ್ದಾರೆ. ” ಶಾಂತವಾಗಿ ವರ್ತಿಸಲು ಪ್ರಯತ್ನಿ ಸುತ್ತಿರುವಾಗ ನಿಮ್ಮ ಹೆಜ್ಜೆಯನ್ನು ಗಮನಿಸಲು ಮರೆಯಬಾರದು” ಎಂದು ಮತ್ತೊಬ್ಬ ಬಳಕೆದಾರರು ಪೋಸ್ಟ್ ಮಾಡಿದ್ದಾರೆ. “. ಇದು ಇಂದು ಗೆದ್ದಿದೆ. ಅದನ್ನು ಪ್ರೀತಿಸಿ” ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 5:49 pm, Thu, 4 May 23