AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಸಿಗೆಯ ಮದುವೆಗಳಲ್ಲಿ ನೀವು ಆಕರ್ಷಕವಾಗಿ ಕಾಣಲು ಬಯಸಿದರೆ ಈ ಸೀರೆಯನ್ನು ಪ್ರಯತ್ನಿಸಿ

ಪ್ರಸ್ತುತ ಮದುವೆ ಸೀಸನ್ ನಡೆಯುತ್ತಿದೆ. ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರ ಮದುವೆಯಲ್ಲಿ ಸೀರೆಯುಟ್ಟು ಮಿಂಚಬೇಕು ಎಂದು ಬಯಸಿದ್ದೀರಾ? ಆದರೆ ಈ ಬೇಸಿಗೆಯಲ್ಲಿ ಭಾರೀ ಪ್ರಮಾಣದ ಕಸೂತಿ ಸೀರೆಯನ್ನುಡಲು ಇಷ್ಟವಿಲ್ಲವೇ, ಹಾಗಿದ್ದರೆ ಈ ನಟಿಮಣಿಯರು ಉಟ್ಟಿರುವ ಪ್ರಕಾರದ ಸೀರೆಯನ್ನು ನೀವು ತೊಡುವ ಮೂಲಕ ಮದುವೆಯಲ್ಲಿ ಸುಂದರವಾಗಿ ಕಾಣಿಸಿಕೊಳ್ಳಿ.

ಬೇಸಿಗೆಯ ಮದುವೆಗಳಲ್ಲಿ ನೀವು ಆಕರ್ಷಕವಾಗಿ ಕಾಣಲು ಬಯಸಿದರೆ ಈ ಸೀರೆಯನ್ನು ಪ್ರಯತ್ನಿಸಿ
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ|

Updated on: May 06, 2023 | 6:36 PM

Share

ಪ್ರಸ್ತುತ ಎಲ್ಲೆಡೆ ಮದುವೆ ಸಮಾರಂಭಗಳೇ ನಡೆಯುತ್ತಿದೆ. ನೀವು ನಿಮ್ಮ ಸ್ನೇಹಿತರ ಅಥವಾ ಆಪ್ತರ ಮದುವೆಯಲ್ಲಿ ಚೆನ್ನಾಗಿ ತಯಾರಾಗಿ ಮಿಂಚಬೇಕು, ಆದರೆ ಈ ಬೇಸಿಗೆಯ ಶಾಖಕ್ಕೆ ಭಾರವಾದ ಕಸೂತಿ ಹೊಂದಿರುವ ಬಟ್ಟೆ ಮತ್ತು ಸೀರೆಯನ್ನು ಉಡಲು ಹಿಂಜರಿಯುತ್ತಿದ್ದೀರಾ, ಹಾಗಿದ್ದರೆ ಈ ಸಿಂಪಲ್ ಸೀರೆಯನ್ನು ಉಟ್ಟುಕೊಳ್ಳುವ ಮೂಲಕ ಸುಂದರವಾಗಿ ಕಾಣಿಸಿಕೊಳ್ಳಿ. ಬೇಸಿಗೆಯಲ್ಲಿ ಹಳದಿ ಬಣ್ಣವು ತುಂಬಾ ಟ್ರೆಂಡಿಯಾಗಿ ಕಾಣುತ್ತದೆ. ಹಳದಿ ಬಣ್ಣದ ಸೀರೆಯನ್ನುಟ್ಟರೆ ನೀವು ಆಕರ್ಷಕವಾಗಿ ಕಾಣುವುದು ಮಾತ್ರವಲ್ಲದೆ, ನಿಮ್ಮ ನೋಟ ಎಲ್ಲರ ಗಮನವನ್ನು ಸೆಳೆಯುತ್ತದೆ. ಅದು ರಾಕುಲ್ ಪ್ರೀತ್ ಸಿಂಗ್ ಅವರ ವೇವ್ ಪ್ರಿಂಟ್ ಸೀರೆಯಾಗಿರಲಿ ಅಥವಾ ಕೃತಿ ಕರಬಂಧ ಅವರು ಆರ್ಗನ್ಜಾ ಪ್ರಿಂಟೆಡ್ ಸೀರೆಯಾಗಿರಲಿ. ಬಹುಕಾಂತೀಯ ನೋಟವನ್ನು ಪಡೆಯಲು ನೀವು ಈ ಇಬ್ಬರು ನಟಿಯರ ನೋಟವನ್ನು ಸುಲಭವಾಗಿ ಮರುಸೃಷ್ಟಿಸಬಹುದು.

