AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: 15 ದಿನಗಳಲ್ಲೇ ಕೆಲಸದಿಂದ ವಜಾಗೊಳಿಸಿದ ಕಂಪನಿ; ಕಹಿ ಅನುಭವ ಹಂಚಿಕೊಂಡ ಉದ್ಯೋಗಿ

ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಕೆಲಸ ಗಿಟ್ಟಿಸಿಕೊಳ್ಳೋದು ಸವಾಲಾದ್ರೆ, ಅದನ್ನು ಉಳಿಸಿಕೊಳ್ಳೋದು ಮತ್ತೊಂದು ರೀತಿಯ ಸವಾಲು. ಇದೀಗ ಉದ್ಯೋಗಿಯೊಬ್ಬರು ಕಾರ್ಪೊರೇಟ್ ಜಗತ್ತಿನ ಕರಾಳ ಮುಖವನ್ನು ಬಿಚ್ಚಿಟ್ಟಿದ್ದಾರೆ. ಕೆಲಸಕ್ಕೆ ಸೇರಿದ 15 ದಿನಕ್ಕೆ ಕೆಲಸದಿಂದ ತೆಗೆದು ಹಾಕಲಾಗಿದೆ. ಈ ನಿರ್ಧಾರವು ತನ್ನ ಮಾನಸಿಕ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರಿತು ಎಂದು ವಿವರಿಸಿದ್ದಾರೆ. ರೆಡ್ಡಿಟ್ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಉದ್ಯೋಗ ಭದ್ರತೆಗೆ ಕುರಿತು ಚರ್ಚೆಯನ್ನು ಹುಟ್ಟು ಹಾಕಿದೆ.

Viral: 15 ದಿನಗಳಲ್ಲೇ ಕೆಲಸದಿಂದ ವಜಾಗೊಳಿಸಿದ ಕಂಪನಿ; ಕಹಿ ಅನುಭವ ಹಂಚಿಕೊಂಡ ಉದ್ಯೋಗಿ
ಸಾಂದರ್ಭಿಕ ಚಿತ್ರImage Credit source: Getty Images
ಸಾಯಿನಂದಾ
|

Updated on: Jun 29, 2026 | 1:49 PM

Share

ಕಾರ್ಪೋರೇಟ್ (corporate), ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಕೆಲಸಕ್ಕೆ ಗ್ಯಾರಂಟಿ ಇರಲ್ಲ. ಯಾವಾಗ ಬೇಕಾದ್ರೂ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಬಹುದು. ಕಂಪನಿಯ ಈ ರೀತಿ ನಿರ್ಧಾರದಿಂದ ಉದ್ಯೋಗ ಕಳೆದುಕೊಂಡವರಿಗೆ ಮುಂದೇನು ಎನ್ನುವ ಪ್ರಶ್ನೆಯೊಂದು ಕಾಡುವುದು ಸಹಜ. ಆದರೆ ಈ ಉದ್ಯೋಗ ನಷ್ಟ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದಿದೆ. ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಯೊಬ್ಬರಿಗೂ ಅದೇ ರೀತಿ ಆಗಿದೆ. ಕೆಲಸಕ್ಕೆ ಸೇರಿದ 15 ದಿನಗಳಲ್ಲೇ ಉದ್ಯೋಗ ಕಳೆದುಕೊಂಡಿದ್ದಾರೆ. ಈ ಘಟನೆಯ ಬಗ್ಗೆ ರೆಡ್ಡಿಟ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಟಾಕ್ಸಿಕ್ ವರ್ಕ್ ಪ್ಲೇಸ್ (r/ToxicWorkplace) ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಉದ್ಯೋಗಿ ತಮ್ಮ ನೋವಿನ ಅನುಭವ ಬಿಚ್ಚಿಟ್ಟಿದ್ದಾರೆ. ನನ್ನ ಮೊದಲ ಕಾರ್ಪೊರೇಟ್ ಕೆಲಸ 15 ದಿನಗಳ ಕಾಲ ಇತ್ತು. ಆದರೆ ಆ 15 ದಿನಗಳ ಬಳಿಕ ಕೆಲಸದಿಂದ ತೆಗೆದು ಹಾಕಿದ ಆಘಾತವು ಒಂದು ವರ್ಷ ನನ್ನನ್ನು ನರಕಕ್ಕೆ ದೂಡಿತು. ಪ್ರಾರಂಭದಲ್ಲಿ ಬಹಳ ಉತ್ಸಾಹದಲ್ಲೇ ಕೆಲಸಕ್ಕೆ ಸೇರಿಕೊಂಡಿದ್ದೆ. ಆದರೆ ಎಚ್ ಆರ್ ಒಬ್ಬರು ನನ್ನನ್ನು ಇಷ್ಟಪಡದೇ ಕೆಲವು ನೆಗೆಟಿವ್​ ಕಮೆಂಟ್ಸ್​ ಹೇಳಿದರು. ಇದೇ ಕಾರಣವಾಗಿಟ್ಟುಕೊಂಡು ಕೇವಲ 15 ದಿನಗಳಲ್ಲೇ ನನ್ನನ್ನು ಕೆಲಸದಿಂದ ತೆಗೆದು ಹಾಕಲಾಯಿತು ಎಂದು ಹೇಳಿದ್ದಾರೆ.

