Viral Post: ಮದುವೆ ದುಡ್ಡಿನಲ್ಲಿ ಮನೆ ಖರೀದಿಸಿ, ಹೊಸ ಮನೆಯಲ್ಲೇ ಸಿಂಪಲ್​ ಆಗಿ ವಿವಾಹವಾದ ಜೋಡಿ

ಮದುವೆಗೆ ಸಾಲ ಮಾಡಿ ಅದ್ದೂರಿಯಾಗಿ ವಿವಾಹವಾಗುವ ಬದಲು, ಇಲ್ಲೊಂದು ಜೋಡಿ ತಮ್ಮ ಮದುವೆಯ ಬಜೆಟ್‌ನಲ್ಲಿ ಮನೆ ಖರೀದಿಸಿ, ಹೊಸ ಮನೆಯಲ್ಲೇ ಸರಳವಾಗಿ ಮದುವೆಯಾಗಿದ್ದಾರೆ. ಟ್ವಿಟರ್​ ಖಾತೆಯಲ್ಲಿ ಈ ವಿಶಿಷ್ಟ ಮದುವೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಸದ್ಯ ಪೋಸ್ಟ್ ಎಲ್ಲೆಡೆ ವೈರಲ್ ಆಗುತ್ತಿದೆ. ಆಡಂಬರದ ಮದುವೆಗಿಂತ ಆರ್ಥಿಕ ಭದ್ರತೆಗೆ ಆದ್ಯತೆ ನೀಡಿದ ಈ ನಿರ್ಧಾರಕ್ಕೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

Viral Post: ಮದುವೆ ದುಡ್ಡಿನಲ್ಲಿ ಮನೆ ಖರೀದಿಸಿ, ಹೊಸ ಮನೆಯಲ್ಲೇ ಸಿಂಪಲ್​ ಆಗಿ ವಿವಾಹವಾದ ಜೋಡಿ
ಹೊಸ ಮನೆಯಲ್ಲೇ ವಿವಾಹವಾದ ಜೋಡಿ

Updated on: Feb 08, 2026 | 12:08 PM

ಮದುವೆ ಜೀವನ ಒಂದು ಮುಖ್ಯ ಭಾಗ ಮತ್ತು ಅದು ಎಲ್ಲ ರೀತಿಯಲ್ಲೂ ಪರಿಪೂರ್ಣವಾಗಬೇಕೆಂಬ ಆಸೆಯಿಂದ ಸಾಕಷ್ಟು ಜನರು ಸಾಲ ಮಾಡಿ ಅದ್ದೂರಿಯಾಗಿ ವಿವಾಹವಾಗುತ್ತಾರೆ. ಇತ್ತೀಚಿನ ದಿನಗಳಲ್ಲಿ ವೆಡ್ಡಿಂಗ್​ ಲೋನ್​ ಕೂಡ ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಮದುವೆ ಆಗಿ ವರ್ಷಗಳೇ ಕಳೆದರೂ ಕೂಡ ಖುಷಿಗಿಂತ ಸಾಲ ಮುಗಿದಿಲ್ಲ ಎಂಬ ಚಿಂತೆಯೇ ಜೋಡಿಯನ್ನು ಹೆಚ್ಚು ಕಾಡುತ್ತಿರುತ್ತದೆ. ಆದರೆ ಇಲ್ಲೊಂದು ಜೋಡಿ ಒಂದು ದಿನದ ಆಚರಣೆಗಾಗಿ ಲಕ್ಷಗಟ್ಟಲೆ ಹಣ ಖರ್ಚು ಮಾಡುವ ಬದಲು, ಆ ದುಡ್ಡಿನಲ್ಲಿ ತಮ್ಮ ಜೀವನದುದ್ದಕ್ಕೂ ಆಸರೆಯಾಗುವ ಮನೆಯೊಂದನ್ನು ಖರೀದಿಸಿದ್ದಾರೆ. ಈ ಮೂಲಕ ಮದುವೆ ದುಡ್ಡಿನಲ್ಲಿ ಮನೆ ಖರೀದಿಸಿ, ಹೊಸ ಮನೆಯಲ್ಲೇ ಸಿಂಪಲ್​​ ಆಗಿ ಮದುವೆಯಾಗಿದ್ದಾರೆ.

@ArnazHathiram ಎಂಬ ಟ್ವಿಟರ್​ ಖಾತೆಯಲ್ಲಿ ಈ ವಿಶಿಷ್ಟ ಮದುವೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಸಸದ್ಯ ಪೋಸ್ಟ್ ಎಲ್ಲೆಡೆ ವೈರಲ್ ಆಗುತ್ತಿದೆ. ಪೋಸ್ಟ್​ನಲ್ಲಿ ಹೊಸ ಮನೆಯಲ್ಲೇ ವಿವಾಹವಾಗಿರುವ ಫೋಟೋವನ್ನು ಕಾಣಬಹುದು. ನವ ಜೋಡಿಯ ಈ ನಿರ್ಧಾರಕ್ಕೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ: ಪ್ರೀತಿಗೆ ಒಪ್ಪಿಲ್ಲವೆಂದು ಶಿಕ್ಷಕಿಯ ತುಟಿ ಕಚ್ಚಿ ತುಂಡರಿಸಿದ ಪಿಯುಸಿ ವಿದ್ಯಾರ್ಥಿ; ಸಿಸಿಟಿವಿ ದೃಶ್ಯ ಇಲ್ಲಿದೆ ನೋಡಿ

ಬಂದ ಅತಿಥಿಗಳಿಗೆ ಹೆಚ್ಚು ಖರ್ಚು ಮಾಡದೆ, ತಮ್ಮ ಕನಸಿನ ಮನೆಯಲ್ಲಿ ತಮ್ಮ ಪ್ರೀತಿಪಾತ್ರರ ಸಮ್ಮುಖದಲ್ಲಿ ಅತ್ಯಂತ ಸರಳ ರೀತಿಯಲ್ಲಿ ವಿವಾಹವಾಗಿದ್ದಾರೆ. ಮದುವೆಯ ಹೆಸರಿನಲ್ಲಿ ಸಾಲ ಮಾಡಿ ನಂತರ ಉಂಟಾಗುವ ಆರ್ಥಿಕ ತೊಂದರೆಗಳಿಗಿಂತ ಇಂತಹ ಪ್ರಾಯೋಗಿಕ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ ಎಂದು ಈ ದಂಪತಿ ಸಾಬೀತುಪಡಿಸಿದ್ದಾರೆ. ಕೇವಲ ಪ್ರದರ್ಶನಕ್ಕಾಗಿ ಅಲ್ಲ, ಭವಿಷ್ಯದ ಭದ್ರತೆಗಾಗಿ ಹೂಡಿಕೆ ಮಾಡುವುದು ಉತ್ತಮ ವಿಷಯ ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್ನ್ಲಿ ಬರೆದುಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