ಮದುವೆ ಎಂದರೆ ನೂರಾರು ಮಂದಿ ಒಟ್ಟಿಗೆ ಸೇರುವುದು, ಹರಟೆ ಹೊಡೆಯುವುದು, ಒಟ್ಟಿಗೆ ಊಟ ಮಾಡುವುದು ಇದೆಲ್ಲಾ ಸರಿ. ಆದರೆ ಪಾತ್ರೆಗಳನ್ನು ಮಾತ್ರ ನೀರಿನಲ್ಲಿ ತೊಳೆಯಲ್ಲ ಎಂದರೆ ವಿಚಿತ್ರ ಎನಿಸಬಹುದು. ಹೌದು, ಇದೀಗ ಮಲೇಷ್ಯಾದ ಹಳ್ಳಿಯೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಲ್ಲಿ ಜನರು ಪಾತ್ರೆಗಳನ್ನು ಸೋಪಿನಿಂದ ತೊಳೆಯುವುದಿಲ್ಲ, ಅಥವಾ ನೀರಿನಿಂದ ಸ್ವಚ್ಛಗೊಳಿಸುವುದಿಲ್ಲ. ಬದಲಾಗಿ ಮಣ್ಣು ಅಥವಾ ಮರಳಿನಿಂದ ಸ್ವಚ್ಛಗೊಳಿಸಲಾಗುತ್ತದೆ.
ಈ ವಿಡಿಯೋವನ್ನು ಕೆಲಬ್ ಸ್ಟಾನ್ ಮೆನಾಂತು ಸಿತಿ ಎಂಬ ವ್ಯಕ್ತಿ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ತಾವು ಈ ವಿಧಾನವನ್ನು ಮೊದಲ ಬಾರಿಗೆ ನೋಡಿರುವುದಾಗಿ ಹೇಳಿಕೊಂಡಿದ್ದಾರೆ. ಮಣ್ಣು ಅಥವಾ ಮರಳಿನಿಂದ ಸ್ವಚ್ಛಗೊಳಿಸಿದರೆ ನೀರಿನಿಂದ ತೊಳೆದಿರುವುದಕ್ಕಿಂತಲೂ ಸ್ವಚ್ಛವಾಗುತ್ತದೆ ಎಂದು ಹೇಳಿದ್ದಾರೆ.
First time tengok cara cuci pinggan masa kenduri macam ni.. Tapi function la.. lagi senang nak hilangkan minyak dekat pinggan tu.. pic.twitter.com/jhsNuz48xh
— Kelab Stan Menantu Siti (@IniAlalalannn) May 5, 2023
ಹಿಂದಿನ ಕಾಲದಲ್ಲಿ ಮನೆಯಲ್ಲಿ ಶುಭ ಸಮಾರಂಭಗಳು ನಡೆದಾಗ ಹೀಗೆಯೇ ಪಾತ್ರೆಗಳನ್ನು ಸ್ವಚ್ಛಗೊಳಿಸುತ್ತಿದ್ದರು ಎಂದು ಬರೆದಿದ್ದಾರೆ. ಮತ್ತೊಮ್ಮೆ ಹಳೆಯ ವಿಧಾನಗಳು ವೈರಲ್ ಆಗುತ್ತಿವೆ.
ಮತ್ತಷ್ಟು ಓದಿ: Viral Video: ಚರಂಡಿಯಲ್ಲಿ ತೇಲಿಬಂತು ಕಂತೆ ಕಂತೆ ಹಣ, ಗಲೀಜು ಲೆಕ್ಕಿಸದೆ ಧುಮುಕಿದ ಜನ
ಇನ್ನೂ ಭಾರತದಲ್ಲಿ ಕೆಲವು ಹಳ್ಳಿಗಳಲ್ಲಿ ಬೂಧಿಯಲ್ಲಿ ಪಾತ್ರೆಯನ್ನು ತಿಕ್ಕುವ ಪದ್ಧತಿ ಇನ್ನೂ ಇದೆ. ಆದರೆ ಪಾತ್ರೆಗಳನ್ನು ತೊಳೆಯಲು ನೀರನ್ನು ಬಳಸೇ ಬಳಸುತ್ತಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