ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ. ತಮ್ಮಗರಿವಿಲ್ಲದೆ ಯುವಕರು ಅಪಾಯಗಳನ್ನು ತಂದೊಡ್ಡುತ್ತಿದ್ದಾರೆ. ಕೆಲವರಂತೂ ರೀಲ್ ಮತ್ತು ವೀಕ್ಷಣೆಗಳಿಗಾಗಿ ಏನೇನೋ ಸಾಹಸ ಮಾಡಿ ತಮ್ಮ ಜೀವನವನ್ನೇ ಕಳೆದುಕೊಳ್ಳುತ್ತಿದ್ದಾರೆ. ರಸ್ತೆ ಅಪಘಾತಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿವೆ. ಇತ್ತೀಚಿಗೆ ಇಂತಹದೊಂದು ವಿಡಿಯೋಗೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗಿದ್ದು, ರೀಲ್ ಮಾಡಲು ರಸ್ತೆಯಲ್ಲಿ ಬೈಕ್ ಓಡಿಸುತ್ತಿದ್ದ ಯುವಕರ ಮೇಲೆ ಕಾರೊಂದು ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ.
ಉತ್ತರ ಪ್ರದೇಶದ ಮೀರತ್-ಪುರಿ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ನಡು ರಸ್ತೆಯಲ್ಲೇ ಯುವಕರು ಬೈಕ್ ಓಡಿಸುತ್ತಾ ರೀಲ್ಸ್ ಮಾಡಲು ಮುಂದಾಗಿದ್ದು, ಇದಕ್ಕಿದ್ದಂತೆ ಹಿಂದಿನಿಂದ ಬಂದ ಕಾರು ಬೈಕಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಯುವಕರು ಗಾಳಿಯಲ್ಲಿ ಹಾರಿ ರಸ್ತೆಗೆ ಬಿದ್ದಿದ್ದಾರೆ.
#बिजनौर– बाइक सवार 2 युवकों को रील बनाना पड़ा भारी, रील बनाने के दौरान बाइक सवार युवक हुए घायल, हादसे का वीडियो सोशल मीडिया पर हुआ वायरल, बिजनौर- नजीबाबाद मार्ग पर स्वाहेड़ी के पास हादसा.#Bijnor @bijnorpolice pic.twitter.com/vzfd5NIPi1
— ITM MEDIA 24 (@itmmedia24) August 14, 2024
ಇದನ್ನೂ ಓದಿ: ಇಬ್ಬರು ಯುವತಿಯರ ಜೊತೆ ಕಾರಿನಲ್ಲಿ ಯುವಕನ ಸರಸ ಸಲ್ಲಾಪ; ವಿಡಿಯೋ ವೈರಲ್
ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಗಾಯಾಳು ಯುವಕರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಯುವಕರು ಪ್ರಾಣಾಪಾಯದಿಂದ ಪಾರಾಗಿದ್ದರೂ ಗಾಯಗಳು ತೀವ್ರವಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋ ನೋಡಿದ ನೆಟ್ಟಿಗರು ಸಖತ್ತಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ‘ರಸ್ತೆಯಲ್ಲಿ ಇಂತಹ ಹುಚ್ಚು ಕೃತ್ಯಗಳನ್ನು ಮಾಡಿದರೆ ಹೀಗಾಗುತ್ತದೆ’ ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