
ಇಂದಿನ ಡಿಜಿಟಲ್ ಯುಗದಲ್ಲಿ ಎಐ (Artificial intelligence) ತಂತ್ರಜ್ಞಾನ ಅಂದರೆ ಕೃತಕ ಬುದ್ಧಿಮತ್ತೆ ವೈದ್ಯಕೀಯ ಕ್ಷೇತ್ರದಿಂದ ಹಿಡಿದು ಶಿಕ್ಷಣದವರೆಗೆ ಪ್ರತಿಯೊಂದು ಕ್ಷೇತ್ರವನ್ನು ಆವರಿಸಿದೆ. ಇನ್ನೂ ಎಐ (AI) ತಂತ್ರಜ್ಞಾನದ ಸಹಾಯದಿಂದ ಅಸಾಧ್ಯವಾದದ್ದನ್ನು ಸಾಧ್ಯ ಮಾಡಿ ತೋರಿಸುವಂತಹ ವಿಡಿಯೋ, ಫೋಟೋ ಎಡಿಟಿಂಗ್‌ಗಳನ್ನು ಕೂಡಾ ಮಾಡುತ್ತಾರೆ. ಇಂತಹ ಸಾಕಷ್ಟು ಅಚ್ಚರಿಯ ಫೋಟೋ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಈ ಮೊದಲು ಕೂಡಾ ವೈರಲ್ ಆಗಿವೆ. ಇದೀಗ ಅಂತಹದ್ದೇ ಮತ್ತೊಂದು ಎಐ ಕೈ ಚಳಕದ ವಿಡಿಯೋ ವೈರಲ್ ಆಗಿದ್ದು, ಈ ವಿಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಟೈಮ್ ಟ್ರಾವೆಲಿಂಗ್ (time traveling) ಮಾಡುತ್ತಾ ಸುಭಾಷ್‌ಚಂದ್ರ ಬೋಸ್‌ರಿಂದ ಹಿಡಿದು ಶ್ರೀರಾಮನ ವರೆಗೆ ಮಹಾತ್ಮರನ್ನು ಭೇಟಿ ಮಾಡಿ ಬರುವ ಅದ್ಭುತ ದೃಶ್ಯವನ್ನು ಕಂಡು ನೆಟ್ಟಿಗರು ಬೆರಗಾಗಿದ್ದಾರೆ.
ಟೈಮ್ ಟ್ರಾವೆಲಿಂಗ್ ನಿಜವೋ ಅಲ್ಲವೋ ಗೊತ್ತಿಲ್ಲ, ಆದ್ರೆ ಎಐ ತಂತ್ರಜ್ಞಾನ ಇಂತಹದ್ದೊಂದು ಅದ್ಭುತ ಕಲ್ಪನೆಯನ್ನು ಸೃಷ್ಟಿಸಿದೆ. ಈ ದೃಶ್ಯದಲ್ಲಿ ಪ್ರಧಾನಿ ಮೋದಿ ಮತ್ತು ಉತ್ತರ ಪ್ರದೇಶದ ಸಿ.ಎಂ ಯೋಗಿ ಆದಿತ್ಯನಾಥ್ ಅವರು ಸುಭಾಷ್‌ಚಂದ್ರ ಬೋಸ್, ಚಂದ್ರಶೇಖರ್ ಆಜಾದ್, ಸ್ವಾಮಿ ವಿವೇಕಾನಂದರು, ಶಿವಾಜಿ, ಆದಿ ಶಂಕರಾಚಾರ್ಯರು, ಚಾಣಕ್ಯ, ಆಂಜನೇಯ, ಶ್ರೀಕೃಷ್ಣ, ಶ್ರೀರಾಮರನ್ನು ಭೇಟಿಯಾಗಿ ಅವರ ಆಶೀರ್ವಾದ ಮತ್ತು ಮಾರ್ಗದರ್ಶನ ಪಡೆದು ಬರುವ ದೃಶ್ಯವನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Modiji and Yogiji Travels back in Time! #TimeTravel #NarendraModi pic.twitter.com/yKC6m4Yj3H
— Artificial Budhi (@artificialbudhi) May 19, 2025
Artificial Budhi ಹೆಸರಿನ ಎಕ್ಸ್ ಖಾತೆಯಲ್ಲಿ ಈ ಕುರಿತ ವಿಡಿಯೋವನ್ನು ಶೇರ್ ಮಾಡಲಾಗಿದ್ದು, “ಟೈಮ್ ಟ್ರಾವೆಲಿಂಗ್ ಮಾಡಿದ ಮೋದಿಜಿ ಮತ್ತು ಯೋಗಿಜಿ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ. ಈ ವೈರಲ್ ವಿಡಿಯೋದಲ್ಲಿ ಮೋದಿಜಿ ಮತ್ತು ಯೋಗಿಜಿ ಟೈಮ್ ಟ್ರಾವೆಲರ್ ಮುಖಾಂತರ ಸುಭಾಷ್‌ಚಂದ್ರ ಬೋಸ್‌ರಿಂದ ಹಿಡಿದು ಶ್ರೀರಾಮನವರೆಗೆ ಶ್ರೇಷ್ಠರನ್ನು ಭೇಟಿಯಾಗಿ ಅವರಿಂದ ಆಶೀರ್ವಾದ ಪಡೆದು ಬರುವಂತಹ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಫ್ರೀಯಾಗಿ ಕೊಟ್ಟ ಚಟ್ನಿಯ ಹೆಸ್ರನ್ನೂ ಬಿಲ್‌ನಲ್ಲಿ ನಮೂದಿಸಿದ ಬೆಂಗಳೂರಿನ ಹೋಟೆಲ್; ವೈರಲ್ ಆಯ್ತು ಪೋಸ್ಟ್
ಮೇ 19 ರಂದು ಶೇರ್ ಮಾಡಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ವಿಡಿಯೋ ತುಂಬಾ ಅದ್ಭುತವಾಗಿದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼತುಂಬಾ ಚೆನ್ನಾಗಿ ಮೂಡಿಬಂದಿದೆʼ ಎಂದು ಕಲಾವಿದನ್ನು ಶ್ಲಾಘಿಸಿದ್ದಾರೆ. ಇನ್ನೂ ಅನೇಕರು ಈ ಸುಂದರ ದೃಶ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