AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವಿಮ್ಮಿಂಗ್ ಪೂಲ್‌ ಸಲೂನ್‌ನಲ್ಲಿ ಗ್ರಾಹಕರಿಗೆ ಹೇರ್​ ಕಟ್​​ .. ವೀಡಿಯೋ ನೋಡಿದಾಗ ನಿಮಗೇನಿಸುತ್ತದೆ!? ಅಸಲಿಗೆ ಈ ಕಟ್ಟಿಂಗ್​​ಗೆ ಏನು ಹೆಸರಿಡಬಹುದು?

ಸಲೂನ್ ನಲ್ಲಿ ನೀರು ತುಂಬಿಕೊಂಡಿರುವುದು ವೈರಲ್ ಆಗಿರುವ ವಿಡಿಯೋದಲ್ಲಿ ನೋಡಬಹುದು.. ಗ್ರಾಹಕರು ಕುಳಿತುಕೊಳ್ಳಲು ಕುರ್ಚಿಗಳು, ಗ್ರಾಹಕರಿಗೆ ಬೇಕಾದ ಎಲ್ಲಾ ರೀತಿಯ ಸಲಕರಣೆಗಳು, ಟೇಬಲ್ ಗಳನ್ನು ಸಿದ್ಧಪಡಿಸಲಾಗಿದೆ. ಇಲ್ಲಿ ಸಿಬ್ಬಂದಿ ನೀರಿನಲ್ಲಿ ನಿಂತು ಗ್ರಾಹಕರ ತಲೆಗೂದಲಿಗೆ ಹೇರ್​ ಸ್ಟೈಲಿಂಗ್ ಮಾಡುತ್ತಿದ್ದಾರೆ.

ಸ್ವಿಮ್ಮಿಂಗ್ ಪೂಲ್‌ ಸಲೂನ್‌ನಲ್ಲಿ ಗ್ರಾಹಕರಿಗೆ ಹೇರ್​ ಕಟ್​​ .. ವೀಡಿಯೋ ನೋಡಿದಾಗ ನಿಮಗೇನಿಸುತ್ತದೆ!? ಅಸಲಿಗೆ ಈ ಕಟ್ಟಿಂಗ್​​ಗೆ ಏನು ಹೆಸರಿಡಬಹುದು?
ಟ್ರೆಂಡಿಂಗ್ ವಿಡಿಯೋ ನೋಡಿ: ಮೊಣಕಾಲು ಉದ್ದದ ನೀರಿನಲ್ಲಿ ಕಟಿಂಗ್ ಕಟಿಂಗ್​​!
ಸಾಧು ಶ್ರೀನಾಥ್​
|

Updated on:Jan 16, 2024 | 4:51 PM

Share

ಆಧುನಿಕ ಯುಗದಲ್ಲಿ ಅನೇಕ ವಿಷಯಗಳು ಶರ ವೇಗದಲ್ಲಿ ಮಾರ್ಪಾಡಾಗುತ್ತಿವೆ. ಜನರು ಹೊಸ ತಂತ್ರಜ್ಞಾನ ಮತ್ತು ಆಧುನಿಕ ವಿಧಾನಗಳಿಗೆ ಒಗ್ಗಿಕೊಳ್ಳುತ್ತಿದ್ದಾರೆ. ಇದರೊಂದಿಗೆ ವ್ಯಾಪಾರದಲ್ಲೂ ಹೊಸ ನಡೆಗಳು ಜಾರಿಗೆ ಬರುತಿವೆ. ಒಂದು ಕಾಲದಲ್ಲಿ ನಗರಗಳು ಮತ್ತು ಪಟ್ಟಣಗಳ ಅನೇಕ ಬೀದಿಗಳಲ್ಲಿ ಕ್ಷೌರಿಕ ಅಂಗಡಿಗಳು ಇದ್ದವು. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಕ್ಷೌರ ಮಾಡಲು ಅಲ್ಲಿಗೆ ಹೋಗುತ್ತಾರೆ. ಈಗ ಅವುಗಳ ಸ್ಥಾನವನ್ನು ಹಲವು ಬ್ಯೂಟಿ ಪಾರ್ಲರ್‌ಗಳು, ಸ್ಪಾಗಳು… ಈಗ ಹಲವಾರು ಆಫರ್‌ಗಳೊಂದಿಗೆ ವಿವಿಧ ಕಂಪನಿಗಳ ಸಲೂನ್‌ಗಳು ಈ ವ್ಯವಹಾರವನ್ನು ಪ್ರವೇಶಿಸಿವೆ. ಈ ಸಲೂನ್‌ಗಳು ಜನರನ್ನು ತುಂಬಾ ಆಕರ್ಷಿಸುತ್ತವೆ.. ಅಂತಹ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ನೀವು ವಿಶಿಷ್ಟವಾದ ಥೀಮ್‌ನೊಂದಿಗೆ ಹೊಂದಿಸಲಾದ ಸಲೂನ್ ಅನ್ನು ಕಾಣಬಹುದು.

