Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ವ್ಹಾವ್…  ಈ ಯುವಕನ ಅದ್ಭುತ ನೃತ್ಯಕ್ಕೆ ತಲೆಬಾಗಲೇಬೇಕು

ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಒಂದಲ್ಲಾ ಒಂದು ಬಗೆಯ ಡಾನ್ಸ್ ವಿಡಿಯೋಗಳು ಹರಿದಾಡುತ್ತಿರುತ್ತವೆ. ಅದರಲ್ಲಿ ಕೆಲವೊಬ್ಬರ ನೃತ್ಯಗಳು ಹುಚ್ಚುತನವೆಂದು ಕಂಡ್ರೆ, ಇನ್ನೂ ಕೆಲವೊಬ್ಬರ ಡಾನ್ಸ್ ವಿಡಿಯೋಗಳು ನಮ್ಮ  ಮನ ಗೆಲ್ಲುತ್ತವೆ.  ಅದೇ ರೀತಿ ಇಲ್ಲೊಬ್ಬ ಯುವಕ ತನ್ನ ಸ್ಟ್ರೀಟ್ ಡಾನ್ಸ್ ಶೋನಲ್ಲಿ  ಮೈಕಲ್ ಜಾಕ್ಸನ್ ಅವರಂತೆಯೇ ಸಖತ್ ಸ್ಟೆಪ್ಸ್ ಹಾಕಿದ್ದು, ಆತನ ನೃತ್ಯ ಶೈಲಿಗೆ ನೆಟ್ಟಿಗರು ಫುಲ್ ಬೋಲ್ಡ್ ಆಗಿದ್ದಾರೆ.

Viral Video: ವ್ಹಾವ್...  ಈ ಯುವಕನ ಅದ್ಭುತ ನೃತ್ಯಕ್ಕೆ ತಲೆಬಾಗಲೇಬೇಕು
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 16, 2024 | 5:17 PM

ಅದೆಷ್ಟೋ ಜನರು ತಮ್ಮ ನೃತ್ಯ ಕಲೆಯಿಂದಲೇ ಜನರನ್ನು ಮನರಂಜಿಸುತ್ತಿರುತ್ತಾರೆ. ಕೆಲವೊಬ್ಬರು ತಮ್ಮ ಈ ಪ್ರತಿಭೆಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಪ್ರದರ್ಶಿಸಿದರೆ, ಇನ್ನೂ ಕೆಲವರು ಸ್ಟ್ರೀಟ್ ಡಾನ್ಸ್ ಶೋಗಳನ್ನು ನೀಡುವುದರ ಮೂಲಕ, ಜನರನ್ನು ಮನರಂಜಿಸುತ್ತಾ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸುತ್ತಾರೆ. ಹೀಗೆ ವಯಸ್ಸು, ದೇಹ ತೂಕ ಇದ್ಯಾವುದನ್ನು ಲೆಕ್ಕಿಸದೆ, ಅದ್ಭುತವಾಗಿ ನೃತ್ಯ ಮಾಡಿ ಆನಂದಿಸುತ್ತಾ ಬೇರೆಯವರಿಗೂ ಖುಷಿಯನ್ನು ಹಂಚುವ ಪ್ರತಿಭಾವಂತರು ನಮ್ಮಲ್ಲಿದ್ದಾರೆ. ಇವರೆಲ್ಲರ ಅತ್ಯದ್ಭುತ ನೃತ್ಯವನ್ನು ನೋಡುವ ನೋಡುಗರ ಮನಸ್ಸು ಕೂಡಾ ಖುಷಿಯಿಂದ ಕುಣಿಯುತ್ತದೆ. ಸದ್ಯ ಅದೇ ರೀತಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಯುವಕನೊಬ್ಬ ಮೈಕಲ್ ಜಾಕ್ಸನ್ ನಂತೆಯೇ  ಸಖತ್ ಆಗಿ ಡಾನ್ಸ್ ಮಾಡಿದ್ದು, ಈತನ ಡಾನ್ಸ್ಗೆ  ನೆಟ್ಟಿಗರು ಫುಲ್ ಬೋಲ್ಡ್ ಆಗಿದ್ದಾರೆ.

