Dance: ಅಕ್ಕ ತಮ್ಮ, ಅಣ್ಣ ತಂಗಿಯರ ಬಾಲ್ಯದ ನೆನಪುಗಳು (Childhood Memories) ಪರಸ್ಪರರ ಜೀವನವನ್ನು ಹಸಿರಾಗಿಟ್ಟಿರುತ್ತವೆ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ವಧುವೊಬ್ಬಳು ತನ್ನ ಸಹೋದರನೊಂದಿಗೆ ಬಾಲ್ಯದಲ್ಲಿ ಮಾಡಿದ ಸಿನೆಮಾ ಹಾಡಿಗೆ ಇದೀಗ ಮತ್ತೆ ಡ್ಯಾನ್ಸ್ ಮಾಡಿದ್ದಾಳೆ. 2005ರಲ್ಲಿ ಬಿಡುಗಡೆಯಾದ ಬಂಟಿ ಔರ್ ಬಬ್ಲಿ ಸಿನೆಮಾದಿಂದ ನಾಚ್ ಬಲಿಯೇ ಹಾಡಿಗೆ ಇವರಿಬ್ಬರೂ ನರ್ತಿಸಿದ್ದಾರೆ. ದಿ ವೆಡ್ಡಿಂಗ್ ಶೋಬಿಝ್ ಎಂಬ ವೆಡ್ಡಿಂಗ್ ಕೊರಿಯೋಗ್ರಫಿ ಏಜನ್ಸಿ ತನ್ನ ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋ ಅನ್ನು ಪೋಸ್ಟ್ ಮಾಡಿದೆ. ಈತನ 1.2 ಲಕ್ಷಕ್ಕಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ.
ಇದನ್ನೂ ಓದಿ: Viral Video: ಈಗಿನ ನಟಿಯರಲ್ಲಿ ಒಬ್ಬರಾದರೂ ಮಾಧುರಿಯಂತೆ ಇಂಥ ಪ್ರಸ್ತುತಿ ನೀಡಬಲ್ಲರೆ?
ಮೂರು ದಿನಗಳ ಹಿಂದೆ ಈ ಪೋಸ್ಟ್ ಮಾಡಲಾಗಿದ್ದು ಇದೀಗ ಸುಮಾರು 9 ಮಿಲಿಯನ್ ಜನರು ಈ ವಿಡಿಯೋ ನೋಡಿದ್ದಾರೆ. ಅನೇಕರು ಈ ವಿಡಿಯೋ ನೋಡಿ ಖುಷಿಯಿಂದ ಪ್ರತಿಕ್ರಿಯಿಸಿದ್ದಾರೆ. ನೀಲಿ ಲೆಹಂಗಾ ಧರಿಸಿದ ವಧು ತನ್ನ ಸಹೋದರನೊಂದಿಗೆ ಡ್ಯಾನ್ಸ್ ಮಾಡುವುದರೊಂದಿಗೆ ಈ ಕ್ಲಿಪ್ ತೆರೆದುಕೊಳ್ಳುತ್ತದೆ.
ನಿಮ್ಮಿಬ್ಬರ ಅನುಬಂಧ ಈ ಹಾಡಿನಿಂದ ಸ್ಪಷ್ಟವಾಗುತ್ತದೆ, ಮುಂದೆಯೂ ನೀವು ಹೀಗೆಯೇ ಖುಷಿಯಾಗಿರಿ ಎಂದು ಹಾರೈಸಿದ್ದಾರೆ ಒಬ್ಬರು. ನಾನು ನನ್ನ ತಂಗಿಯು ನನ್ನ ಅಣ್ಣನ ಮದುವೆಯಲ್ಲಿ ಹೀಗೆಯೇ ನಮ್ಮಿಬ್ಬರ ಇಷ್ಟದ ಹಾಡಿಗೆ ನರ್ತಿಸಿದ್ದೆವು ಎಂದಿದ್ದಾರೆ ಇನ್ನೊಬ್ಬರು.
ಇದನ್ನೂ ಓದಿ : Viral Video: ಮದುವೆಗೆ ತಿಂಗಳಿರುವಾಗ ಕೋಮಾಗೆ ಜಾರಿದ ವರ, ಮುಂದೇನಾಯಿತು?
ಈ ನೃತ್ಯ ನೋಡಿ ಸಾರ್ಥಕ ಭಾವ ಉಕ್ಕಿತು. ಕಣ್ಣೀರಿಳಿಯುತ್ತಿದೆ ನಿಮ್ಮ ಈ ನೃತ್ಯವನ್ನು ನೋಡಿ ಎಂದಿದ್ದಾರೆ ಒಬ್ಬರು. ಅದೆಷ್ಟು ಸಲ ನೋಡಿದೆನೋ ಗೊತ್ತಿಲ್ಲ ಈ ವಿಡಿಯೋ ಎಂದಿದ್ದಾರೆ ಇನ್ನೊಬ್ಬರು. ಈ ನೃತ್ಯ ನೋಡಿ ಮೈನವಿರೇಳುತ್ತಿದೆ ಎಂದಿದ್ದಾರೆ ಮತ್ತೊಬ್ಬರು. ನನ್ನ ಅಣ್ಣ ನನ್ನೊಂದಿಗೆ ನನ್ನ ಮದುವೆಯಲ್ಲಿ ಹೀಗೆಯೇ ಡ್ಯಾನ್ಸ್ ಮಾಡಬೇಕು ಎಂದು ಬಯಸುತ್ತಿದ್ದೇನೆ ಎಂದಿದ್ದಾರೆ ಮಗದೊಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