ಸಲೂನ್ ನಲ್ಲಿ ನೀರು ತುಂಬಿಕೊಂಡಿರುವುದು ವೈರಲ್ ಆಗಿರುವ ವಿಡಿಯೋದಲ್ಲಿ ನೋಡಬಹುದು.. ಗ್ರಾಹಕರು ಕುಳಿತುಕೊಳ್ಳಲು ಕುರ್ಚಿಗಳು, ಗ್ರಾಹಕರಿಗೆ ಬೇಕಾದ ಎಲ್ಲಾ ರೀತಿಯ ಸಲಕರಣೆಗಳು, ಟೇಬಲ್ ಗಳನ್ನು ಸಿದ್ಧಪಡಿಸಲಾಗಿದೆ. ಇಲ್ಲಿ ಸಿಬ್ಬಂದಿ ನೀರಿನಲ್ಲಿ ನಿಂತು ಗ್ರಾಹಕರ ತಲೆಗೂದಲಿಗೆ ಹೇರ್​ ಸ್ಟೈಲಿಂಗ್ ಮಾಡುತ್ತಿದ್ದಾರೆ. ಹೇರ್ ಕಟಿಂಗ್ ಗೆ ಬರುವ ಗ್ರಾಹಕರು ಕೂದಲು ಕತ್ತರಿಸುವಾಗ ನೀರಿನಲ್ಲಿ ಕಾಲು ಇಟ್ಟು ವಿಶೇಷ ಅನುಭವ ಪಡೆಯುತ್ತಾರೆ..ಈ ವಿಶೇಷ ಸಲೂನ್ ಗೆ ಸಂಬಂಧಿಸಿದ ವಿಡಿಯೋ ಸದ್ಯ ಅಂತರ್ಜಾಲದಲ್ಲಿ ವಿಹರಿಸುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಇದನ್ನು ತುಂಬಾ ಇಷ್ಟಪಡುತ್ತಿದ್ದಾರೆ.

ಸಂಪೂರ್ಣ ಸಲೂನ್ ಅನ್ನು ನೀರಿನ ಥೀಮ್ ಸುತ್ತಲೂ ವಿನ್ಯಾಸಗೊಳಿಸಲಾಗಿದೆ. ಅಲ್ಲದೆ, ಸಿಬ್ಬಂದಿ ನೀರಿನಲ್ಲಿ ನಿಂತು ಗ್ರಾಹಕರ ಕೂದಲನ್ನು ಕತ್ತರಿಸುತ್ತಾರೆ. ವ್ಯಕ್ತಿಯ ಕತ್ತರಿಸಿದ ಕೂದಲು ನೀರಿನಲ್ಲಿ ಬೀಳುತ್ತದೆ ಮತ್ತು ತಕ್ಷಣವೇ ಬಲೆ ಬಳಸಿ, ಆ ನೀರನ್ನು ಸ್ವಚ್ಛಗೊಳಿಸುವುದನ್ನು ನೋಡಬಹುದು.

