AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ತನಗಿಂತ ಸಣ್ಣ ವಯಸ್ಸಿನವರು ಹೆಚ್ಚು ಸಂಪಾದನೆ ಮಾಡ್ತಾರೆ; ವೃತ್ತಿ ಬದುಕಿನ ಕರಾಳ ಮುಖ ಬಿಚ್ಚಿಟ್ಟ ವ್ಯಕ್ತಿ

ಕೈಯಲ್ಲಿ ದುಡ್ಡಿದ್ರೆ ಮಾತ್ರ ಮರ್ಯಾದೆ. ಹೀಗಾಗಿ ಎಷ್ಟೇ ಕಷ್ಟ ಆದ್ರೂ ದುಡಿದು ಎಲ್ಲರಂತೆ ತಾವು ಬದುಕಬೇಕು ಎಂದುಕೊಳ್ಳೋದು ಸಹಜ. ಹೀಗಿರುವಾಗ ವ್ಯಕ್ತಿಯೊಬ್ಬರು 32 ನೇ ವಯಸ್ಸಿನಲ್ಲಿ ತನಗಿಂತ ಸಣ್ಣವರು ಹೆಚ್ಚು ಸಂಪಾದನೆ ಮಾಡ್ತಾರೆ. ತನ್ನ ದುಡಿಮೆ, ವೃತ್ತಿಪರ ಹಾಗೂ ವೈಯುಕ್ತಿಕ ಜೀವನದ ಹೋರಾಟದ ಹಾದಿಯನ್ನು ವಿವರಿಸಿದ್ದಾರೆ. ಈ ಕುರಿತಾದ ಎಕ್ಸ್ ಪೋಸ್ಟ್ ಸದ್ಯ ವೈರಲ್ ಆಗಿದೆ.

Viral: ತನಗಿಂತ ಸಣ್ಣ ವಯಸ್ಸಿನವರು ಹೆಚ್ಚು ಸಂಪಾದನೆ ಮಾಡ್ತಾರೆ; ವೃತ್ತಿ ಬದುಕಿನ ಕರಾಳ ಮುಖ ಬಿಚ್ಚಿಟ್ಟ ವ್ಯಕ್ತಿ
ಸಾಂದರ್ಭಿಕ ಚಿತ್ರImage Credit source: Getty Images
ಸಾಯಿನಂದಾ
|

Updated on: Jun 29, 2026 | 4:25 PM

Share

ಕೈ ತುಂಬಾ ಸಂಬಳ ಸಿಗೋ ದುಡಿಮೆ (job) ಹೊಂದಿದ್ದರೂ ಕೆಲವರಿಗೆ ತೃಪ್ತಿ ಅನ್ನೋದೆ ಇರಲ್ಲ. ಜೀವನ ಪರ್ಯಂತ ಕೊರತೆಯೊಂದು ಕಾಡುತ್ತಿರುತ್ತದೆ. ಇನ್ನು ಕೆಲವರು ಕೈಯಲ್ಲಿ ಉದ್ಯೋಗ ಹೊಂದಿದ್ರೂ ತಮ್ಮ ಸಂಬಳವನ್ನು ಬೇರೆಯವರ ಜತೆಗೆ ಹೋಲಿಕೆ ಮಾಡುವುದಿದೆ. ಇದೀಗ ವ್ಯಕ್ತಿಯೊಬ್ಬರು ನನ್ನ ಸಂಪಾದನೆಯನ್ನು ತನಗಿಂತ ಸಣ್ಣವರು ಮೀರಿಸುತ್ತಾರೆ. ತನ್ನ ವೃತ್ತಿಪರ ಪ್ರಯಾಣವು ತನ್ನ ಅನೇಕ ಗೆಳೆಯರಂತೆ ಸರಾಗವಾಗಿ ಪ್ರಾರಂಭವಾಗಲಿಲ್ಲ ಎಂದು ಬದುಕಿನ ಹೋರಾಟದ ಹಾದಿಯನ್ನು ತೆರೆದಿಟ್ಟಿದ್ದಾರೆ. ಈ ಎಕ್ಸ್ ಪೋಸ್ಟ್ ಗೆ ನೆಟ್ಟಿಗರು ಕಾಮೆಂಟ್ ಮಾಡಿ ಧೈರ್ಯ ತುಂಬಿದ್ದಾರೆ.

