AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೋ ಪಾರ್ಕಿಂಗ್​; ದಲೇರ್​ ಮೆಹಂದಿಯನ್ನು ಆವಾಹಿಸಿಕೊಳ್ಳುವ ಈ ಸಂಚಾರಿ ಪೊಲೀಸ್​ ವಿಡಿಯೋ

Traffic Police : ಪಾಪ, ಕೀಲುಗೊಂಬೆಗಳಂತಾಡುತ್ತ ಇಡೀ ದಿನ ಇವರು ಹೀಗೆ ರಸ್ತೆಯಲ್ಲಿರಬೇಕು. ‘ನಿನಗೆ ನೀನೇ ಗೆಳೆಯ’ ಎನ್ನುವುದು ಈ ಸಂಚಾರಿ ಪೊಲೀಸರಿಗೆ ಅರ್ಥವಾಗಿದೆ. ಇವರು​ ವೃತ್ತಿಪರ ಗಾಯಕರಂತೆ ತೋರುತ್ತಾರೆ. ನೋಡಿ ಈ ವಿಡಿಯೋ.

ನೋ ಪಾರ್ಕಿಂಗ್​; ದಲೇರ್​ ಮೆಹಂದಿಯನ್ನು ಆವಾಹಿಸಿಕೊಳ್ಳುವ ಈ ಸಂಚಾರಿ ಪೊಲೀಸ್​ ವಿಡಿಯೋ
Chandigarh cop sings song inspired by Daler Mehndi about no parking
TV9 Web
| Updated By: ಶ್ರೀದೇವಿ ಕಳಸದ|

Updated on: Oct 26, 2022 | 11:55 AM

Share

Viral Video : ಯಾಂತ್ರಿಕವಾಗಿ ಬದುಕುವುದರಿಂದ ಜೀವನದಲ್ಲಿ ಜಿಗುಪ್ಸೆ ಉಂಟಾಗಿ ಎಷ್ಟೋ ಸಲ ಖಿನ್ನತೆಗೆ ಜಾರುತ್ತೇವೆ. ಆದರೆ ಮನುಷ್ಯ ಮೂಲತಃ ಸೃಜನಶೀಲಜೀವಿ. ತನ್ನ ಮನಸ್ಸನ್ನು ಆಹ್ಲಾದವಾಗಿರಿಸಿಕೊಳ್ಳಲು ಅವನಲ್ಲಿಯೇ ಸಾಕಷ್ಟು ಉಪಾಯಗಳುಂಟು. ಆ ಉಪಾಯಗಳಲ್ಲಿ ಕಲೆಯೂ ಒಂದು. ಇದೀಗ ವೈರಲ್ ಆಗುತ್ತಿರುವ ವಿಡಿಯೋ ನೋಡಿ. ಗಗನ್ ಖುರಾನಾ ಎಂಬ ಟ್ವಿಟರ್ ಖಾತೆದಾರರು ಈ ವಿಡಿಯೋ ಹಂಚಿಕೊಂಡಿದ್ದಾರೆ. ಚಂಡೀಘಡದ ರಸ್ತೆಬದಿ ನಿಂತು ಹಾಡುತ್ತಿರುವ ಈ ಸಂಚಾರಿ ಪೊಲೀಸರ ಉತ್ಸಾಹವನ್ನು ನೋಡಿ ಮತ್ತು ಅವರ ಹಾಡನ್ನು ಕೇಳಿ.

ಗಾಯಕ ದಲೇರ್ ಮೆಹಂದಿಯ ಬೋಲೋ ತಾರಾರಾರಾ ಹಾಡು ನೆನಪಾಯಿತಾ? 23 ವರ್ಷಗಳಿಂದಲೂ ಈ ಹಾಡನ್ನು ಇನ್ನೂ ಜನ ಆನಂದಿಸುತ್ತಿದ್ದಾರೆ, ಹಾಗಿದೆ ಈ ಟ್ಯೂನ್​. ಚಂಡೀಗಢದ ಈ ಸಂಚಾರಿ ಪೊಲೀಸ್​ ಮೈಕ್​ ಹಿಡಿದುಕೊಂಡು ಸಂಚಾರಿ ನಿಯಮ ಪಾಲಿಸಲು ಈ ಹಾಡಿನ ಮೂಲಕ ಸಲಹೆಗಳನ್ನು ಕೊಡುತ್ತಿದ್ದಾರೆ. ರಸ್ತೆಯಲ್ಲಿ ನಡೆಯುತ್ತಿರುವ ಆರ್ಕೆಸ್ಟ್ರಾದಂತೆ ಗೋಚರಿಸುತ್ತದೆ ಈ ದೃಶ್ಯ. ಪಾರ್ಕಿಂಗ್​ ಸ್ಥಳದಲ್ಲಿಯೇ ವಾಹನಗಳನ್ನು ನಿಲ್ಲಿಸಬೇಕು ಎನ್ನುವ ಸಂದೇಶವನ್ನು ಈ ಹಾಡು ನೀಡುತ್ತಿದೆ. ಈ ವಿಡಿಯೋ ಅನ್ನು ಈತನಕ 1,50,000 ಜನರು ನೋಡಿದ್ದಾರೆ ಮತ್ತು ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ.

ನಿಮಗೇನು ಅನ್ನಿಸುತ್ತೆ ಈ ವಿಡಿಯೋ ನೋಡುತ್ತಿದ್ದಂತೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ 

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!