Viral Video: ನೈಲ್ ಕಟರ್ನಲ್ಲೂ ಚೈಲ್ಡ್ ಸೇಫ್ಟಿ ಲಾಕ್ ಫೀಚರ್ ಇದೆ ಗೊತ್ತಾ?
ನಮ್ಮ ಮನೆಯಲ್ಲಿರುವ ಅನೇಕ ದಿನಬಳಕೆ ವಸ್ತುಗಳ ಬಗ್ಗೆ ನಮಗೆ ಗೊತ್ತಿಲ್ಲದ ಹಲವು ವಿಷಯಗಳಿರುತ್ತವೆ. ಆಗಾಗ್ಗೆ ಈ ವಿಷಯಗಳ ಕುರಿತ ಆಸಕ್ತಿದಾಯಕ ಸಂಗತಿಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಅದೇ ರೀತಿಯ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ಇದ್ರಲ್ಲಿ ನಾವು ಉಗುರು ಕತ್ತರಿಸಲು ಬಳಸುವಂತಹ ನೈಲ್ ಕಟರ್ನಲ್ಲಿಯೂ ಚೈಲ್ಡ್ ಸೇಫ್ಟಿ ಲಾಕ್ ಫೀಚರ್ ಇದೆ ಎಂಬ ಆಸಕ್ತಿದಾಯಕ ಮಾಹಿತಿಯನ್ನು ತಿಳಿಸಿಕೊಟ್ಟಿದ್ದಾರೆ.
ಈ ಮಕ್ಕಳ ಸುರಕ್ಷತೆಯ ಬಗ್ಗೆ ಎಷ್ಟು ಕಾಳಜಿ ವಹಿಸಿದರೂ ಕಮ್ಮಿಯೇ. ಹೀಗಾಗಿ ವಮಕ್ಕಳ ಸುರಕ್ಷತಾ ದೃಷ್ಟಿಯಿಂದ ಕಾರುಗಳಿಂದ ಹಿಡಿದು ಮನೆಯ ಡೋರ್ ವರೆಗೂ ಚೈಲ್ಡ್ ಸೇಫ್ಟಿ ಲಾಕ್ ವ್ಯವಸ್ಥೆ ಇರುತ್ತದೆ. ಮನೆಯಲ್ಲಿರುವ ಕೆಲವು ಮುಖ್ಯ ವಸ್ತುಗಳಲ್ಲಿ ಚೈಲ್ಡ್ ಸೇಫ್ಟಿ ಲಾಕ್ ವ್ಯವಸ್ಥೆ ಇದ್ರೂ ಕೂಡಾ, ಚಾಕು, ಕತ್ತರಿಯಂತಹ ಮಕ್ಕಳಿಗೆ ಅಪಾಯಕಾರಿಯಾಗಿರುವ ವಸ್ತುಗಳಲ್ಲಿ ಯಾವುದೇ ಸೇಫ್ಟಿ ಲಾಕ್ ವ್ಯವಸ್ಥೆ ಇರೋದಿಲ್ಲ. ಇದೇ ಕಾರಣಕ್ಕೆ ಪೋಷಕರು ಆದಷ್ಟು ಇಂತಹ ವಸ್ತುಗಳನ್ನು ಮಕ್ಕಳ ಕೈಗೆ ಸಿಗದೆ ಇರುವಂತಹ ಜಾಗಗಳಲ್ಲಿ ಇಟ್ಟಿರುತ್ತಾರೆ. ಕತ್ತರಿಯಂತೆ ನೈಲ್ ಕಟರ್ಗಳಲ್ಲಿ ಆಟವಾಡಲು ಹೋದ್ರೆ ಮಕ್ಕಳ ಕೈಗೆ ಸಣ್ಣ ಪುಟ್ಟ ಗಾಯಗಳಾಗುತ್ತವೆ. ಹೀಗಾಗಿ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಈ ನೈಲ್ ಕಟರ್ಗಳಲ್ಲಿಯೂ ಚೈಲ್ಡ್ ಲಾಕ್ ಸೇಫ್ಟಿ ಲಾಕ್ ವ್ಯವಸ್ಥೆಯನ್ನು ಇಡಲಾಗಿದೆ ಎಂಬ ವಿಷ್ಯ ನಿಮ್ಗೆ ಗೊತ್ತಾ? ಅಲ್ಲಾ ನಾವು ಇಷ್ಟು ವರ್ಷಗಳಿಂದ ನೈಲ್ ಕಟರ್ ಉಪಯೋಗ ಮಾಡ್ತಿದ್ರೂ , ಇದರಲ್ಲಿರುವ ಸುರಕ್ಷತಾ ವೈಶಿಷ್ಟ್ಯದ ಬಗ್ಗೆ ಗೊತ್ತೇ ಇರ್ಲಿಲ್ವೇ, ಅಷ್ಟಕ್ಕೂ ಈ ಫೀಚರ್ ಹೇಗೆ ವರ್ಕ್ ಆಗುತ್ತೇ ಅಂತ ಯೋಚ್ನೆ ಮಾಡ್ತಿದ್ದೀರಾ? ಹಾಗಿದ್ರೆ ಈ ವಿಡಿಯೋವನ್ನು ಒಮ್ಮೆ ನೋಡಿ.
