Video: ಕಾರ್ಪೊರೇಟ್ ಉದ್ಯೋಗಗಳಲ್ಲಿ ನಿಷ್ಠಾವಂತರಿಗೆ ಕಿವಿಮಾತು ಹೇಳಿದ ಬೆಂಗಳೂರಿನ ವ್ಯಕ್ತಿ
ಕೆಲವು ಯುವಕ ಯುವತಿಯರು ತಾವು ಕೆಲಸ ಮಾಡುವ ಸಂಸ್ಥೆಗೆ ಬಹಳ ನಿಷ್ಠಾವಂತರಾಗಿರುತ್ತಾರೆ. ಆದರೆ ವ್ಯಕ್ತಿಯೊಬ್ಬರು ಕಾರ್ಪೊರೇಟ್ ಉದ್ಯೋಗಗಳಲ್ಲಿ ನಿಷ್ಠೆ ಯಾವಾಗಲೂ ಫಲ ನೀಡುವುದಿಲ್ಲ ಎಂದು ಕಟು ಸತ್ಯ ಹೇಳಿದ್ದಾರೆ. ಇಂದಿನ ಯುವಪೀಳಿಗೆಗೆ ಸಲಹೆ ನೀಡಿದ್ದಾರೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಕಾರ್ಪೊರೇಟ್ (corporate) ಹಾಗೂ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವವರ ಕಷ್ಟ ಹೇಳಲಾಗದು. ಕೆಲವರು ತಮ್ಮ ಉದ್ಯೋಗಕ್ಕೆ ತುಂಬಾ ನಿಷ್ಠಾವಂತರಾಗಿರುತ್ತಾರೆ. ಆಫೀಸು ಬಿಟ್ಟು ಮನೆಗೆ ಬಂದರೂ ಮುರೊತ್ತು ಕೆಲಸ ಕೆಲಸ ಎಂದು ಗೊಣಗುವವರನ್ನು ನೀವು ನೋಡಿರುತ್ತೀರಿ. ಬೆಂಗಳೂರಿನ (Bengaluru) ವ್ಯಕ್ತಿಯೊಬ್ಬರು ಉದ್ಯೋಗಿಗಳು ಒಂದೇ ಕಂಪನಿಗೆ ನಿಷ್ಠರಾಗಿರಬೇಕೇ, ಇಲ್ಲವಾದ್ರೆ ವೃತ್ತಿಜೀವನದ ಬೆಳವಣಿಗೆ ನಿಧಾನವಾದಾಗ ಉದ್ಯೋಗ ಬದಲಾಯಿಸುವ ಬಗ್ಗೆ ಯೋಚಿಸಬೇಕೇ ಎಂಬ ಪೋಸ್ಟ್ ಚರ್ಚೆಯನ್ನು ಹುಟ್ಟುಹಾಕಿದೆ. ನೆಟ್ಟಿಗರು ಕಾಮೆಂಟ್ ಮಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಾಣಿಕ್ ಸಲಾರಿಯಾ (life_with_manik) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ಕ್ಲಿಪಿಂಗ್ ಗೆ ನಿಷ್ಠೆಯಾ ಬದಲಾವಣೆಯಾ?” ಎಂಬ ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋದಲ್ಲಿ ನಿಷ್ಠೆಯೋ ಅಥವಾ ಬದಲಾವಣೆಯೋ? ನೀವು ಕಳೆದ ಮೂರು ವರ್ಷಗಳಿಂದ ಒಂದೇ ಕಂಪನಿಗೆ ನಿಷ್ಠಾವಂತರಾಗಿ ಉಳಿದಿದ್ದರೆ, ನಾನು ಹೇಳಲಿರುವ ವಿಷಯ ನಿಮಗೆ ಇಷ್ಟವಾಗದಿರಬಹುದು, ಆದರೆ ಸತ್ಯವೆಂದರೆ ಕಂಪನಿಗಳು ಯಾವಾಗಲೂ ನಿಷ್ಠೆಗೆ ಪ್ರತಿಫಲ ನೀಡುವುದಿಲ್ಲ ಎಂದಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ನಿಮಗೆ ಸಾಮಾನ್ಯ ಶೇ. 