ರಕುಲ್ ಪ್ರೀತ್ ಸಿಂಗ್ ತನ್ನ ದೇಸಿ ಲುಕ್ ನ ಫೋಟೋಗಳನ್ನು ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಹಳದಿ ಬಣ್ಣದ ಶಿಫಾನ್ ಫ್ಯಾಬ್ರಿಕ್ ಸೀರೆಯನ್ನುಟ್ಟು ಮಿಂಚಿದ್ದಾರೆ. ಮತ್ತು ಅದಕ್ಕೆ ಅವರು ಸರಳವಾದ ಚೋಕರ್ ನೆಕ್ ಪೀಸ್ ಮತ್ತು ಕಿವಿಯೋಲೆಯನ್ನು ಧರಿಸಿದ್ದಾರೆ. ನೀವು ನಿಮ್ಮ ಸ್ನೇಹಿತರ ಮದುವೆಯಲ್ಲಿ ಸರಳ ಸುಂದರಿಯಾಗಿ ಮಿಂಚಬೇಕೆಂದು ಬಯಸಿದರೆ, ರಾಕುಲ್ ಪ್ರೀತ್ ಸಿಂಗ್ ಅವರ ಈ ಲುಕ್ ನ್ನು ಒಮ್ಮೆ ಪ್ರಯತ್ನಿಸಿ.

ಇದನ್ನೂ ಓದಿ: ಎಣ್ಣೆಯುಕ್ತ ಚರ್ಮಕ್ಕಾಗಿ ಅಲೋವೆರಾ: ಬೇಸಿಗೆಯಲ್ಲಿ ತ್ವಚೆಯನ್ನು ಕಾಪಾಡಿಕೊಳ್ಳಲು ಉತ್ತಮ ಸಲಹೆಗಳು

ಕೃತಿ ಕರಬಂಧ ಅವರು ಹಳದಿ ಸೀರೆಯನ್ನುಟ್ಟು ಕಂಗೊಳಿಸಿರುವ ಫೋಟೋವನ್ನು ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ನಟಿಯ ಈ ಆರ್ಗನ್ಜಾ ಸೀರೆಯ ಬಾರ್ಡರ್ ನಲ್ಲಿ ಗುಲಾಬಿ ಬಣ್ಣದ ಕಸೂತಿ ಮಾಡಲಾಗಿದೆ. ಅದರೊಂದಿಗೆ ಪ್ರಿಂಟೆಡ್ ಸ್ಟ್ರಿಪ್ ಸ್ಲೀವ್ ರವಿಕೆಯನ್ನು ಕೂಡಾ ಧರಿಸಿದ್ದಾರೆ. ಅಗಲವಾದ ನೆಕ್ಲೆಸ್ ಅವರ ಸಿಂಪಲ್ ಸೀರೆಗೆ ಸಾಂಪ್ರದಾಯಿಯ ನೋಟವನ್ನು ನೀಡಿದೆ. ಈ ಬೇಸಿಗೆಯ ಮದುವೆಯಲ್ಲಿ ಸರಳ ಸೀರೆಯನ್ನು ಉಟ್ಟು ಸುಂದರವಾಗಿ ಕಾಣಬೇಕೆಂದರೆ ಕೃತಿ ಕರಬಂಧ ಅವರ ಈ ಲುಕ್ ನ್ನು ಪ್ರಯತ್ನಿಸಿ. ಕಡಿಮೆ ತೂಕ ಮತ್ತು ಉತ್ತಮವಾದ ಫ್ಯಾಬ್ರಿಕ್ ಸಿರೆಯನ್ನು ಧರಿಸಿ, ಇದು ನಿಮಗೆ ಯಾವುದೇ ರೀತಿಯ ಕಿರಿರಿಯನ್ನು ಉಂಟುಮಾಡುವುದಿಲ್ಲ ಮತ್ತು ಅದಕ್ಕೆ ಬಾಲಿವುಡ್ ನಟಿಯರ ಶೈಲಿಯ ಆಭರಣ ಪರಿಕರಗಳನ್ನು ತೊಟ್ಟುಕೊಳ್ಳಿ. ಇದು ನಿಮಗೆ ಖಂಡಿತವಾಗಿಯೂ ಆಕರ್ಷಕ ನೋಟವನ್ನು ನೀಡುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್