ಈ ವಿಡಿಯೋವನ್ನು @Enezator  ಎಂಬ  X ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಲೆಜೆಂಡರಿ ಶೋʼ ಎಂಬ ಶೀರ್ಷಿಕೆಯನ್ನು ಸಹ ಬರೆದುಕೊಳ್ಳಲಾಗಿದೆ. . ವಿಡಿಯೋದಲ್ಲಿ ಯುವಕನೊಬ್ಬ ಅದ್ಭುತವಾಗಿ ತನ್ನ ಡಾನ್ಸ್ ಕಲೆಯನ್ನು ಪ್ರದರ್ಶಿಸುತ್ತಿರುವ  ಸ್ಟ್ರೀಟ್ ಡಾನ್ಸ್ ಶೋ ದೃಶ್ಯವನ್ನು ಕಾಣಬಹುದು.

ವೈರಲ್ ವಿಡಿಯೋದಲ್ಲಿ ಯುವಕನೊಬ್ಬ ತಲೆಗೆ ಟೋಪಿ, ಕಪ್ಪು ಬಣ್ಣದ ಪ್ಯಾಂಟ್ ಶರ್ಟ್ ಮತ್ತು ಶೂ ಧರಿಸಿ,  ಯಾವುದೋ ಒಂದು ಮಾಲ್ ಪಕ್ಕದಲ್ಲಿ ಥೇಟ್ ಮೈಕಲ್ ಜಾಕ್ಸನ್ ಅವರಂತೆಯೇ ಸಖತ್ ಸ್ಟೆಪ್ಸ್ ಹಾಕುತ್ತಾ ಡಾನ್ಸ್ ಮಾಡುತ್ತಿರುವ ಅದ್ಭುತ ದೃಶ್ಯವಾವಳಿಯನ್ನು ಕಾಣಬಹುದು.

ಇದನ್ನೂ ಓದಿ: Viral Video: ಮೊಸಳೆಗಳ ಗುಂಪಿನ ಮಧ್ಯೆ ಧೈರ್ಯದಿಂದ ಹೋರಾಡಿ ಪ್ರಾಣ ಉಳಿಸಿಕೊಂಡ ಜೀಬ್ರಾ; ವಿಡಿಯೋ ಇಲ್ಲಿದೆ ನೋಡಿ

