ಹಣ್ಣುಗಳ ಚಹಾ; ‘ನನ್ನ ಡಿಗ್ರೀ ಸರ್ಟಿಫಿಕೇಟ್ ಕೊಡುತ್ತೇನೆ, ಅದನ್ನೂ ಹಾಕಿ ಕುದಿಸಿ ಅಂಕಲ್!’
Tea : ಅಯ್ಯೋ ಅಂಕಲ್ ಚೀಸ್ ಒಂದು ಬಾಕಿ ಇದೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಅಯ್ಯೋ ನೀವು ನಿಂಬೆಹಣ್ಣು ಹಾಕಲು ಮರೆತಿದ್ದೀರಿ ಎಂದಿದ್ದಾರೆ ಮತ್ತೊಬ್ಬರು. ಒಟ್ಟಿನಲ್ಲಿ ಆರ್ಐಪಿ ಚಹಾ ಎಂದು ಹುಯಿಲೆಬ್ಬಿಸಿದ್ದಾರೆ ನೆಟ್ಟಿಗರು.
Viral Video : ಮೋಡಬಿಸಿಲು, ಸಂಜೆಗೆ ಧೋ ಎಂದು ಸುರಿಯುವ ಮಳೆಗೆ ಎರಡಲ್ಲ ನಾಲ್ಕು ಸಲವಾದರೂ ಬಿಸಿಬಿಸೀ ಚಹಾ ಹೀರಬೇಕು ಎನ್ನಿಸುತ್ತದೆ. ನೂರಾರು ಪರಿಮಳದಲ್ಲಿ ಚಹಾ ಎಂಬ ಅಮೃತವು ಇಂದು ನಮ್ಮನ್ನು ಮುಳುಗೇಳಿಸುತ್ತಿದ್ದರೂ ಮತ್ತೆ ಮತ್ತೆ ನಮ್ಮ ಜೀವ ಹಾತೊರೆಯುವುದು ಅದೇ ಸರಳ ಮತ್ತು ರುಚಿಕಟ್ಟಾದ ಸಾಂಪ್ರದಾಯಿಕ ಚಹಾದೆಡೆಗೇ. ಆದರೆ ಈ ಕೆಳಗಿನ ವಿಡಿಯೋ ನೋಡಿ ಒಮ್ಮೆ.
ಇದನ್ನೂ ಓದಿView this post on Instagram
ನೋಡಿದಿರಲ್ಲ? ಬಾಳೆಹಣ್ಣು, ಸೇಬು, ಸಪೋಟ ಹಣ್ಣಿನ ತುಣುಕುಗಳನ್ನು ಕುದಿಯುತ್ತಿರುವ ಚಹಾದೊಳಗೆ ಹಾಕಿ ಮತ್ತಷ್ಟು ಕುದಿಸುತ್ತಾನೆ ಈ ಬೀದಿವ್ಯಾಪಾರಿ. ನಿಜಕ್ಕೂ ನಿಮಗೆ ಇಂಥ ಚಹಾ ಕುಡಿಯಬೇಕು ಅನ್ನಿಸುತ್ತಿದೆಯೇ? ಈತನಕ ಈತನಕ 20 ದಶಲಕ್ಷಕ್ಕೂ ಹೆಚ್ಚು ಜನ ಈ ವಿಡಿಯೋ ನೋಡಿದ್ದಾರೆ. RIP TEA ಎಂದು ಚಹಾಕ್ಕೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ಧಾರೆ ಅವರೆಲ್ಲ.
ಇದನ್ನೂ ಓದಿ : ಫುಚ್ಕಾ ಚಾಪ್ ತಯಾರಿಸುತ್ತಿರುವ ಮಹಿಳೆ; ಅಯ್ಯಯ್ಯೋ ಎನ್ನುತ್ತಿರುವ ನೆಟ್ಟಿಗರು
ಅಯ್ಯೋ ಅಂಕಲ್ ಚೀಸ್ ಒಂದು ಬಾಕಿ ಇದೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಅಯ್ಯೋ ನೀವು ನಿಂಬೆಹಣ್ಣು ಹಾಕಲು ಮರೆತಿದ್ದೀರಿ ಅಂಕಲ್ ಎಂದಿದ್ದಾರೆ ಮತ್ತೊಬ್ಬರು. ಇನ್ನೇನೆಲ್ಲ ಹಣ್ಣುಗಳು ಉಳಿದಿವೆ ಇದಕ್ಕೆ ಹಾಕಲು ಎಂದು ಮಗದೊಬ್ಬರು ಕೇಳಿದ್ದಾರೆ.
ಇದನ್ನೂ ಓದಿ : ಅಬ್ಬಾ ಕೆಲಸ ಮುಗೀತಪ್ಪಾ! ಬಿಬಿಸಿ ಸುದ್ದಿವಾಚಕಿಯ ಲೈವ್ ನ್ಯೂಸ್ ತುಣುಕು ವೈರಲ್
ಇಂಥ ಚಹಾ ಬೇಕು ಎಂದು ಆರ್ಡರ್ ಕೊಟ್ಟವನಿಗೂ ಮತ್ತು ಈ ಚಹಾ ಮಾಡಿಕೊಡುತ್ತಿರುವನಿಗೂ ಮೈಹುಷಾರಿಲ್ಲ ಎಂದೆನ್ನಿಸುತ್ತದೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಅಂಕಲ್ ನೀವು ಫ್ರೂಟ್ ಚಾಟ್ ಮಾಡುತ್ತಿರುವಿರೋ ಚಹಾ ಮಾಡುತ್ತಿರುವಿರೋ ಎಂಬ ಗೊಂದಲ ಉಂಟಾಗುತ್ತಿದೆ ಎಂದಿದ್ಧಾರೆ ಮತ್ತೊಬ್ಬರು. ನನ್ನ ಡಿಗ್ರೀ ಸರ್ಟಿಫಿಕೇಟ್ ಅನ್ನೂ ಕೊಡುತ್ತೇನೆ, ಹಾಕಿ ಕುದಿಸಿ ಎಂದು ಮತ್ತೊಬ್ಬರು ಹೇಳಿದ್ದಾರೆ.
ಇದನ್ನು ಓದುತ್ತಿರುವ ನಿಮಗೆ ಏನೆನ್ನಿಸುತ್ತದೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:34 am, Mon, 8 May 23