ಪರೇಶ್ ಪಿಸಿಪತಿ (paresh pisipati) ಹೆಸರಿನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದೆ. ಈ ಪೋಸ್ಟ್‌ನಲ್ಲಿ ನಾನು 21 ನೇ ವಯಸ್ಸಿಗೆ ಕಾಲೇಜು ಮುಗಿಸಿ ಹೊರ ಬಂದಾಗ ಅನೇಕ ಸ್ನೇಹಿತರಂತೆ ನನಗೆ ಕೆಲಸವಿರಲಿಲ್ಲ. 26 ನೇ ವಯಸ್ಸಿನಲ್ಲಿ, ನನ್ನ ಸಂಬಳ 26,000 ರೂ ಆಗಿತ್ತು, ಆದರೆ ನನ್ನ ಸ್ನೇಹಿತರು ಹಾಗೂ ಮಾಜಿ ಸಹೋದ್ಯೋಗಿಗಳು ಈಗಾಗಲೇ ಎರಡು ಪಟ್ಟು ಅಥವಾ ಅದಕ್ಕಿಂತ ಹೆಚ್ಚು ಸಂಪಾದಿಸುತ್ತಿದ್ದರು ಎಂದಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ

ಹೀಗಿರುವಾಗ ತಂದೆ ಕಿಮೊಥೆರಪಿಗೆ ಒಳಗಾಗಿದ್ದರಿಂದ ಆಸ್ಪತ್ರೆಗಳಲ್ಲಿ ತನ್ನ ಹೆಚ್ಚಿನ ಸಮಯವನ್ನು ಕಳೆದೆ. ಇತ್ತ ತನ್ನ ಪತ್ನಿಗೆ ರಸ್ತೆ ಅಪಘಾತವಾಯಿತು. ಹಾಗೂ ನನ್ನ ತಾಯಿಗೂ  ಅಪಘಾತವಾಯಿತು. ಈ ಎರಡು ಹೊಡೆತಗಳು ಒಟ್ಟಿಗೆ ಬಿದ್ದಿತು. ಸ್ವಲ್ಪ ಸಮಯದ ಬಳಿಕ ನಾನು ನನ್ನ ತಂದೆಯನ್ನು ಕಳೆದುಕೊಂಡೆ. ನನ್ನ ಪರಿಸ್ಥಿತಿಯನ್ನು ಇತರರೊಂದಿಗೆ ಹೋಲಿಸುವ ಮೂಲಕ ಕೆಟ್ಟದಾಗಿ ಭಾವಿಸುವ ನನ್ನ ಗೀಳು ಹಿಂದಿನದರಲ್ಲಿ ಸಿಲುಕಿಕೊಳ್ಳಲು ಕೇವಲ ಒಂದು ನೆಪ ಎಂದು ನನಗೆ ತಿಳಿಯಿತು. ನಂತರದ ವರ್ಷಗಳಲ್ಲಿ, ನನ್ನ ಗಮನವನ್ನು ಸಂಪೂರ್ಣವಾಗಿ ಕೃತಜ್ಞತೆ ಹಾಗೂ ತನ್ನ ಬಳಿಯಿರುವುದನ್ನು ಇನ್ನೊಬ್ಬರಿಗೂ ಕೊಡುವುದರ ಕಡೆಗೆ ಬದಲಾಯಿಸಿದೆ. ಸಂಬಂಧಗಳಿಗೆ ಹೆಚ್ಚು ಒತ್ತು ನೀಡಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: 15 ದಿನಗಳಲ್ಲೇ ಕೆಲಸದಿಂದ ವಜಾಗೊಳಿಸಿದ ಕಂಪನಿ; ಕಹಿ ಅನುಭವ ಹಂಚಿಕೊಂಡ ಉದ್ಯೋಗಿ