ಜನವರಿ 15 ರಂದು ಹಂಚಿಕೊಳ್ಳಲಾದ ಈ ವಿಡಿಯೋ 6.3 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 39 ಸಾವಿರ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ನೆಟ್ಟಿಗರು ಕಮೆಂಟ್ಸ್ ಮೂಲಕ ಈ ಯುವಕನ ಅತ್ಯದ್ಭುತ ಡಾನ್ಸ್ ಪ್ರದರ್ಶನಕ್ಕೆ  ಮುಚ್ಚುಗೆಯನ್ನು ಸೂಚಿಸಿದ್ದಾರೆ. ಒಬ್ಬ ಬಳಕೆದಾರರು ʼಅದ್ಭುತ ನೃತ್ಯ ಪ್ರದರ್ಶನʼ ಅಂತ ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಮೈಕಲ್ ಜಾಕ್ಸನ್ ಅವರಂತೆಯೇ ಡಾನ್ಸ್ ಸ್ಟೆಪ್ಸ್ ಹಾಕಿದ್ದಾನೆʼ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಬಹಳ ಸೊಗಸಾಗಿದೆ, ಈ ಯುವಕನ ಪ್ರತಿಭೆಗೆ ಮೆಚ್ಚಲೇಬೇಕುʼ ಎಂದು ಕಮೆಂಟ್  ಮಾಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಗರದಲ್ಲೆಲ್ಲ ವಿಜಯೇಂದ್ರ ಹೋರ್ಡಿಂಗ್ ಮತ್ತು ಬ್ಯಾನರ್​ಗಳು
ನಗರದಲ್ಲೆಲ್ಲ ವಿಜಯೇಂದ್ರ ಹೋರ್ಡಿಂಗ್ ಮತ್ತು ಬ್ಯಾನರ್​ಗಳು
VIDEO: ನೋಡ್ಕೊ ಗುರು... ನಾವೇನು ಫಿಕ್ಸಿಂಗ್ ಮಾಡ್ಕೊಂಡಿಲ್ಲ..!
VIDEO: ನೋಡ್ಕೊ ಗುರು... ನಾವೇನು ಫಿಕ್ಸಿಂಗ್ ಮಾಡ್ಕೊಂಡಿಲ್ಲ..!
ಯತ್ನಾಳ್ ಖುದ್ದು ಮಾತಾಡುತ್ತಿಲ್ಲ, ಅವರ ಬಗ್ಗೆ ಏನು ಮಾತಾಡೋದು: ಸಚಿವ
ಯತ್ನಾಳ್ ಖುದ್ದು ಮಾತಾಡುತ್ತಿಲ್ಲ, ಅವರ ಬಗ್ಗೆ ಏನು ಮಾತಾಡೋದು: ಸಚಿವ
VIDEO: ಇಡೀ ಪಂದ್ಯದ ಚಿತ್ರಣ ಬದಲಿಸಿದ ಆ ಒಂದು ಕ್ಯಾಚ್
VIDEO: ಇಡೀ ಪಂದ್ಯದ ಚಿತ್ರಣ ಬದಲಿಸಿದ ಆ ಒಂದು ಕ್ಯಾಚ್
ಲಾರಿ ಮುಷ್ಕರ ನಿಲ್ಲದಿದ್ದರೆ ಎಪಿಎಂಸಿಗಳು ಬಂದ್ ಆಗುವ ಸಾಧ್ಯತೆ?
ಲಾರಿ ಮುಷ್ಕರ ನಿಲ್ಲದಿದ್ದರೆ ಎಪಿಎಂಸಿಗಳು ಬಂದ್ ಆಗುವ ಸಾಧ್ಯತೆ?
ಜಾತಿ ಗಣತಿ ಅವಶ್ಯಕತೆ ಇಲ್ಲ ಎಂದ ಸಾರ್ವಜನಿಕರು: ಮೈಸೂರಿನಲ್ಲಿ ಜನಾಕ್ರೋಶ
ಜಾತಿ ಗಣತಿ ಅವಶ್ಯಕತೆ ಇಲ್ಲ ಎಂದ ಸಾರ್ವಜನಿಕರು: ಮೈಸೂರಿನಲ್ಲಿ ಜನಾಕ್ರೋಶ
ಮೂಡಿಗೆರೆ: ಮಾಕೋನಹಳ್ಳಿ ಗ್ರಾಮದಲ್ಲಿ ಮನೆಗೆ ನುಗ್ಗಿ ಕಾಡಾನೆ ದಾಂಧಲೆ
ಮೂಡಿಗೆರೆ: ಮಾಕೋನಹಳ್ಳಿ ಗ್ರಾಮದಲ್ಲಿ ಮನೆಗೆ ನುಗ್ಗಿ ಕಾಡಾನೆ ದಾಂಧಲೆ
ತಮ್ಮ ನಿರ್ದೇಶನದ ಮೊದಲ ಚಿತ್ರದ ಪ್ರಚಾರಕ್ಕೆ ಹೊಸ ತಂತ್ರ ಬಳಸಿದ ರಂಜನಿ
ತಮ್ಮ ನಿರ್ದೇಶನದ ಮೊದಲ ಚಿತ್ರದ ಪ್ರಚಾರಕ್ಕೆ ಹೊಸ ತಂತ್ರ ಬಳಸಿದ ರಂಜನಿ
ಮುಷ್ಕರ ಕಾರಣ ಮಹಾರಾಷ್ಟ್ರದ ಟ್ರಕ್ಕನ್ನು ಟೋಲ್ ಗೇಟ್ ಬಳಿ ತಡೆಯಲಾಗಿತ್ತು
ಮುಷ್ಕರ ಕಾರಣ ಮಹಾರಾಷ್ಟ್ರದ ಟ್ರಕ್ಕನ್ನು ಟೋಲ್ ಗೇಟ್ ಬಳಿ ತಡೆಯಲಾಗಿತ್ತು
ಗರೀಬ್​ ರಥ್​ ಎಕ್ಸ್​ಪ್ರೆಸ್​ ರೈಲನ್ನು ಹಳಿ ತಪ್ಪಿಸುವ ಯತ್ನ ವಿಫಲ
ಗರೀಬ್​ ರಥ್​ ಎಕ್ಸ್​ಪ್ರೆಸ್​ ರೈಲನ್ನು ಹಳಿ ತಪ್ಪಿಸುವ ಯತ್ನ ವಿಫಲ