Viral Video : ಹೋಟೆಲ್ ಬೇಡವೆಂದರೆ ಫುಡ್ ಆರ್ಡರ್ ಮಾಡುತ್ತೀರಿ. ಕೆಲವೊಮ್ಮೆ ನೀವೇ ಹೋಟೆಲ್ಗೆ ಹೋಗಿ ಊಟ ಮಾಡುತ್ತೀರಿ. ಆದರೆ ರಾತ್ರಿ ಬಾಗಿಲು ಮುಚ್ಚುವ ಸಮಯದಲ್ಲಿ ನಿಮಗಿಷ್ಟವಾದ ಊಟ ತಿಂಡಿ ಬೇಕೆಂದರೆ ಏನು ಮಾಡುತ್ತೀರಿ? ಆರ್ಡರ್ ಮಾಡಿದರೂ ಅದು ನಿಮ್ಮನ್ನು ತಲುಪಲಾರದು ಎಂಬಂಥ ಸ್ಥಿತಿ ಇದ್ದಾಗ ಏನು ಮಾಡುತ್ತೀರಿ? ಕೆನಡಾದ ಈ ವ್ಯಕ್ತಿ ಹೀಗೊಂದು ಉಪಾಯ ಕಂಡುಕೊಂಡಿದ್ದಾರೆ. ಆದರೆ ಅದು ಯಾವಾಗಲೂ ಎಲ್ಲರಿಗೂ ವರ್ಕೌಟ್ ಆಗುತ್ತದೆ ಎಂದು ಹೇಳಲಾಗದು. ಇದೊಂಥರಾ ಅದೃಷ್ಟ ಎನ್ನಬಹುದು. ವೈರಲ್ ಆದ ಈ ವಿಡಿಯೋ ನೋಡಿ ತಿಳಿಯುತ್ತದೆ.
Drove to Koramangala for midnight McDonald’s, they said they were closed, but the pick-up window was full of delivery guys. What to do?
I ordered Swiggy from McDonald’s to McDonald’s. 10-second delivery achieved. pic.twitter.com/W3PhzmGJrT
— Caleb Friesen (@caleb_friesen2) February 8, 2023
ಬೆಂಗಳೂರಿನ ಕೋರಮಂಗಲದಲ್ಲಿ ವಾಸಿಸುತ್ತಿರುವ ಕೆನಡಾದ ಪ್ರಜೆ ಕ್ಯಾಲೆಬ್ ಫ್ರೈಸೆನ್ ಎಂಬುವವರಿಗೆ ತಡರಾತ್ರಿ ಹಸಿವಾಗಿದೆ. ಮೆಕ್ಡೊನಾಲ್ಡ್ಸ್ಗೆ (McDonald’s) ಹೋಗಿ ಏನಾದರೂ ಏನಾದರೂ ತಿನ್ನಬೇಕು ಎಂಬ ಆಸೆಯಾಗಿದೆ. ಅಲ್ಲಿ ಹೋದಾಗ ಮೆಕ್ಡೊನಾಲ್ಡ್ನ ಮಳಿಗೆ ಬಾಗಿಲು ಹಾಕಿತ್ತು. ಆದರೆ ಅಲ್ಲಿ ಡೆಲಿವರಿ ಏಜೆಂಟರುಗಳು ಜಮಾಯಿಸಿದ್ದನ್ನು ನೋಡಿದ ಕ್ಯಾಲೆಬ್ ತಕ್ಷಣವೇ ಸ್ವಿಗ್ಗಿ ಆ್ಯಪ್ ಮೂಲಕ ಆರ್ಡರ್ ಮಾಡತೊಡಗಿದರು. ಆಹಾರ ತಲುಪಿಸಬೇಕಾದ ವಿಳಾಸದ ಜಾಗದಲ್ಲಿ ಮೆಕ್ಡೊನಾಲ್ಡ್ನ ವಿಳಾಸವನ್ನೇ ನೀಡಿದರು. ನಂತರ ಡೆಲಿವರಿ ಏಜೆಂಟ್ ಎದುರಿಗೆ ಆಹಾರದ ಪೊಟ್ಟಣದೊಂದಿಗೆ ಅವರೆದುರು ಪ್ರತ್ಯಕ್ಷರಾದರು.
ಇದನ್ನೂ ಓದಿ : ವರ್ಷದ ಅಪ್ಪ ಪ್ರಶಸ್ತಿ ಈ ಅಪ್ಪನಿಗೇ! ವೈರಲ್ ಆದ ವಿಡಿಯೋ
ಅಂತೂ ಹತ್ತು ಸಕೆಂಡುಗಳೊಳಗೆ ಡೆಲಿವರಿ ಏಜೆಂಟ್ ಆಹಾರದ ಪೊಟ್ಟಣವನ್ನು ಅಲ್ಲಿಯೇ ನಿಂತಿದ್ದ ಕ್ಯಾಬೆಲ್ ಅವರಿಗೆ ತಲುಪಿಸಿದರು. ಇದನ್ನು ವಿಡಿಯೋ ಮಾಡಿಕೊಂಡ ಕ್ಯಾಬೆಲ್ ಟ್ವಿಟರ್ಗೆ ಅಪ್ಲೋಡ್ ಮಾಡಿದ್ದಾರೆ. ಡೆಲಿವರಿ ಏಜೆಂಟ್ ಸಂಜಯ್ ಮಾತನಾಡಿದ ವಿಡಿಯೋ ತುಣು ಇದರಲ್ಲಿದೆ. ‘ಈ ಮೂರು ವರ್ಷದಲ್ಲಿ ನಾನು ಅತ್ಯಂತ ಕಡಿಮೆ ಅವಧಿಯಲ್ಲಿ ಆರ್ಡರ್ ತಲುಪಿಸಿದ್ದು ಇದೇ ಮೊದಲು ಎಂದಿದ್ದಾರೆ’ ಅವರು.
ಇದನ್ನೂ ಓದಿ : ಬುರ್ಖಾ ಧರಿಸಿ ಸ್ವಿಗ್ಗಿ ಬ್ಯಾಗ್ನೊಂದಿಗೆ ಹೊರಟಿರುವ ಈ ಮಹಿಳೆಯ ಕಥೆ ಬೇರೆಯೇ ಇದೆ
ಈತನಕ ಈ ವಿಡಿಯೋ ಅನ್ನು 38,000 ಜನರು ನೋಡಿದ್ದಾರೆ. ಸುಮಾರು 465ಜನರು ಇಷ್ಟಪಟ್ಟಿದ್ದಾರೆ. ಅನೇಕರು ಎಮೊಟಿಕಾನ್ಗಳ ಮೂಲಕ ಪ್ರತಿಕ್ರಿಯಿಸಿ ಇದೆಲ್ಲವೂ ಬೆಂಗಳೂರಿನಲ್ಲಿ ಮಾತ್ರ ನಡೆಯುತ್ತದೆ ಎಂದಿದ್ಧಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 4:47 pm, Thu, 9 February 23