10 ರಷ್ಟು ವೇತನ ಹೆಚ್ಚಳವಾಗಬಹುದು. ಆದರೆ ಒಂದು ಹುದ್ದೆ ಖಾಲಿಯಿದ್ದಾಗ ಅಥವಾ ಬಡ್ತಿ ಸಮಯ ಬಂದಾಗ, ಕಂಪನಿಗಳು ಹೆಚ್ಚಾಗಿ ಹೊರಗಿನವರನ್ನು ನೇಮಿಸಿಕೊಳ್ಳಲು ಬಯಸುತ್ತವೆ ಎಂದು ಹೇಳಿದ್ದಾರೆ. ಇಲ್ಲಿ ಉದ್ಯೋಗ ಬದಲಾವಣೆಗಳು ಯಾವಾಗಲೂ ಸರಿಯಾದ ವಿಧಾನವಾಗಿರುವುದಿಲ್ಲ. ನೀವು ಪ್ರತಿ ಆರು ತಿಂಗಳಿಗೊಮ್ಮೆ ಕೆಲಸ ಬದಲಾಯಿಸಬೇಕು ಎಂಬ ಕಲ್ಪನೆಯನ್ನು ನಾನು ಒಪ್ಪುವುದಿಲ್ಲ, ಏಕೆಂದರೆ ಅದು ನಿಮ್ಮ ರೆಸ್ಯೂಮ್ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾದರೆ, ನೀವು ಏನು ಮಾಡಬೇಕು? ನೀವು ನಿಷ್ಠಾವಂತರಾಗಿ ಉಳಿಯಬೇಕೇ ಅಥವಾ ಬದಲಾಯಿಸಬೇಕೇ? ನನ್ನ ಅಭಿಪ್ರಾಯದಲ್ಲಿ, ನೀವು ಹೊಂದಿಕೊಳ್ಳುವವರಾಗಿರಬೇಕು ಎಂದಿದ್ದಾರೆ.
ಒಂದು ನಿರ್ದಿಷ್ಟ ನಿಯಮವನ್ನು ಅನುಸರಿಸುವ ಬದಲು ಉದ್ಯೋಗಿಗಳು ತಮ್ಮ ಬೆಳವಣಿಗೆಯನ್ನು ಮೌಲ್ಯಮಾಪನ ಮಾಡಬೇಕು. ಒಂದು ಕಂಪನಿಯಲ್ಲಿ ಎರಡು ಮೂರು ವರ್ಷಗಳ ಕಾಲ ಇರಿ. ನಿಮ್ಮ ಬೆಳವಣಿಗೆ ಉತ್ತಮವಾಗಿದ್ದರೆ, ಬಡ್ತಿಗಳು ಹಾಗೂ ಉತ್ತಮ ಅವಕಾಶಗಳನ್ನು ನೀವು ಪಡೆಯುತ್ತಿದ್ದರೆ, ಮುಂದುವರಿಯುವುದು ಅರ್ಥಪೂರ್ಣವಾಗಿದೆ. ಆದರೆ ನೀವು ನಿಶ್ಚಲತೆಯನ್ನು ಅನುಭವಿಸಲು ಪ್ರಾರಂಭಿಸಿದಾಗ, ಯಾವುದೇ ಬೆಳವಣಿಗೆ ಇಲ್ಲ ಎಂದೆನಿಸಿದಾಗ, ನೀವು ಹೊಸದನ್ನು ಕಲಿಯುತ್ತಿಲ್ಲ ಎಂದು ಭಾವಿಸಿದಾಗ, ಉದ್ಯೋಗ ಬದಲಾವಣೆಯನ್ನು ಮಾಡುವ ಸಮಯ ಬಂದಿದೆ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: ಕೆಲಸದಿಂದ ಕಲಿತ ಐದು ಜೀವನ ಪಾಠಗಳನ್ನು ವಿವರಿಸಿದ ಯುವಕ
ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ವೈಯಕ್ತಿಕ ಬೆಳವಣಿಗೆಗೆ ಉದ್ಯೋಗ ಜಿಗಿತ ಮುಖ್ಯ ಎಂದು ನಾನು ನಂಬುತ್ತೇನೆ, ಆದರೆ ಅದನ್ನು ಚಿಂತನಶೀಲವಾಗಿ ಮಾಡಬೇಕು, ಆಗಾಗ ಉದ್ಯೋಗ ಬದಲಾವಣೆ ಮಾಡಬಾರದು ಎಂದು ಹೇಳಿದ್ದಾರೆ. ಇನ್ನೊಬ್ಬರು, ನಿಮ್ಮ ಪ್ರತಿಯೊಂದು ಮಾತು ಕಾರ್ಪೊರೇಟ್ ಜಗತ್ತಿನಲ್ಲಿ ಕೆಲಸ ಮಾಡುವ ಯಾರಿಗಾದರೂ ಅನ್ವಯಿಸುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ವೈಯುಕ್ತಿಕ ಬೆಳವಣಿಗೆಗೆ ಉದ್ಯೋಗ ಬದಲಾವಣೆ ಬಹಳ ಮುಖ್ಯ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ
Published On - 10:58 am, Mon, 29 June 26




