ಮರದ ಸ್ಕೇಲ್​ನಲ್ಲಿ ಮದುವೆಯ ಊಟದ ಮೆನು ಬರೆಸಿದ ಕುಟುಂಬ: ವೈರಲ್​ ಆದ ಫೋಟೋಗಳು

| Updated By: Pavitra Bhat Jigalemane

Updated on: Jan 10, 2022 | 3:54 PM

 30 ಸೆಂ ಮೀ ಉದ್ದದ ಸ್ಕೇಲ್​ನಲ್ಲಿ ಊಟದ ಮೆನುವನ್ನು ಬರೆಯಲಾಗಿದೆ. ಮೆನುವುನಲ್ಲಿ ಫ್ರೈಡ್​ ರೈಸ್​, ಮಟನ್​ ಮಸಾಲಾ, ಫಿಶ್​ ಕಲಿಯಾ ಸೇರದಂತೆ ವಿವಿಧ ರೀತಿಯ ಖಾದ್ಯಗಳನ್ನು ಪಟ್ಟಿ ಮಾಡಲಾಗಿದೆ. 

ಮರದ ಸ್ಕೇಲ್​ನಲ್ಲಿ ಮದುವೆಯ ಊಟದ ಮೆನು ಬರೆಸಿದ ಕುಟುಂಬ: ವೈರಲ್​ ಆದ ಫೋಟೋಗಳು
ಸ್ಕೇಲ್​
Follow us on

ಮದುವೆ ಮನೆಗಳಲ್ಲಿ ಊಟ ಎಂದರೆ ಬಾಯಲ್ಲಿ ನೀರೂರಿಸದವರಿಲ್ಲ. ವಿವಿಧ ರೀತಿಯ ಖಾದ್ಯಗಳು, ತರಹೇವಾರಿ ಸಿಹಿ ತಿಂಡಿಗಳು ಮದುವೆ ಮನೆಯ ಊಟದ ರುಚಿಯನ್ನು ಹೆಚ್ಚಿಸುತ್ತದೆ. ಸಾಮಾನ್ಯವಾಗಿ ಊಟದ ಮೆನುವಾಗಿ ಹೊಟೆಲ್​ ಅಥವಾ ಮದುವೆಗಳಲ್ಲಿ  ಮೆನು ಪುಸ್ತಕವನ್ನು ನೀಡುತ್ತಾರೆ. ಆದರೆ ಇಲ್ಲೊಂದು ಮದುವೆಯ ಊಟದ ಮೆನುವನ್ನು ನೋಡಿದರೆ ತಯಾರಕರ ಕ್ರಿಯೇಟಿವಿಟಿಗೆ ಮೆಚ್ಚಲೇಬೇಕು. ಹೌದು ಬೆಂಗಾಲಿ ಮದುವೆಯೊಂದರ ಊಟದ ಮೆನುವನ್ನು ಮರದ ಸ್ಕೇಲಿನಲ್ಲಿ ಬರೆದು ನೀಡಲಾಗಿದೆ. ಇದರ ಫೋಟೋಗಳು ಇದೀಗ ವೈರಲ್​ ಆಗಿವೆ.

2013ರಲ್ಲಿ ನಡೆದ ಮದುವೆಯ ಮೆನು ಕಾರ್ಡ್​ ಇದಾಗಿದೆ. ಬೆಂಗಾಲಿ ಕುಟುಂಬದ ಸುಶ್ಮಿತಾ ಹಾಗೂ ಅನಿಮೇಶ್​ ಎನ್ನವವರ ಮದುವೆಯಲ್ಲಿ ಈ ರೀತಿ ಮೆನು ಕಾರ್ಡ್​ ತಯಾರಿಸಲಾಗಿದೆ. 30 ಸೆಂ ಮೀ ಉದ್ದದ ಸ್ಕೇಲ್​ನಲ್ಲಿ ಊಟದ ಮೆನುವನ್ನು ಬರೆಯಲಾಗಿದೆ. ಮೆನುವುನಲ್ಲಿ ಫ್ರೈಡ್​ ರೈಸ್​, ಮಟನ್​ ಮಸಾಲಾ, ಫಿಶ್​ ಕಲಿಯಾ ಸೇರದಂತೆ ವಿವಿಧ ರೀತಿಯ ಖಾದ್ಯಗಳನ್ನು ಪಟ್ಟಿ ಮಾಡಲಾಗಿದೆ.  ಸ್ಟೀರಿಯೋ ಟೈಪ್​ರೈಟರ್​ ಎನ್ನುವ ಟ್ವಿಟರ್​ ಖಾತೆಯಲ್ಲಿ ಈ ಸ್ಕೆಲ್​ ಮೆನುವಿನ ಫೋಟೋವನ್ನು ಹಂಚಿಕೊಳ್ಳಲಾಗಿದೆ.


ಈ ಫೋಟೊವನ್ನು ನೋಡಿ ಫುಡ್​ ಪ್ರಿಯರು ವಿವಿಧ ರೀತಿಯಲ್ಲಿ ಕಾಮೆಂಟ್​ ಮಾಡಿದ್ದಾರೆ. ಇದನ್ನು ನೋಡಿ ಬಳಕೆದಾರರೊಬ್ಬರು, ಹೆಚ್ಚು ಆಹಾರ ತಿಂದಿದ್ದಕ್ಕೆ ಇದೇ ಸ್ಕೇಲಿನಿಂದ ತಿರುಗಿಸಿ ಹೊಡೆಯಬೇಡಿ ಎಂದು ಕಾಮೆಂಟ್​ ಮಾಡಿದ್ದಾರೆ. ಟ್ರೆಡೀಷನಲ್​ ವೆಡ್ಡಿಂಗ್​ ಮೆನು ಎಂದು ಹ್ಯಾಷ್​ಟ್ಯಾಗ್​ ಮೂಲಕ  ಸ್ಕೇಲ್​ ಮೆನುವನ್ನು ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ:

ಈ ಊರಿನ ಪಾರಿವಾಳಗಳ ಹೆಸರಿನಲ್ಲಿದೆ ಕೋಟ್ಯಾಂತರ ರೂ.ಮೌಲ್ಯದ ಆಸ್ತಿ !