ಈ ವಿಡಿಯೋವನ್ನು ಉದಯ್ (@drtech.kannada) ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ವಿಡಿಯೋದಲ್ಲಿ ಅವರು ನೈಲ್ ಕಟರ್ ಚೈಲ್ಡ್ ಸೇಫ್ಟಿ ಲಾಕ್ ವ್ಯವಸ್ಥೆಯ ಬಗ್ಗೆ ಒಂದೊಳ್ಳೆ ಮಾಹಿತಿಯನ್ನು ತಿಳಿಸಿಕೊಟ್ಟಿದ್ದಾರೆ.
View this post on Instagram
ವೈರಲ್ ವಿಡಿಯೋದಲ್ಲಿ ಉದಯ್ ಅವರು ಒಂದು ನೈಲ್ ಕಟರ್ ಹಿಡಿದುಕೊಂಡು ನೈಲ್ ಕಟರ್ ಅನ್ನು ಸೇಫ್ಟಿ ಲಾಕ್ ಮಾಡ್ಬೇಕಂದ್ರೆ, ಏನು ಮಾಡ್ಬೇಕು ಎಂಬ ಮಾಹಿತಿಯನ್ನು ತಿಳಿಸಿಕೊಡುತ್ತಿರುವುದನ್ನು ಕಾಣಬಹುದು. ಮೊದಲಿಗೆ ಅವರು ನೈಲ್ ಕಟರ್ ಹ್ಯಾಂಡಲ್ ಹಿಡಿದುಕೊಂಡು ಅದನ್ನು ಸ್ವಲ್ಪ ಮೇಲಕ್ಕೆ ತಳ್ಳುವ ಮುಖಾಂತರ ಉಗುರು ಕತ್ತರಿಸುವಂತಹ ಆ ಬ್ಲೇಡ್ಗಳ ಮಧ್ಯೆ ಇರುವ ಗ್ಯಾಪ್ ಅನ್ನು ಕ್ಲೋಸ್ ಮಾಡ್ತಾರೆ. ಅದೇ ರೀತಿ ಹ್ಯಾಂಡಲ್ ಅನ್ನು ಲಾಂಗ್ ಪ್ರೆಸ್ ಮಾಡಿ ಕೆಳಗೆ ತಳ್ಳುವ ಮುಖಾಂತರ ಅನ್ ಲಾಕ್ ಮಾಡುತ್ತಾ, ನೈಲ್ ಕಟರ್ ಚೈಲ್ಡ್ ಸೇಫ್ಟಿ ಲಾಕ್ ವ್ಯವಸ್ಥೆಯ ಬಗ್ಗೆ ತಿಳಿಸಿಕೊಟ್ಟಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಎಂಟು ಬಗೆಯ ಮಾಂಸಹಾರಿಗಳಿದ್ದಾರಂತೆ! ನಿಮ್ಗೊತ್ತಾ?
ಮೂರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 3 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 66 ಸಾವಿರಕ್ಕೂ ಹೆಚ್ಚು ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼನನ್ಗೆ ಇತರ ಒಂದು ವಿಷ್ಯ ಇದೆ ಅಂತಾನೇ ಗೊತ್ತಿರ್ಲಿಲ್ಲʼ ಅಂತ ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈ ಟಿಪ್ಸ್ ಫಾಲೋ ಮಾಡೋಕೆ ಹೋಗಿ ಯಶಸ್ವಿಯಾಗಿ ನೈಲ್ ಕಟರ್ ತುಂಡು ಮಾಡಿಬಿಟ್ಟಿʼ ಅಂತ ತಮಾಷೆ ಮಾಡಿದ್ದಾರೆ. ಇನ್ನೂ ಅನೇಕರು ಇಂತಹ ಒಳ್ಳೆಯ ಮಾಹಿತಿಯನ್ನು ಶೇರ್ ಮಾಡಿದ್ದಕ್ಕಾಗಿ ನಿಮಗೆ ಧನ್ಯವಾದಗಳು ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