Viral Video: ಹಳೆಯ ಸಿಡಿಗಳನ್ನು ಬಾಣಲೆಗೆ ಹಾಕಿ ಕುದಿಸುತ್ತಿರುವ ಯುವತಿ, ಮುಂದೆ?

|

Updated on: Aug 30, 2023 | 3:24 PM

Wall Hanging : ಇಷ್ಟೊಂದು ಆಕರ್ಷಕವಾಗಿ ಈ ವಾಲ್​ ಹ್ಯಾಂಗಿಂಗ್ ಹೊಮ್ಮಬಹುದು ಎಂಬ ಸೂಚನೆಯನ್ನೇ ಈ ವಿಡಿಯೋ ಆರಂಭದಲ್ಲಿ ಬಿಟ್ಟುಕೊಡುವುದಿಲ್ಲವಲ್ಲ? ಈಕೆ ಏನೋ ಅಡುಗೆ ಮಾಡುತ್ತಿದ್ದಾಳೇನೋ ಎಂದೇ ಭಾವಿಸಿದೆವು ಎಂದು ನೆಟ್ಟಿಗರು ಅಚ್ಚರಿ ಪಡುತ್ತಿದ್ದಾರೆ. ಈ ವಿಡಿಯೋ ನೋಡಿದ ನಿಮಗೂ ಹೀಗೊಂದು ವಾಲ್​ ಹ್ಯಾಂಗಿಂಗ್​ ಸೃಷ್ಟಿಯಾಗಬಹುದು ಎಂಬ ಕಲ್ಪನೆ ಇತ್ತೆ?

Viral Video: ಹಳೆಯ ಸಿಡಿಗಳನ್ನು ಬಾಣಲೆಗೆ ಹಾಕಿ ಕುದಿಸುತ್ತಿರುವ ಯುವತಿ, ಮುಂದೆ?
ಹಳೆಯ ಸಿ.ಡಿಗಳಿಂದ ವಾಲ್​ ಹ್ಯಾಂಗಿಂಗ್​ ತಯಾರಿಸುತ್ತಿರುವ ಯುವತಿ
Follow us on

Craft : ಸಿ.ಡಿಗಳನ್ನೀಗ ಯಾರೂ ಮಾತನಾಡಿಸುವವರೇ ಇಲ್ಲ. ಹೀಗೆಂದುಕೊಳ್ಳುವುದು ಖಂಡಿತ ತಪ್ಪು. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಈ ಯುವತಿ ಕಟ್ಟಿಗೆಯ ಒಲೆಯ ಮೇಲೆ ಬಾಣಲೆ ಇಟ್ಟು, ಅದರೊಳಗೆ ನೀರು ಸುರಿದು, ಕುದಿಯುತ್ತಿರುವ ನೀರಿನೊಳಗೆ ಸಿ.ಡಿಗಳನ್ನು ಹಾಕಿ ಕೈಯ್ಯಾಡಿಸುತ್ತಿದ್ದಾಳೆ. ಆಕೆ ಆಡಿಸಿದಂತೆ ಅವು ಬಾಯಿ ಬಿಡುತ್ತಿವೆ. ಮುಂದೆ ಏನಾಗುತ್ತದೆ ಎನ್ನುವುದನ್ನು ನೋಡಲು ನೀವೆಲ್ಲ ಕಾತರರಾಗಿದ್ದೀರಿ ಅಲ್ಲವೆ?  ನೆಟ್ಟಿಗರು ಈ ವೈರಲ್ ವಿಡಿಯೋ (Viral Video) ನೋಡಿ ಆರಂಭದಲ್ಲಿ ಗೊಂದಲಕ್ಕೆ ಬಿದ್ದಿರುವುದಂತೂ ಹೌದು. ಆದರೆ ನೀವು?

ಇದನ್ನೂ ಓದಿ : Viral Video: ರಣವೀರ್ ಸಿಂಗ್​, ಸೋನಾಕ್ಷಿ ಸಿನ್ಹಾ ಅಭಿನಯದ ಈ ಹಾಡಿಗೆ ಲಘುಶಾಸ್ತ್ರೀಯ ನೃತ್ಯ

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈಕೆ ಯಾವುದೋ ಖಾದ್ಯ ತಯಾರಿಸುತ್ತಿದ್ದಾಳೆ ಎಂದುಕೊಂಡೇ ನೆಟ್ಟಿಗರು ಈ ವಿಡಿಯೋ ನೋಡಲು ಆರಂಭಿಸಿದ್ದಾರೆ. ಆದರೆ ಸಿ.ಡಿಯಿಂದ ಎಂಥ ಖಾದ್ಯ ತಯಾರಿಸಲು ಸಾಧ್ಯ ಎಂಬ ಗೊಂದಲವೂ ಅವರಿಗೆ ಉಂಟಾಗಿದೆ. 1.9 ಮಿಲಿಯನ್​ ಜನರು ಲೈಕ್ ಮಾಡಿರುವ ಈ ವಿಡಿಯೋ ಅನ್ನು ಈಗಾಗಲೇ 33 ಮಿಲಿಯನ್​ ಜನರು ನೋಡಿದ್ದಾರೆ. ಲಕ್ಷಾಂತರ ಜನರು ಪ್ರತಿಕ್ರಿಯಿಸಿದ್ದಾರೆ.

ಸಿ.ಡಿಯಿಂದ ವಾಲ್​ ಹ್ಯಾಂಗರ್ ತಯಾರಿಕೆ

ಒಂದು ವಾರದ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಪೋಸ್ಟ್​ ಮಾಡಲಾಗಿದೆ. ಲಕ್ಷಾಂತರ ಜನರು ಪ್ರತಿಕ್ರಿಯಿಸಿದ್ದಾರೆ. ಇದು ಔಟ್​ ಆಫ್​ ಬಾಕ್ಸ್​​ನಿಂದ ಯೋಚಿಸುವ ಐಡಿಯಾ ಎಂದು ಒಬ್ಬರು ಹೇಳಿದ್ದಾರೆ. ಸಿನಿಮ್ಮ ಸೃಜನಶೀಲ ಕಲ್ಪನೆ ಅದ್ಭುತವಾಗಿದೆ, ಒಳ್ಳೆಯದಾಗಲಿ ಎಂದು ಇನ್ನೊಬ್ಬರು ಹೇಳಿದ್ದಾರೆ. ಇದು ಬಹಳ ಸುಂದರವಾಗಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ : Viral Video: ವಿಮಾನದ ರೆಕ್ಕೆಯ ಮೇಲೆ ಸ್ಟಂಟ್; ಕ್ಯಾಬಿನ್​​ ಸಿಬ್ಬಂದಿಯ ವಿಡಿಯೋ ವೈರಲ್

ಸಿ.ಡಿಗಳಿಂದ ವಾಲ್​ ಹ್ಯಾಂಗ್ ಮಾಡುವುದು ಗೊತ್ತಿತ್ತು. ಆದರೆ ಈ ಕ್ರಮದಲ್ಲಿ ಇದನ್ನು ಹೀಗೆ ತಯಾರಿಸಿ ಸುಂದರಗೊಳಿಸುವುದು ಗೊತ್ತಿರಲಿಲ್ಲ, ನಿಮ್ಮ ಪ್ರಯತ್ನ ಉತ್ತಮವಾಗಿದೆ ಎಂದಿದ್ಧಾರೆ ಒಬ್ಬರು. ನಾನು ಕೂಡ ಹೀಗೆ ಹಳೆಯ ಸಿ.ಡಿಗಳಿಂದ ವಾಲ್​ ಹ್ಯಾಂಗ್​ ತಯಾರಿಸಲು ಪ್ರಯತ್ನಿಸುತ್ತೇನೆ ಎಂದು ಅನೇಕರು ಹೇಳಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​​ಗಾಗಿ ಕ್ಲಿಕ್ ಮಾಡಿ