ಈ ಪೋಸ್ಟ್ ಮೂವತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರ, ಕೆಲವು ಘಟನೆಗಳು ನಮ್ಮನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ ಎಂದಿದ್ದಾರೆ. ಇನ್ನೊಬ್ಬರು, ಹೃದಯಕ್ಕೆ ಹತ್ತಿರವಾದ ಘಟನೆ. ನಿಮಗೆ ನನ್ನ ಸಲಾಂ ಎಂದು ಹೇಳಿದ್ದಾರೆ. ಮತ್ತೊಬ್ಬರು, ಅರ್ಥಪೂರ್ಣ ಪೋಸ್ಟ್ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ
ಗಜೇಂದ್ರಗಡ: ಹೈಟೆಕ್ ಅಗ್ನಿಶಾಮಕ ಠಾಣೆ ಇದ್ದರೂ ಸಿಬ್ಬಂದಿ ಇಲ್ಲದೆ ವ್ಯರ್ಥ!
ಗಜೇಂದ್ರಗಡ: ಹೈಟೆಕ್ ಅಗ್ನಿಶಾಮಕ ಠಾಣೆ ಇದ್ದರೂ ಸಿಬ್ಬಂದಿ ಇಲ್ಲದೆ ವ್ಯರ್ಥ!
ಭಾರತ ಪ್ರಜಾತಂತ್ರದ ತಾಯಿ: ಬ್ಲೂಮ್​ಬರ್ಗ್ ಫೋರಂನಲ್ಲಿ ನರೇಂದ್ರ ಮೋದಿ
ಭಾರತ ಪ್ರಜಾತಂತ್ರದ ತಾಯಿ: ಬ್ಲೂಮ್​ಬರ್ಗ್ ಫೋರಂನಲ್ಲಿ ನರೇಂದ್ರ ಮೋದಿ
ಇಂಡಿಯಾ- ವೆಸ್ಟ್ ಇಂಡೀಸ್ ಪಂದ್ಯಕ್ಕೆ  ಡಿಸಿಎಂಗೆ ವೆಂಕಟೇಶ್ ಪ್ರಸಾದ್ ಆಹ್ವಾನ
ಇಂಡಿಯಾ- ವೆಸ್ಟ್ ಇಂಡೀಸ್ ಪಂದ್ಯಕ್ಕೆ  ಡಿಸಿಎಂಗೆ ವೆಂಕಟೇಶ್ ಪ್ರಸಾದ್ ಆಹ್ವಾನ
ಸರ್ಕಾರ ನಿಮ್ಮೊಂದಿಗಿದೆ ಪ್ರತಿಭಟನೆ ಕೈಬಿಡಿ ಎಂದು ರೈತರಿಗೆ ಜೋಶಿ ಮನವಿ!
ಸರ್ಕಾರ ನಿಮ್ಮೊಂದಿಗಿದೆ ಪ್ರತಿಭಟನೆ ಕೈಬಿಡಿ ಎಂದು ರೈತರಿಗೆ ಜೋಶಿ ಮನವಿ!
ಹೈಕಮಾಂಡ್ ತಲುಪಿದ ಸ್ಟಿಂಗ್ ವಿಚಾರ: ಕ್ಯಾಬಿನೆಟ್ ಪ್ರಸ್ತಾಪಕ್ಕೆ ಗರಂ
ಹೈಕಮಾಂಡ್ ತಲುಪಿದ ಸ್ಟಿಂಗ್ ವಿಚಾರ: ಕ್ಯಾಬಿನೆಟ್ ಪ್ರಸ್ತಾಪಕ್ಕೆ ಗರಂ
ಹುನಗುಂದದಲ್ಲಿ ರೈತರ ಪ್ರತಿಭಟನೆ: ರಾಯಚೂರು-ಸೊಲ್ಲಾಪುರ ಹೆದ್ದಾರಿ ಬಂದ್
ಹುನಗುಂದದಲ್ಲಿ ರೈತರ ಪ್ರತಿಭಟನೆ: ರಾಯಚೂರು-ಸೊಲ್ಲಾಪುರ ಹೆದ್ದಾರಿ ಬಂದ್
ರಾಹುಲ್ ಗಾಂಧಿ ನಿವಾಸದಲ್ಲಿ ವಿಪಕ್ಷ ನಾಯಕರ ಹೈ-ಟೀ
ರಾಹುಲ್ ಗಾಂಧಿ ನಿವಾಸದಲ್ಲಿ ವಿಪಕ್ಷ ನಾಯಕರ ಹೈ-ಟೀ
ಕ್ಯಾಪ್ಟನ್ ಟೀಕಿಸಿದ ತಂಡವನ್ನೇ ಆಯ್ಕೆ ಮಾಡಿಕೊಂಡ ಕುಮಾರಿ
ಕ್ಯಾಪ್ಟನ್ ಟೀಕಿಸಿದ ತಂಡವನ್ನೇ ಆಯ್ಕೆ ಮಾಡಿಕೊಂಡ ಕುಮಾರಿ