ಕಣ್ಣು ಕಾಣದ ಈ ಪುಟಾಣಿ ಬಾಲಕಿಗೆ ಶಾಲೆಗೆ ಹೋಗುವುದೆಂದರೆ ಸಂಭ್ರಮ; ಶಾಲೆ ಬಸ್​ ಹತ್ತಲು ಖುಷಿಯಿಂದ ಹೋಗುವ ವಿಡಿಯೋ ವೈರಲ್

Viral Video: ಬಾಲಕಿಗೆ ಶಾಲೆಗೆ ಹೋಗುವುದೆಂದರೆ ಸಂಭ್ರಮ. ಆ ಸಮಭ್ರಮದಲ್ಲಿ ಪುಟ್ಟ ಪುಟ್ಟ ಹೆಜ್ಜೆಯನ್ನುಡುತ್ತಾ ಖುಷಿಯಿಂದ ಬಸ್ ಹತ್ತಲು ಪ್ರಯತ್ನಿಸಿದ್ದಾಳೆ. ಮನ ಮಿಡಿಯುವ ವಿಡಿಯೋ ಸಾವಿರಾರು ವೀಕ್ಷಣೆಗಳನ್ನು ಗಳಿಸಿಕೊಂಡಿದೆ.

ಕಣ್ಣು ಕಾಣದ ಈ ಪುಟಾಣಿ ಬಾಲಕಿಗೆ ಶಾಲೆಗೆ ಹೋಗುವುದೆಂದರೆ ಸಂಭ್ರಮ; ಶಾಲೆ ಬಸ್​ ಹತ್ತಲು ಖುಷಿಯಿಂದ ಹೋಗುವ ವಿಡಿಯೋ ವೈರಲ್
Edited By:

Updated on: Sep 15, 2021 | 11:30 AM

ದೃಷ್ಟಿ ಹೀನತೆಯಿಂದ ಬಳಲುತ್ತಿರುವ ಬಾಲಕಿ ಮೊದಲ ಬಾರಿಗೆ ಶಾಲೆಯ ಬಸ್ ಹತ್ತುತ್ತಿರುವ ವಿಡಿಯೋ ಮನ ಮಿಡಿಯುವಂತಿದೆ. ಧೈರ್ಯವಂತೆ ಬಾಲಕಿ ದೃಷ್ಟಿ ಹೀನತೆಯಿಂದ ಬಳಲುತ್ತಿದ್ದರೂ ಸಹ ಯಾರ ಸಹಾಯವಿಲ್ಲದೇ ತಾನಾಗಿಯೇ ಬಸ್​ ಮೆಟ್ಟಿಲು ಹತ್ತಿದ್ದಾಳೆ. ಬಾಲಕಿಯ ತಾಯಿ ವಿಡಿಯೋ ಮಾಡಿ ಟಿಕ್ ಟಾಕ್​ನಲ್ಲಿ ಹಂಚಿಕೊಂಡಿದ್ದು, ನನ್ನ ಮಗಳ ಬಗ್ಗೆ ಹೆಮ್ಮೆ ಅನಿಸುತ್ತಿದೆ ಎಂದು ಹೇಳಿದ್ದಾರೆ. ಹೃದಯಸ್ಪರ್ಶಿ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಫುಲ್​ ವೈರಲ್​ ಆಗಿದೆ. 

ಬಾಲಕಿಗೆ ಶಾಲೆಗೆ ಹೋಗುವುದೆಂದರೆ ಸಂಭ್ರಮ. ಆ ಸಮಭ್ರಮದಲ್ಲಿ ಪುಟ್ಟ ಪುಟ್ಟ ಹೆಜ್ಜೆಯನ್ನುಡುತ್ತಾ ಖುಷಿಯಿಂದ ಬಸ್ ಹತ್ತಲು ಪ್ರಯತ್ನಿಸಿದ್ದಾಳೆ. ಮನ ಮಿಡಿಯುವ ವಿಡಿಯೋ ಸಾವಿರಾರು ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ಮೊದಲಿಗೆ ಟಿಕ್ಟಾಕ್​ನಲ್ಲಿ ದೃಶ್ಯ ಹಂಚಿಕೊಳ್ಳಲಾಗಿದ್ದು, ನನ್ನ ಪುಟ್ಟ ಮಗಳು ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಾ ಕೋಲಿನ ಸಹಾಯದಿಂದ ಬಸ್ ಹತ್ತಿದ್ದಾಳೆ. ನನ್ನ ಮಗುಳಿಗೆ ಕಣ್ಣು ಕಾಣುವುದಿಲ್ಲ. ತಾನೇ ಮೊದಲ ಬಾರಿಗೆ ಪ್ರಯತ್ನ ಪಟ್ಟು ಶಾಲೆಯ ಹೋಗಲು ಬಸ್ ಹತ್ತಿದ್ದಾಳೆ. ನನಗೆ ತುಂಬಾ ಹೆಮ್ಮೆ ಅನಿಸುತ್ತಿದೆ ಎಂದು ಬಾಲಕಿಯ ತಾಯಿ ಶೀರ್ಷಿಕೆ ನೀಡುವ ಮೂಲಕ ವಿಡಿಯೊ ಹರಿಬಿಟ್ಟಿದ್ದಾರೆ.

ಟ್ವಿಟರ್​ನಲ್ಲಿ ವಿಡಿಯೋ ಸುಮಾರು 6,000 ವೀಕ್ಷಣೆಗಳನ್ನು ಪಡೆದುಕೊಂಡಿದೆ. ವಿಡಿಯೋ ನೋಡಿದ ನೆಟ್ಟಿಗರು ಕಾಮೆಂಟ್ ವಿಭಾಗದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಬಾಲಕಿಗೆ ಶ್ಲಾಘನೆ ವ್ಯಕ್ತವಾಗಿದೆ. ಅದ್ಭುತವಾದ ವಿಡಿಯೋವಿದು ಹೆಮ್ಮೆಯಾಗುತ್ತದೆ ಎಂದು ಓರ್ವರು ಹೇಳಿದ್ದಾರೆ. ವಿಡಿಯೋ ನೋಡಿ ನನ್ನ ಕಣ್ತುಂಬಿ ಬಂತು ಎಂದು ಇನ್ನೋರ್ವರು ಹೇಳಿದ್ದಾರೆ.

ಇದನ್ನೂ ಓದಿ:

Viral Video: ಸಲೂನ್​ಗೆ ಬಂದು ಕಿಮ್​ ಜಾಂಗ್​ ಉನ್​ ಹೆಸರು ಹೇಳಿದ ಯುವಕ; ಬಳಿಕ ನಡೆದಿದ್ದು ಅದ್ಭುತ !

Viral Video: ತೂಗು ಸೇತುವೆ ಮೇಲೆ ಬೈಕ್ ಹತ್ತಿ ಸ್ಟಂಟ್ ಮಾಡಿದ ವ್ಯಕ್ತಿ ಪರಿಸ್ಥಿತಿ ಏನಾಯ್ತು ನೋಡಿ!

(Visual impairment girl Climbing the stairs of boards school bus for herself heartwarming video goes viral)