@radenthebarber.lsm ಮತ್ತು @radenthebarber ಎಂಬ Instagram ಖಾತೆಯಿಂದ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಈ ಸಲೂನ್‌ಗೆ ಭೇಟಿ ನೀಡಿದ ನಂತರ ಪ್ರತಿಯೊಬ್ಬ ಗ್ರಾಹಕರು ಈಜುಕೊಳದಲ್ಲಿ ಕುಳಿತುಕೊಂಡಿರುವಂತೆ ಭಾವಿಸುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ. ನೆಟಿಜನ್‌ಗಳು ಈ ವಿಡಿಯೋಗೆ ತಮಾಷೆಯ ಪ್ರತಿಕ್ರಿಯೆಗಳೊಂದಿಗೆ ಕಾಮೆಂಟ್ ಮಾಡುತ್ತಿದ್ದಾರೆ. ಅಲ್ಲದೇ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನರ ಗಮನ ಸೆಳೆದಿದೆ.

ಮತ್ತಷ್ಟು ವೈರಲ್ ವಿಡಿಯೋಗಳನ್ನು ನೋಡಲು  ಇಲ್ಲಿ ಕ್ಲಿಕ್ ಮಾಡಿ

Published On - 4:48 pm, Tue, 16 January 24

ಬಿಗ್ ಬಾಸ್ ಮನೆಯಲ್ಲಿ ಮೊಟ್ಟೆ ಕಳ್ಳತನ: ಗಿಲ್ಲಿಯನ್ನೇ ಯಾಮಾರಿಸಿದ ಕಳ್ಳ ಯಾರು
ಬಿಗ್ ಬಾಸ್ ಮನೆಯಲ್ಲಿ ಮೊಟ್ಟೆ ಕಳ್ಳತನ: ಗಿಲ್ಲಿಯನ್ನೇ ಯಾಮಾರಿಸಿದ ಕಳ್ಳ ಯಾರು
ಮೋದಿಯನ್ನು ಕಾರಲ್ಲಿ ಕೂರಿಸಿಕೊಂಡು ತಾವೇ ಡ್ರೈವ್ ಮಾಡಿದ ಜೋರ್ಡಾನ್ ಪ್ರಿನ್ಸ್
ಮೋದಿಯನ್ನು ಕಾರಲ್ಲಿ ಕೂರಿಸಿಕೊಂಡು ತಾವೇ ಡ್ರೈವ್ ಮಾಡಿದ ಜೋರ್ಡಾನ್ ಪ್ರಿನ್ಸ್
‘ಸುಳ್ಳಿ-ಯೋಗ್ಯತೆ ಇಲ್ಲದವಳು’: ಚೈತ್ರಾ-ರಜತ್ ಮಾರಾಮಾರಿ
‘ಸುಳ್ಳಿ-ಯೋಗ್ಯತೆ ಇಲ್ಲದವಳು’: ಚೈತ್ರಾ-ರಜತ್ ಮಾರಾಮಾರಿ
ಬೆಳಗಾವಿ ಅಧಿವೇಶನದಲ್ಲೂ ಸದ್ದು ಮಾಡಿದ ಮೊಟ್ಟೆ ಕ್ಯಾನ್ಸರ್ ಸುದ್ದಿ
ಬೆಳಗಾವಿ ಅಧಿವೇಶನದಲ್ಲೂ ಸದ್ದು ಮಾಡಿದ ಮೊಟ್ಟೆ ಕ್ಯಾನ್ಸರ್ ಸುದ್ದಿ
ಕ್ಯಾಮರೂನ್ ಗ್ರೀನ್‌ ವೇತನದಿಂದ 7.20 ಕೋಟಿ ರೂ. ಕಡಿತ
ಕ್ಯಾಮರೂನ್ ಗ್ರೀನ್‌ ವೇತನದಿಂದ 7.20 ಕೋಟಿ ರೂ. ಕಡಿತ
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!