ನಾಲ್ಕು ದಿಕ್ಕಿನಿಂದಲೂ ಮೊಸಳೆಗಳು ಜೀಬ್ರಾದ ಮೇಲೆ ದಾಳಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೊಸಳೆಗಳನ್ನು ‘ನೀರಿನ ರಾಕ್ಷಸರು’ ಎಂದು ಕರೆಯಲಾಗುತ್ತದೆ. ಯಾಕೆಂದರೆ ಅವುಗಳ ಹಿಡಿತದಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲ. ಆದರೆ ಜೀಬ್ರಾ ಧೈರ್ಯದಿಂದ ಮೊಸಳೆಯ ದಾಳಿಯಿಂದ ಹೋರಾಡಿ ತನ್ನ ಪ್ರಾಣವನ್ನು ಉಳಿಸಿಕೊಂಡಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದ್ದು, ಜೀಬ್ರಾದ ಧೈರ್ಯ ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ.
ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಒಂದು ಜೀಬ್ರಾವನ್ನು ಕೊಲ್ಲಲು ಮೊಸಳೆಗಳು ಒಂದಾಗಿರುವುದನ್ನು ಕಾಣಬಹುದು. ನಾಲ್ಕು ದಿಕ್ಕಿನಿಂದಲೂ ಮೊಸಳೆಗಳು ದಾಳಿ ಮಾಡುತ್ತಿದ್ದರೂ ಒಂಟಿಯಾಗಿ ಹೋರಾಡಿ ತನ್ನ ಜೀವವನ್ನು ಉಳಿಸಿಕೊಂಡ ಜೀಬ್ರಾದ ವಿಡಿಯೋ ಇಲ್ಲಿದೆ ನೋಡಿ.
— NATURE IS BRUTAL (@TheBrutalNature) January 15, 2024
ಇದನ್ನೂ ಓದಿ: ವರ್ಷದಲ್ಲಿ ಕೇವಲ 8 ತಿಂಗಳು ಕೆಲಸ ಮಾಡಿ 84 ಲಕ್ಷ ರೂಪಾಯಿ ಸಂಬಳ ಗಳಿಸುತ್ತಾಳೆ ಈ ಯುವತಿ
ಈ ವಿಡಿಯೋವನ್ನು ಟ್ವಿಟರ್‌ನ @TheBrutalNature ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ನಿನ್ನೆ(ಜ.15) ಹಂಚಿಕೊಳ್ಳಲಾಗಿದ್ದ ಈ ವಿಡಿಯೋ ಒಂದೆ ದಿನದಲ್ಲಿ 90 ಸಾವಿರಕ್ಕೂ ಹೆಚ್ಚಿನ ವೀಕ್ಷಣೆ ಪಡೆದುಕೊಂಡಿದೆ. ಜೊತೆಗೆ ಸಾಕಷ್ಟು ಜನರು ಲೈಕ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:43 pm, Tue, 16 January 24