ದುಂಡು ಮುಖದ ಕೆನ್ನೆಯೊಂದಿಗೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರ ಸೂಪರ್ ಪೋಸ್ಟ್ ಚಿತ್ರಗಳು ವೈರಲ್

Viral Photo: ಕ್ರಿಕೆಟಿಗರ ಕೆನ್ನೆಗಳು ಉಬ್ಬಿಕೊಂಡಿರುವಂತೆ ಕಾಣುವ ಕೆಲವು ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ.

ದುಂಡು ಮುಖದ ಕೆನ್ನೆಯೊಂದಿಗೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರ ಸೂಪರ್ ಪೋಸ್ಟ್ ಚಿತ್ರಗಳು ವೈರಲ್
ದುಂಡು ಮುಖದ ಕೆನ್ನೆಯೊಂದಿಗೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರ ಸೂಪರ್ ಪೋಸ್ಟ್ ಚಿತ್ರಗಳು ವೈರಲ್
Edited By:

Updated on: Aug 25, 2021 | 12:58 PM

ನ್ಯೂಜಿಲೆಂಡ್ ವಿರುದ್ಧದ ವಿಶ್ವ ಚಾಂಪಿಯನ್​ಶಿಪ್​ನಲ್ಲಿ 8 ವಿಕೆಟ್​ನಿಂದ ಸೋಲು ಅನುಭವಿಸಿದ ನಂತರ ಭಾರತವು ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದು ಟೆಸ್ಟ್ ಪಂದ್ಯಗಳ ಸರಣಿಯಯಲ್ಲಿ ಪುಟಿದೆದ್ದಿದೆ. ಇನ್ನು ಮೂರು ಪಂದ್ಯಗಳು ಬಾಕಿ ಉಳಿದಿದ್ದು ವಿಜಯ ಸಾಧಿಸಲು ಇನ್ನೂ ಅವಕಾಶವಿದೆ. ಈ ಮಧ್ಯೆ ಭಾರತೀಯ ಕ್ರಿಕೆಟಿಗರ ಕೆಲವು ಸೂಪರ್​ಪೋಸ್ಟ್​ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಕ್ರಿಕೆಟಿಗ ವಿರಾಟ್​ ಕೊಹ್ಲಿ, ರೋಹಿತ್ ಶರ್ಮಾ, ಇಶಾಂತ್ ಶರ್ಮಾ, ರಿಷಬ್ ಪಂತ್, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿಯ ಫೋಟೋಗಳು ಫುಲ್ ವೈರಲ್ ಆಗಿದೆ. ಇವರ ಕೆನ್ನೆಗಳು ಉಬ್ಬಿಕೊಂಡಿರುವಂತೆ ಕಾಣುವ ಕೆಲವು ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ.

ಉಲ್ಲಾಸದ ಕೆಲವು ಚಿತ್ರಗಳನ್ನು ನೋಡಿದ ನೆಟ್ಟಿಗರು ನಗುವ ಎಮೋಜಿಗಳನ್ನು ಕಳುಹಿಸಿದ್ದಾರೆ. ಕೆನ್ನೆ ಉಬ್ಬಿಕೊಂಡಿರುವ ಕ್ರಿಕೆಟ್​ ಆಟಗಾರರ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಈ ಹಿಂದೆ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರರ ಸೂಪರ್​ಪೋಸ್ಟ್​ಗಳನ್ನು ಹಂಚಿಕೊಳ್ಳಲಾಗಿತ್ತು. ಆ ಫೋಟೊಗಳೂ ಸಹ ಫುಲ್ ವೈರಲ್ ಆಗಿದ್ದವು.

ಇದನ್ನೂ ಓದಿ:

Virat Kohli: ಕೊಹ್ಲಿಯ ಆ ವರ್ತನೆ ಮಿತಿಯಲ್ಲಿರಬೇಕು: ವಿರಾಟ್​ಗೆ ಕ್ಲಾಸ್ ತೆಗೆದುಕೊಂಡ ಭಾರತದ ಮಾಜಿ ಆಟಗಾರ

ಅನುಷ್ಕಾ ಮೊದಲ ಭೇಟಿ ಹೇಗಿತ್ತು? ಸಂದರ್ಭ ಸಹಿತ ವಿವರಿಸಿದ ವಿರಾಟ್​ ಕೊಹ್ಲಿ

(Virat kohli rohit sharma superimposed images goes viral in social media)

Published On - 12:57 pm, Wed, 25 August 21