Vlogging in Sanskrit: ಸಂಸ್ಕೃತದಲ್ಲಿ ಬ್ಲಾಗ್ ಮಾಡುವ ಮೂಲಕ ನೆಟ್ಟಿಗರ ಮನಗೆದ್ದ ಸಮಷ್ಟಿ ಗುಬ್ಬಿ

| Updated By: ಅಕ್ಷತಾ ವರ್ಕಾಡಿ

Updated on: Mar 10, 2024 | 1:27 PM

ಇಂಗ್ಲಿಷ್, ಕನ್ನಡ, ಹಿಂದಿ ಅಥವಾ ಯಾವುದೇ ಪ್ರಾದೇಶಿಕ ಭಾಷೆಯಲ್ಲಿ ಬ್ಲಾಗಿಂಗ್ ಮಾಡುವುದನ್ನು ನೀವು ನೋಡಿರಬಹುದು ಆದರೆ ಸಂಸ್ಕೃತದಲ್ಲಿ ಬ್ಲಾಗಿಂಗ್ ಮಾಡುವುದನ್ನು ನೋಡಿದ್ದೀರಾ? ಈ ವಿಷಯ ಆಶ್ಚರ್ಯ ಎನಿಸಿದರೂ ಸತ್ಯ. ಬೆಂಗಳೂರು ಮೂಲದ ಸಮಷ್ಟಿ ಗುಬ್ಬಿ ಎನ್ನುವವರು, ಸಂಸ್ಕೃತ ಭಾಷೆಯನ್ನು ಬಳಸಿಕೊಂಡು ವಿಶಿಷ್ಟ ರೀತಿಯ್ಲಲಿ ಬ್ಲಾಗಿಂಗ್ ಮಾಡುವ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ.

Vlogging in Sanskrit: ಸಂಸ್ಕೃತದಲ್ಲಿ ಬ್ಲಾಗ್ ಮಾಡುವ ಮೂಲಕ ನೆಟ್ಟಿಗರ ಮನಗೆದ್ದ ಸಮಷ್ಟಿ ಗುಬ್ಬಿ
Samashti Gubbi
Image Credit source: instagram
Follow us on

ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯತೆಗಳಿಸಲು ಇಂಗ್ಲಿಷ್, ಕನ್ನಡ, ಹಿಂದಿ ಅಥವಾ ಯಾವುದೇ ಪ್ರಾದೇಶಿಕ ಭಾಷೆಯಲ್ಲಿ ಬ್ಲಾಗಿಂಗ್ ಮಾಡುವುದನ್ನು ನೀವು ನೋಡಿರಬಹುದು ಆದರೆ ಸಂಸ್ಕೃತದಲ್ಲಿ ಬ್ಲಾಗಿಂಗ್ ಮಾಡುವುದನ್ನು ನೋಡಿದ್ದೀರಾ? ಈ ವಿಷಯ ಆಶ್ಚರ್ಯ ಎನಿಸಿದರೂ ಸತ್ಯ. ಬೆಂಗಳೂರು ಮೂಲದ ಸಮಷ್ಟಿ ಗುಬ್ಬಿ ಎನ್ನುವವರು, ಸಂಸ್ಕೃತ ಭಾಷೆಯನ್ನು ಬಳಸಿಕೊಂಡು ವಿಶಿಷ್ಟ ರೀತಿಯ್ಲಲಿ ಬ್ಲಾಗಿಂಗ್ ಮಾಡುವ ಮೂಲಕ ತನ್ನ ಕೌಶಲದಿಂದ ನೆಟ್ಟಿಗರ ಗಮನ ಸೆಳೆದಿದ್ದಾರೆ. 23 ವರ್ಷದ ಸಮಷ್ಟಿ ಅವರು, ಪ್ರಾಚೀನ ಭಾಷೆಯಾದ ಸಂಸ್ಕ್ರತವನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದ್ದಾರೆ. ಇಂಗ್ಲಿಷ್, ಹಿಂದಿ ಇನ್ನಿತರ ಎಲ್ಲಾ ಭಾಷೆಗಳಂತೆ ಸಂಸ್ಕ್ರತವೂ ಕೂಡ ದಿನಬಳಕೆಯ ಭಾಷೆಯಾಗಬೇಕು, ಜೊತೆಗೆ ಸಂಸ್ಕೃತ ಕಲಿಯಬೇಕು ಎನ್ನುವ ಮನೋಭಾವ ಜನರಲ್ಲಿ ಬೆಳೆಯಬೇಕು ಎಂಬ ಪ್ರಯತ್ನ ಅವರದ್ದಾಗಿದೆ.

ಸಂಸ್ಕೃತ ಭಾಷೆಯ ಮೇಲೆ ಒಲವಾಗಿದ್ದು ಹೇಗೆ?

ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಶರಾವತಿ ನದಿ ಬಳಿಯಿರುವ ದೇವಸ್ಥಾನದಲ್ಲಿ ಪ್ರತಿವರ್ಷವೂ ನಡೆಯುತ್ತಿದ್ದ ಸಂಸ್ಕೃತ ಶಿಬಿರದಲ್ಲಿ ಪಾಲ್ಗೊಳ್ಳುವ ಮೂಲಕ ಜೊತೆಗೆ ಬೇರೆ ಬೇರೆ ಭಾಷೆಗಳನ್ನೂ ಕಲಿಯಬೇಕು ಎಂಬ ಉತ್ಸಾಹ, ಅವರಿಗೆ ಸಂಸ್ಕೃತದ ಮೇಲಿನ ಒಲವನ್ನು ಹೆಚ್ಚಿಸಿತು. ಬಳಿಕ ಇದರಲ್ಲಿಯೇ ಸ್ನಾತಕೋತ್ತರ ಪದವಿ ಪಡೆದ ಅವರ ಪ್ರಯಾಣವು 2021ರಲ್ಲಿ ಸ್ಥಾಯಿ (Sthayi.in)ಯನ್ನು ಆರಂಭಿಸುವಂತೆ ಮಾಡಿತು. ಆ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವುದು ಅವರ ಉದ್ದೇಶವಾಗಿತ್ತು. ಇದು ಕೇವಲ ಶೈಕ್ಷಣಿಕ ವೇದಿಕೆಯಾಗಿರದೆಯೇ ಅದಕ್ಕೂ ಮೀರಿ ವಿಕಸನಗೊಂಡು, ವೈವಿಧ್ಯಮಯ ಕ್ಷೇತ್ರಗಳಲ್ಲಿ ಅಂದರೆ ಮ್ಯಾರಥಾನ್, ಮ್ಯೂಸಿಕಲ್ ಬ್ಯಾಂಡ್ ಗಳಂತಹ ನವೀನ ಉಪಕ್ರಮಗಳ ಮೂಲಕ ಕ್ರೀಡಾ ಉತ್ಸಾಹಿಗಗಳಿಗೆ ಸಂಗೀತಗಾರರಿಗೆ, ಪ್ರವಾಸ ಪ್ರೀಯರಿಗೆ ಸಮಾನವಾಗಿ ತಲುಪಲು ಪ್ರೇರಣೆಯಾಯಿತು.

ಇದನ್ನೂ ಓದಿ: ಉತ್ತರ ಕರ್ನಾಟಕದ ಖಡಕ್ ಜೋಳದ ರೊಟ್ಟಿ ನಾನಾ ರೀತಿಯ ಪಲ್ಯ, ಅಜ್ಜಿಯ ಕೈ ರುಚಿ ಅದ್ಭುತ

ಇದೆಲ್ಲದರ ಹೊರತಾಗಿ ಯುವ ಪೀಳಿಗೆ ಸಂಸ್ಕೃತವನ್ನು ಹೆಚ್ಚು ಇಷ್ಟಪಡಲು ಮತ್ತು ಪ್ರಾಚೀನ ಭಾಷೆ ಮತ್ತು ಆಧುನಿಕ ಜೀವನದ ನಡುವಿನ ಅಂತರವನ್ನು ಕಡಿಮೆ ಮಾಡಲು ಆಹಾರದ ವ್ಲಾಗಿಂಗ್ ಅನ್ನು ಆಯ್ಕೆ ಮಾಡಿಕೊಂಡರು. ಬಳಿಕ ಅವರು ಸಣ್ಣ ಸಣ್ಣ ಹೋಟೆಲ್ ಗಳಿಂದ ಹಿಡಿದು ಟ್ರೆಂಡಿ ಕೆಫೆಗಳವರೆಗೆ ಬೆಂಗಳೂರಿನ ವಿವಿಧ ಪಾಕಶಾಲೆಯ ದೃಶ್ಯಗಳಿಗೆ ಸಂಸ್ಕೃತ ಭಾಷೆಯನ್ನು ಬಳಸಿಕೊಂಡು ತಮ್ಮದೇ ಧ್ವನಿ ನೀಡುವ ಮೂಲಕ ವ್ಲಾಗಿಂಗ್ ಪ್ರಾರಂಭಿಸಿದರು. ಅವರ ವ್ಲಾಗ್ ಗಳು ಆಹಾರಕ್ಕೆ ಮಾತ್ರ ಸಂಬಂಧಿಸಿಲ್ಲ ಬದಲಾಗಿ ಸಂಗೀತ, ಪ್ರವಾಸ ಇನ್ನಿತರ ಆಕರ್ಷಕ ಮಾಹಿತಿಗಳನ್ನು ಕೂಡ ಒಳಗೊಂಡಿದೆ.

“ಮುಂದಿನ ದಿನಗಳಲ್ಲಿ ಸ್ಥಾಯಿಯಲ್ಲಿರುವ ಸಮ್ (samm) ಎಂಬ ಯೋಜನೆ ಅಡಿಯಲ್ಲಿ ಸಿನೆಮಾ, ಆಟೋಟ, ಸಂಗೀತ ಮತ್ತು ಪ್ರವಾಸಗಳನ್ನು ಮಾಡುವ ಮೂಲಕ ಯುವ ಜನತೆಗೆ ಸಂಸ್ಕ್ರತ ಭಾಷೆಯ ಮೇಲೆ ಒಲವನ್ನು ಹೆಚ್ಚಿಸಬೇಕು ಎಂದು ಅಂದುಕೊಂಡಿದ್ದೇನೆ ಎಂಬ ಮಾತನ್ನು ಸಮಷ್ಟಿ ಗುಬ್ಬಿ ಟಿವಿ9 ಗೆ ನೀಡಿದ ವರದಿಯಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