ರೆಡ್ಡಿಟ್ ಪೋಸ್ಟ್ ಇಲ್ಲಿದೆ

My first corporate job lasted 15 days. The trauma lasted a year. by u/TypicalOnion1809 in ToxicWorkplace

ಈ ಘಟನೆಯ ಬಗ್ಗೆ ಸಾರ್ವಜನಿಕವಾಗಿ ಮಾತನಾಡದಂತೆ ಮತ್ತೊಬ್ಬ ಎಚ್ ಆರ್ ಪ್ರತಿನಿಧಿ ಎಚ್ಚರಿಕೆ ನೀಡಿದ್ದರು. ಈ ಎಚ್‌ಆರ್‌ಗಳಿಗೆ ಎಲ್ಲರ ಪರಿಚಯವಿರುತ್ತದೆ. ಹೀಗಾಗಿ ನೀನು ಸರಿಯಾಗಿ ವರ್ತಿಸದೆ, ಈಗಲೇ ರಾಜೀನಾಮೆ ನೀಡದಿದ್ದರೆ ನಿನ್ನ ಮುಂದಿನ ವೃತ್ತಿಜೀವನಕ್ಕೆ ಮೇಲೆ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದ್ದರು. ಕಂಪನಿಯ ಈ ರೀತಿ ನಡವಳಿಕೆಯಿಂದ ಫ್ಯಾಮಿಲಿಯೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಾಗ, ನನ್ನ ಮೊಬೈಲ್ ಕಸಿದುಕೊಳ್ಳಲಾಯಿತು. ಈ ಕೂಡಲೇ ರಾಜೀನಾಮೆ ನೀಡಿದ್ದರೆ ವಾಚ್ ಮ್ಯಾನ್ ನ್ನು ಕರೆದು ಹೊರಹಾಕುವುದಾಗಿ ಬೆದರಿಕೆ ಹಾಕಲಾಯಿತು. ಆರೋಗ್ಯ ಸಮಸ್ಯೆಗಳಿದ್ದರೂ ಸಹ ನನ್ನ ಶೌಚಾಲಯದ ವಿರಾಮಗಳನ್ನು ಟ್ರ್ಯಾಕ್ ಮಾಡಲಾಯಿತು ಎಂದು ವಿವರಿಸಿದ್ದಾರೆ.

ಇದೇ ವೇಳೆ ಕಂಪನಿ ಹಾಗೂ ಎಚ್ ಆರ್ ನನ್ನನ್ನು ನಾನು ಸಮರ್ಥಿಸಿಕೊಳ್ಳಲು ನನಗೆ ಅವಕಾಶ ನೀಡಲಿಲ್ಲ ಎಂದು ತಿಳಿದಿದೆ. ಈ ಕಹಿ ಅನುಭವವು ನನ್ನ ಆತ್ಮವಿಶ್ವಾಸ ಕುಸಿಯುವಂತೆ ಮಾಡಿತು. ಆ ನಂತರದ ದಿನಗಳು ಬಹಳ ಕಠಿಣವಾಗಿದ್ದವು. ಚಿಕಿತ್ಸೆ, ಆತಂಕ, ನಿದ್ದೆಯಿಲ್ಲದ ರಾತ್ರಿಗಳು ಮತ್ತು ಸ್ನೇಹಿತರು ತಮ್ಮ ಸ್ವಂತ ಆತ್ಮವಿಶ್ವಾಸವನ್ನು ಪುನರ್ನಿರ್ಮಿಸಲು ಹೆಣಗಾಡುತ್ತಿರುವಾಗ ತಮ್ಮ ವೃತ್ತಿಜೀವನದಲ್ಲಿ ಮುಂದುವರಿಯುವುದನ್ನು ನೋಡುವುದು ಒಳಗೊಂಡಿತ್ತು ಎಂದು ವಾಸ್ತವ ಸ್ಥಿತಿ ಬಗ್ಗೆ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಕಾರ್ಪೊರೇಟ್ ಉದ್ಯೋಗಗಳಲ್ಲಿ ನಿಷ್ಠಾವಂತರಿಗೆ ಕಿವಿಮಾತು ಹೇಳಿದ ಬೆಂಗಳೂರಿನ ವ್ಯಕ್ತಿ

ಈ ಪೋಸ್ಟ್ ವೀಕ್ಷಣೆಗಳನ್ನು ಪಡೆದುಕೊಳ್ಳುತ್ತಿದ್ದಂತೆ, ಒಬ್ಬ ಬಳಕೆದಾರ, ನೀವು ಎಲ್ಲವನ್ನೂ ಸಹಿಸಿಕೊಳ್ಳುವ ಅಗತ್ಯವಿಲ್ಲ. ಕಂಪನಿ ನಿಮ್ಮನ್ನು ಕೆಲಸದಿಂದ ತೆಗೆದು ಹಾಕಿದ್ದು ಒಳ್ಳೆಯದೇ ಆಯ್ತು. ಇಲ್ಲದಿದ್ದರೆ ಆ ನರಕದಲ್ಲೇ ಇರಬೇಕಾಯ್ತು ಎಂದಿದ್ದಾರೆ. ಮತ್ತೊಬ್ಬರು, ಈ ಕೆಟ್ಟ ನಡವಳಿಕೆ ಉದ್ಯೋಗಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ಯೋಚಿಸುವ ವ್ಯವಧಾನವು ಎಚ್ ಆರ್ ಗಳಿಗಿಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬರು, ಇಂತಹ ವಿಷಕಾರಿ ಕೆಲಸದ ಸ್ಥಳಗಳಲ್ಲಿ ಇರುವುದಕ್ಕಿಂತ ಹೊರ ನಡೆಯುವುದೇ ಉತ್ತಮ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us