ಇದು ಮದುವೆ ಸೀಸನ್. ನಾವೆಲ್ಲರೂ ಸಾಮಾಜಿಕ ಮಾಧ್ಯಮದಲ್ಲಿ ಮದುವೆಯ (wedding) ಪೂರ್ವ ಮತ್ತು ಮದುವೆ ಘಳಿಗೆಯ ಫೋಟೋಗಳನ್ನು ನೋಡಿದ್ದೇವೆ- ಸುಂದರವಾದ ವಧು (Bride) ತನ್ನ ವರನೊಂದಿಗೆ (Groom) ಸುಂದರವಾದ ಸ್ಥಳಗಳಲ್ಲಿ ಪೋಸ್ ನೀಡುತ್ತಿರುತ್ತಾರೆ. ಈ ಫೋಟೋಗಳು ಸದಾ ಬೆರಗುಗೊಳಿಸುತ್ತವೆ. ಇಂತಹ ಸಾಮಾಜಿಕ ಜಾಲತಾಣದ ಪೋಸ್ಟ್ಗಳು (Social Media) ನೂರಾರು ‘ಲೈಕ್ಗಳು/ ಹಂಚಿಕೆಗಳನ್ನು’ ಗಳಿಸಲು ಯಶಸ್ವಿಯಾಗುತ್ತದೆ ( Instagram). ಈಗ ಇಂತಹುದೇ ಒಂದು ಪ್ರಸಂಗ ವೈರಲ್ ಆಗಿದೆ- ಸ್ವಲ್ಪ ವಿಭಿನ್ನ ಕಾರಣಕ್ಕಾಗಿ! ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ (video) ನವ ಜೋಡಿ ನೃತ್ಯ ಮಾಡುವುದನ್ನು ತೋರಿಸುತ್ತದೆ. ಇದ್ದಕ್ಕಿದ್ದಂತೆ ವರನು ವಧುವಿನ ಲೆಹೆಂಗಾದಲ್ಲಿ ತೂರಿಕೊಂಡು ನೆಲದ ಮೇಲೆ ಬೀಳುತ್ತಾನೆ!
ಜೈಪುರ ಪ್ರೀ ವೆಡ್ಡಿಂಗ್ಸ್ (Jaipur Pre weddings) ಹೆಸರಿನ ಇನ್‌ಸ್ಟಾಗ್ರಾಮ್‌ನಲ್ಲಿ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ ಮತ್ತು ಇದು ಲೆಹೆಂಗಾವನ್ನು ಧರಿಸಿರುವ ವಧು ಶೆರ್ವಾನಿಯನ್ನು ಆಯ್ಕೆ ಮಾಡಿಕೊಂಡಿದ್ದ ವರನೊಂದಿಗೆ ನೃತ್ಯ ಮಾಡುವುದನ್ನು ತೋರಿಸುತ್ತದೆ. ದಂಪತಿ ಫೋಟೋ ಶೂಟ್‌ಗಾಗಿ ಸುತ್ತುತ್ತಿರುವುದನ್ನು ಕಾಣಬಹುದು ಮತ್ತು ಇದ್ದಕ್ಕಿದ್ದಂತೆ ವರನು ಸಮತೋಲನವನ್ನು ಕಳೆದುಕೊಂಡು ವಧುವಿನ ಜೊತೆಗೆ ನೆಲದ ಮೇಲೆ ಬೀಳುತ್ತಾನೆ. ಡಿಸೆಂಬರ್ 15 ರಂದು ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಅಂದಹಾಗೆ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ 12.6 ಮಿಲಿಯನ್ ವ್ಯೂಸ್ ಕಂಡಿದೆ (trending news).
ವಿಡಿಯೋ ವೀಕ್ಷಿಸಿ:
ಈ ವೀಡಿಯೊ Instagram ನಲ್ಲಿ 12.6 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಜೊತೆಗೆ 5 ಲಕ್ಷಕ್ಕೂ ಹೆಚ್ಚು ಹಂಚಿಕೆಗಳಾಗಿವೆ. ಅದಕ್ಕಿಂತ ಹೆಚ್ಚಿಗೆ ಹಲವಾರು ಕಾಮೆಂಟ್‌ಗಳು ಹರಿದುಬಂದಿವೆ. ‘ಖಂಡಿತವಾಗಿಯೂ ಪ್ರೀತಿಯಲ್ಲಿ ಬಿದ್ದಿದ್ದಾನೆ!’ ಎಂದೊಬ್ಬರು ನೇರವಾಗಿ ಛೇಡಿಸಿದ್ದಾರೆ.
ಮತ್ತೊಬ್ಬInstagram ಬಳಕೆದಾರ, ‘ಮದುವೆಯನ್ನು ಹೀಗೆ ಏರ್ಪಡಿಸುವುದು ನೋಡಿದರೆ ಭಯಾನಕವಾಗಿದೆ. ಮದುವೆಯ ದಿನ ನೀವು ಪ್ರೀತಿಯಲ್ಲಿ ಬಿದ್ದರೆ ಏನು’ ಎಂದು ಪ್ರತಿಕ್ರಿಯಿಸಿದ್ದಾರೆ.
‘ಜಿಮ್‌ಗೆ ಹೋದ ನಂತರ ನೀವು ಕಾಲಿನ ವ್ಯಾಯಾಮ ಮಾಡಿದ್ದರೆ, ಇಲ್ಲಿ ಬ್ಯಾಲೆನ್ಸ್ ಮಾಡುತ್ತಿದ್ದಿರಿ ಬ್ರೋ’ ಎಂದು ಮಗದೊಬ್ಬ ಬಳಕೆದಾರರು ತಮ್ಮ ಅಮೂಲ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ನಾನು ನಗಬಾರದು, ಸೀರಿಯಸ್ಲೀ ನಾನು ತುಂಬಾ ನಗುತ್ತಿದ್ದೇನೆ’ ಎಂದು ಮತ್ತೊಬ್ಬರು ಬರೆದಿದ್ದಾರೆ.