Apple Watch: ಗಂಡನ ಕೈಯಿಂದ ಜೀವಂತ ಸಮಾಧಿಯಾಗಿದ್ದ ಆಕೆಯನ್ನು, ಆ ಆಪಲ್ ವಾಚ್ ಉಳಿಸಿತು! ಹೇಗೆ?
ಪತಿಯೇ ಪತ್ನಿಯನ್ನು ಜೀವಂತ ಸಮಾಧಿ ಮಾಡಿದ್ದ! ಸೀನ್ ಕಟ್ ಮಾಡಿದರೆ.. ಆ ಒಂದು ಎಲೆಕ್ಟ್ರಾನಿಕ್ ಗ್ಯಾಜೆಟ್ ಆಕೆಯ ಪ್ರಾಣ ಉಳಿಸಿತ್ತು. ಅಸಲು ಕತೆ ಏನು!
ಎಲೆಕ್ಟ್ರಾನಿಕ್ ಗ್ಯಾಜೆಟ್ ಮಹಿಳೆಯ ಜೀವ ಉಳಿಸಿದೆ. ಸ್ವತಃ ಗಂಡನ ಕೈಯಿಂದ ಜೀವಂತ ಸಮಾಧಿಯಾಗಿದ್ದ ಆಕೆಯನ್ನು ಆ ಆಪಲ್ ವಾಚ್ ಉಳಿಸಿದೆ. ಅವನ ಸಮಯ ಕೆಟ್ಟು, ಅವನ ಲೆಕ್ಕಚಾರವನ್ನೆಲ್ಲ ತಲೆಕೆಳಗು ಮಾಡಿದೆ. ಮಹಿಳೆಯ ಪ್ರಾಣ ಉಳಿಸಿದೆ. ಅಕ್ಟೋಬರ್ 16ರ ಮಧ್ಯಾಹ್ನ ವಾಷಿಂಗ್ಟನ್‌ನಲ್ಲಿ ಈ ಘಟನೆ ನಡೆದಿದೆ.
ಚಾಯ್ ಕ್ಯೋಂಗ್ (husband Chae Kyong) ಮತ್ತು ಯಂಗ್ ಸೂಕ್ ಆನ್ (Young Sook An) ವಾಷಿಂಗ್ಟನ್‌ನಲ್ಲಿ ನೆಲೆಸಿರುವ ಗಂಡ-ಹೆಂಡತಿ. ಕೆಲ ದಿನಗಳಿಂದ ಇವರಿಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು. ಅದರಿಂದ ಇಬ್ಬರೂ ವಿಚ್ಛೇದನ ಪಡೆಯಲು ನಿರ್ಧರಿಸಿದ್ದರು. ಆದರೆ ಅವರು ಬೇರ್ಪಟ್ಟರೆ, 44 ವರ್ಷದ ಚಾಯ್ ಕ್ಯೋಂಗ್ ತನ್ನ ನಿವೃತ್ತಿಯ ಹಣವನ್ನು ಜೀವನಾಂಶವಾಗಿ ಪತ್ನಿ ಯಂಗ್ ಸೂಕ್ ಆನ್ ಗೆ ಪಾವತಿಸಬೇಕಾಗುತ್ತದೆ. ಹಾಗಾಗಿ ಯಂಗ್ ಸೂಕ್ ಆನ್ ಳನ್ನು ಕೊಲ್ಲಲು ಬಯಸುತ್ತಾನೆ. ಉಪಾಯ ಬಂದ ಕೂಡಲೇ ಅವಳೊಂದಿಗೆ ಜಗಳವಾಡಿದ. ಜೊತೆಗೆ ಯೋಜಿತ ರೀತಿಯಲ್ಲಿ ಆಕೆಯನ್ನು ಹಿಂಸಿಸುತ್ತಿದ್ದ. ಪತ್ನಿ ಯಂಗ್ ಸೂಕ್ ಆನ್ ಳನ್ನು ಟೇಪ್ ನಿಂದ ಕಟ್ಟಿ ಹಾಕಿ, ವಾಹನದಲ್ಲಿ ಕೂಡಿಸಿ, ಅರಣ್ಯ ಪ್ರದೇಶಕ್ಕೆ ಕೊಂಡೊಯ್ದಿದ್ದಾನೆ.
ಕಾಡು ಪ್ರದೇಶದಲ್ಲಿ ಪತ್ನಿ ಯಂಗ್ ಸೂಕ್ ಆನ್ ಳನ್ನು ಜೀವಂತ ಸಮಾಧಿ ಮಾಡಿದ್ದಾನೆ. ಆದರೆ ಅವಳ ಕೈಯಲ್ಲಿದ್ದ ಆಪಲ್ ಸ್ಮಾರ್ಟ್ ವಾಚ್… ರಾಕ್ಷಸ ಗಂಡನಿಂದ ಅವಳನ್ನು ದೇವರಂತೆ ಕಾಪಾಡಿತು. ಆ ಸ್ಮಾರ್ಟ್ ವಾಚ್ ಸಹಾಯದಿಂದ, ಪತ್ನಿ ಯಂಗ್ ಸೂಕ್ ಆನ್ ತುರ್ತು ಸಂಖ್ಯೆ 911 ಗೆ ಕರೆ ಮಾಡಿದ್ದಾಳೆ. ಸಮಯಕ್ಕೆ ಸರಿಯಾಗಿ ಮಧ್ಯ ಪ್ರವೇಶಿಸಿದ ಪೊಲೀಸರು ಮಹಿಳೆಯನ್ನು ರಕ್ಷಿಸಿದ್ದಾರೆ. ಆಗಲೇ ಆಕೆ ತೀವ್ರ ಅಸ್ವಸ್ಥಳಾಗಿದ್ದರಿಂದ ಪೊಲೀಸರು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಏತನ್ಮಧ್ಯೆ, ಘಟನೆಯ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ. ಪ್ರಕರಣ Thurston County Superior Court ಮೆಟ್ಟಿಲೇರಿದೆ ಎಂದು Daily Mail ವರದಿ ಮಾಡಿದೆ.
Published On - 12:56 pm, Wed, 26 October 22