ಡ್ರಾಪ್ ಪ್ಲೀಸ್! ದೀಪಾವಳಿಗೆ ಮನೆಗೆ ಹೋಗಬೇಕು ಬೇಗ ಬಾಗಿಲು ತೆರೆಯಣ್ಣೋ
Elephant : ಬೇಗ ಬಾಗಿಲು ತೆರೆಯಬಾರದೇ ಎಂದು ಆನೆ. ಈ ಆನೆ ಬಸ್ಸನ್ನೇ ಎತ್ತಿ ಹಾಕಿದರೆ ಎಂದು ಪ್ರಯಾಣಿಕರು, ಈ ಆನೆಗೂ, ಪ್ರಯಾಣಿಕರಿಗೂ ತೊಂದರೆಯಾಗದಂತೆ ಚಲಿಸಬೇಕು ಎಂದು ಡ್ರೈವರ್. ಕೊನೆಗೆ ಏನಾಯಿತು?
Viral Video : ಸಾಮಾಜಿಕ ಜಾಲತಾಣಗಳಲ್ಲಿರುವ ಪ್ರಾಣಿಗಳ ವಿಡಿಯೋ ನೋಡುತ್ತಿದ್ದರೆ ಎಂಥ ಒತ್ತಡವೂ ಜರ್ರನೇ ಇಳಿದು ಹೋಗುತ್ತದೆ. ಅವುಗಳ ನಡೆ, ಹಾವಭಾವವನ್ನು ನೋಡಿದ ಯಾರಿಗೂ ಮುದ್ದು ಉಕ್ಕಿಬರುತ್ತದೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಆನೆಯ ದಾರಿಯಲ್ಲಿ ಬಸ್ಸೊಂದು ಬರುತ್ತಿದೆ. ಅದನ್ನು ತಡೆದು ನಿಲ್ಲಿಸುವ ಆನೆ ಬಸ್ಸಿನ ಬಾಗಿಲುಗಳನ್ನು ತೆರೆಯಲು ಪ್ರಯತ್ನಿಸುತ್ತದೆ. ಮುಂದೇನಾಗುತ್ತದೆ?
#दिवाली की छुट्टियों में सभी जल्द से जल्द घर पहुँचना चाहते है… ? pic.twitter.com/xaC4ANg2Dy
ಇದನ್ನೂ ಓದಿ— Dipanshu Kabra (@ipskabra) October 22, 2022
ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ ಈ ವಿಡಿಯೋ ಟ್ವೀಟ್ ಮಾಡಿದ್ದಾರೆ. ‘ದೀಪಾವಳಿ ಸಮಯ ನೋಡಿ. ಎಲ್ಲರಿಗೂ ಅವರವರ ಮನೆ ತಲುಪುವ ಅವಸರವಿರುತ್ತದೆ’ ಎಂದು ಈ ವಿಡಿಯೋಗೆ ಒಕ್ಕಣೆ ಬರೆದಿದ್ದಾರೆ. ಆದರೆ ಡ್ರೈವರಣ್ಣನಿಗೆ ಅಷ್ಟೊಂದು ಪ್ರಯಾಣಿಕರ ಚಿಂತೆ! ಆನೆಯನ್ನು ಸಿಟ್ಟಿಗೆಬ್ಬಿಸದೆ ಉಪಾಯದಿಂದ ಅಲ್ಲಿಂದ ದಾಟಿಕೊಂಡಿದ್ದಾನೆ. ಈಗಾಗಲೇ ಈ ವಿಡಿಯೋ ಅನ್ನು 1.4 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ಧಾರೆ. 1,500ಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ.
ಮೊದಲು ಬಸ್ ನಿಲ್ಲಿಸಲು ಚಾಲಕನಿಗೆ ಮನವಿ ಮಾಡಿ ನಂತರ ಬಸ್ಸಿನೊಳಗೆ ಹತ್ತಬೇಕು ಎಂದಕೊಂಡಹಾಗಿದೆ ಈ ಆನೆ ಎಂದಿದ್ದಾರೆ ಒಬ್ಬರು. ಎಷ್ಟು ಕುತೂಹಲದಿಂದ ಈ ಆನೆ ಬಸ್ಸಿನಲ್ಲಿ ಚಲಿಸಲು ಕಾಯುತ್ತಿದೆಯಲ್ಲವಾ ಎಂದಿದ್ದಾರೆ ಇನ್ನೂ ಒಬ್ಬರು. ಈ ಬಸ್ ತುಂಬಿತುಳುಕುತ್ತಿದೆ. ಹಿಂದೆ ಬರುತ್ತಿರುವ ಬಸ್ ಖಾಲಿ ಇದೆ, ಅದರಲ್ಲಿ ನೀ ಕುಳಿತುಕೊಂಡು ಹೋಬಹುದು ಎಂದು ತಮಾಷೆ ಮಾಡಿದ್ದಾರೆ ಮಗದೊಬ್ಬರು.
ನಿಮ್ಮನ್ನು ಹೀಗೆ ಈ ಆನೆ ಅಡ್ಡಗಟ್ಟಿದರೆ ಏನು ಮಾಡುತ್ತೀರಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 5:02 pm, Wed, 26 October 22