ಈ ಜಗತ್ತಿನಲ್ಲಿ ತಾಯಿ ಪ್ರೀತಿಗೆ ಸರಿಸಾಟಿ ಯಾವುದು ಇಲ್ಲ. ಯಾವುದೇ ಸ್ವಾರ್ಥವಿಲ್ಲದೆ ನಿಷ್ಕಲ್ಮಶ ಪ್ರೀತಿಯನ್ನು ತೋರುವ ಜೀವವವೊಂದಿದೆಯೆಂದರೆ ಅದು ತಾಯಿ ಮಾತ್ರ. ಕೇವಲ ಮನುಷ್ಯರು ಮಾತ್ರವಲ್ಲ, ಪ್ರಾಣಿಗಳು ಸಹ ತಮ್ಮ ಮರಿಗಳನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತವೆ, ಜೋಪಾನವಾಗಿ ನೋಡಿಕೊಳ್ಳುತ್ತವೆ. ಅಲ್ಲದೆ ವೈರಿಗಳ ದಾಳಿಯಿಂದ ತಮ್ಮ ಮರಿಗಳನ್ನು ರಕ್ಷಿಸಲು ಈ ಪ್ರಾಣಿಗಳು ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತವೆ. ಪ್ರಾಣಿ ಸಾಮ್ರಾಜ್ಯದ ಇಂತಹ ಹಲವಾರು ಹೃದಯಸ್ಪರ್ಶಿ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ. ಈಗ ಅಂತಹದ್ದೇ ವಿಡಿಯೋವೊಂದು ಹರಿದಾಡುತ್ತಿತ್ತು, ಪಂಜರದೊಳಗೆ ಬಂಧಿಯಾಗಿದ್ದ ಮರಿಕೋತಿಯನ್ನು, ತಾಯಿ ಕೋತಿ ತನ್ನ ಧೈರ್ಯ ಮತ್ತು ಸಾಹಸದಿಂದ ಬಿಡಿಸಿಕೊಂಡು ತನ್ನ ಮಗುವಿನ ರಕ್ಷಣೆಯನ್ನು ಮಾಡಿದೆ. ಈ ವಿಡಿಯೋವನ್ನು ನೋಡಿದ ಅನೇಕರು ತಾಯಿ ಪ್ರೀತಿಗೆ ಸರಿಸಾಟಿ ಯಾವುದೂ ಇಲ್ಲ ಎಂದು ಭಾವುಕರಾಗಿದ್ದಾರೆ.
@gunsnrosesgirl13 ಈ ವಿಡಿಯೋವನ್ನು ಎಂಬ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಪಂಜರದೊಳಗೆ ಬಂಧಿಯಾಗಿದ್ದ ಕೋತಿ ಮರಿಯನ್ನು, ತಾಯಿಕೋತಿ ತನ್ನ ಧೈರ್ಯ ಮತ್ತು ಬುದ್ಧಿವಂತಿಕೆಯಿಂದ ಪಂಜರದಿಂದ ಬಿಡಿಸಿ ರಕ್ಷಣೆ ಮಾಡುವಂತಹ ಹೃದಯಸ್ಪರ್ಶಿ ದೃಶ್ಯವನ್ನು ಕಾಣಬಹುದು.
The way this mother reached for her baby
pic.twitter.com/BOB88CDb9Q— Science girl (@gunsnrosesgirl3) December 19, 2023
20 ಸೆಕೆಂಡುಗಳ ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಪುಟ್ಟ ಕೋತಿಮರಿಯನ್ನು ಪಂಜರದೊಳಗೆ ಬಂಧಿಸಿರುತ್ತಾನೆ. ಅಲ್ಲಿ ಹಲವಾರು ಕೋತಿಗಳಿದ್ದರೂ, ಈ ಮರಿಯನ್ನು ಯಾರಿದಂಲೂ ರಕ್ಷಿಸಲು ಸಾಧ್ಯವಾಗಲಿಲ್ಲ, ಹೀಗೆ ಸುಮ್ಮನೆ ಮನುಷ್ಯರಿಗೆ ಹೆದರಿಕೊಂಡು ನಿಂತರೆ ನನ್ನ ಮಗುವನ್ನು ನಾನು ಶಾಶ್ವತವಾಗಿ ಕಳೆದುಕೊಳ್ಳಬೇಕಾಗುತ್ತದೆ ಎಂದು ಭಾವಿಸಿದ ತಾಯಿ ಕೋತಿ, ಧೈರ್ಯವಾಗಿ ಮುನ್ನುಗ್ಗಿ, ಮರಿ ಕೋತಿಯನ್ನು ಬಂಧಿಸಿದ್ದ, ಪಂಜರವನ್ನೇ ಎತ್ತಿಕೊಂಡು ಬಂದು, ಪಂಜರದಿಂದ ಮರಿಯನ್ನು ಬಿಡಿಸಿಕೊಂಡು, ದೇವ್ರೇ ನನ್ನ ಮಗು ಕೊನೆಗೂ ನನ್ನ ಮಡಿಲು ಸೇರಿತಲ್ವಾ ಎಂದು ನಿಟ್ಟುಸಿರು ಬಿಡುತ್ತಾ ಮರಿ ಕೋತಿಯನ್ನು ಮಡಿಲಲ್ಲಿ ಮಲಗಿಸಿ ಮುದ್ದಾಡುವ ಹೃದಯಸ್ಪರ್ಶಿ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಭಾರೀ ಸುದ್ದಿಯಾಗಿದ್ದ ಲವ್ ಗುರು ಮಾತುಕನಾಥ್ – ಜೂಲಿ ಲವ್ ಸ್ಟೋರಿ, ಈಗ ಬ್ರೇಕಪ್ ಮಾಡಿಕೊಂಡಿದ್ದು ಏಕೆ?
ಡಿಸೆಂಬರ್ 19 ರಂದು ಹಂಚಿಕೊಳ್ಳಲಾದ ಈ ವಿಡಿಯೋ 15.8 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ ಹಾಗೂ ಹಲವಾರು ಲೈಕ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕದಾರರು ʼತಾಯಿ ಪ್ರೀತಿಗೆ ಸರಿಸಾಟಿ ಯಾವುದು ಇಲ್ಲʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼತಾಯಿ ಮತು ಮಗುವನ್ನು ಯಾರಿಂದಲೂ ದೂರಮಾಡಲು ಸಾಧ್ಯವಿಲ್ಲ. ಆ ಕೋತಿ ಮರಿಯನ್ನು ಪಂಜರದೊಳಗೆ ಬಂಧಿಸಿದ ವ್ಯಕ್ತಿಯನ್ನು ಜೈಲಿಗೆ ಹಾಕಬೇಕುʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಈ ತಾಯಿಯ ನಿಷ್ಕಲ್ಮಶ ಪ್ರೀತಿಯನ್ನು ಕಂಡು ಭಾವುಕರಾಗಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ: