ಉತ್ತರ ಪ್ರದೇಶ: ದುಧ್ವಾ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಡಾನೆಗಳ ಹಿಂಡಿನ ಮುಂದೆ ಯುವಕರ ಗುಂಪೊಂದು ಸೆಲ್ಫಿ ತೆಗೆಯಲು ಹೋಗಿದ್ದಾರೆ. ಆದರೆ ಈ ವೇಳೆ ಆನೆಗಳು ಏಕಾಏಕಿ ಕೋಪಗೊಂಡು ಯುವಕರ ಮೇಲೆ ದಾಳಿ ಮಾಡಲು ಮುಂದಾಗಿದೆ. ತಕ್ಷಣ ಭಯಭೀತರಾದ ಯವಕರು ಅಲ್ಲಿಂದ ಓಡಾಲಾರಂಭಿಸಿದ್ದಾರೆ. ಪ್ರಾಣ ಉಳಿಸಿಕೊಂಡು ಓಡಿ ಬರುತ್ತಿರುವುದು ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ. ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳಲಾಗಿದ್ದು, ಇದೀಗಾ ಎಲ್ಲೆಡೆ ಭಾರೀ ವೈರಲ್ ಆಗಿದೆ.
ಪ್ರಾಣ ಉಳಿಸಿಕೊಳ್ಳಲು ಓಡಿಕೊಂಡು ಬರುತ್ತಿರುವ ವೈರಲ್ ವಿಡಿಯೋ:
#UP के लखीमपुर खीरी जिले में #टस्कर हाथियों के झुंड के साथ सेल्फी लेना युवकों को को काफ़ी महंगा पड़ा ? हाथियों के झुंड ने दौड़ाया,यूवको ने दौड़कर बमुश्किल हाथियों से बचाई अपनी जान ?#वायरल_वीडियो पलिया तहसील के दुधवा टाइगर रिजर्व के पलिया गौरीफंटा मार्ग का है pic.twitter.com/P49c2v1lUo
— Dr.Ahtesham Siddiqui (@AhteshamFIN) July 4, 2023
ಇದನ್ನೂ ಓದಿ: ಹಚ್ಚೆಯ ಹುಚ್ಚು; ‘ಶೌಚಾಲಯ ಸ್ವಚ್ಛಗೊಳಿಸುವ ಕೆಲಸವೂ ಸಿಗುತ್ತಿಲ್ಲ’ ಲಂಡನ್ ಮಹಿಳೆಯ ಅಳಲು
ಲಖಿಂಪುರದ ದುಧ್ವಾ ರಾಷ್ಟ್ರೀಯ ಉದ್ಯಾನವನದಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ಡಾ.ಅಹ್ತೇಷಾಮ್ ಸಿದ್ದಿಕ್ ಎಂಬ ಟ್ವಿಟರ್ ಬಳಕೆದಾರರು ಜುಲೈ 4ರಂದು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ದುಧ್ವಾ ಹುಲಿ ಸಂರಕ್ಷಿತ ಪ್ರದೇಶದ ಪಾಲಿಯಾ ಗೌರಿಫಾಂತ ಮಾರ್ಗದಲ್ಲಿ ಸುಮಾರು 50 ಆನೆಗಳ ಹಿಂಡು ರಸ್ತೆಯಲ್ಲಿ ನಿಂತಿದ್ದವು. ಇಲ್ಲಿ ಅದೇ ವೇಳೆಗೆ ಮೂವರು ಯುವಕರು ಆನೆಗಳ ಸಮೀಪಕ್ಕೆ ಸೆಲ್ಫಿ ತೆಗೆಯಲು ಬಂದಿದ್ದಾರೆ. ಯುವಕರು ಆನೆಗಳ ಹಿಂಡಿನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಆರಂಭಿಸಿದ ವೇಳೆ ಆನೆಗಳು ಆಕ್ರೋಶಗೊಂಡು ಯುವಕರನ್ನು ಓಡಿಸಿಕೊಂಡು ಬಂದಿದೆ. ಆನೆಗಳು ಬರುತ್ತಿರುವುದನ್ನು ಕಂಡು ಮೂವರು ಯುವಕರು ಭಯಗೊಂಡು ಓಡಲು ಪ್ರಾರಂಭಿಸಿದ್ದಾರೆ. ಓಡುವಾಗ ಯುವಕನೊಬ್ಬ ರಸ್ತೆಗೆ ಬಿದ್ದಿದ್ದಾನೆ. ದೂರದಲ್ಲಿ ನಿಂತಿದ್ದ ದಾರಿಹೋಕರು ಗಲಾಟೆ ಮಾಡಲಾರಂಭಿಸಿದಾಗ ಆನೆಗಳು ತಿರುಗಿ ಕಾಡಿಗೆ ಓಡಿ ಹೋಗಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: