ನಿಮ್ಮ ವೆಡ್ಡಿಂಗ್ ಫೋಟೋ ಶೂಟ್​ನಲ್ಲಿ ನಮ್ಮದೂ ಒಂದಿರ್ಲಿ; ಮಗುವಿನೊಂದಿಗೆ ಮಂಗಮ್ಮ

| Updated By: ಶ್ರೀದೇವಿ ಕಳಸದ

Updated on: Dec 26, 2022 | 2:34 PM

Wedding Photo Shoot : ಈ ಜೋಡಿಯ ಫೋಟೋ ಶೂಟ್ ನೋಡುತ್ತ ನೋಡುತ್ತ ಈ ಕೋತಿ ಅವರ ಹತ್ತಿರ ಬಂದಿದೆ. ಮುಂದೇನಾಗಿದೆ ಎಂಬುದನ್ನು ವಿಡಿಯೋ ನೋಡಿಯೇ ಆನಂದಿಸಬೇಕು.

ನಿಮ್ಮ ವೆಡ್ಡಿಂಗ್ ಫೋಟೋ ಶೂಟ್​ನಲ್ಲಿ ನಮ್ಮದೂ ಒಂದಿರ್ಲಿ; ಮಗುವಿನೊಂದಿಗೆ ಮಂಗಮ್ಮ
ವೆಡ್ಡಿಂಗ್ ಫೋಟೋ ಶೂಟ್​ನಲ್ಲಿ ನಮ್ಮದೂ ಒಂದಿರ್ಲಿ
Follow us on

Viral Video : ಎಷ್ಟೇ ಆದರೂ ಪೂರ್ವಜರು. ನಾವೇನು ಮಾಡುತ್ತೇವೋ ಅದೆಲ್ಲವನ್ನೂ ತಾವೂ ಮಾಡಬೇಕು ಎಂದು ಬಯಸುವುದೇನು ತಕ್ಷಣವೇ ಅನುಕರಿಸುವುದು ಸರ್ವೇ ಸಾಮಾನ್ಯ ಎನ್ನುವುದಕ್ಕೆ ವೈರಲ್ ಆಗುವ ವಿಡಿಯೋಗಳೇ ಸಾಕು. ಇಲ್ಲಿರುವ ಈ ವಿಡಿಯೋದಲ್ಲಿ ನವಜೋಡಿಗಳ ಫೋಟೋ ಶೂಟ್ ನಡೆಯುತ್ತಿದೆ. ಅಲ್ಲಿದ್ದ ಮಂಗವೊಂದು ತನ್ನ ಮರಿಯೊಂದಿಗೆ ಬಂದು ಅವರನ್ನು ಮಾತನಾಡಿಸಿ ತಾನೂ ಅವರೊಂದಿಗೆ ಫೋಟೋ ಶೂಟ್​ನಲ್ಲಿ ಭಾಗಿಯಾಗಿದೆ.

ಈ ಅಚಾತುರ್ಯವನ್ನು ಈ ಜೋಡಿಯೋ ಎಷ್ಟು ಸಮಾಧಾನದಿಂದ ನಿರ್ವಹಿಸಿದೆ ಎಂದು ನೆಟ್ಟಿಗರು ಬೆರಗಿನಿಂದ ನೋಡುತ್ತಿದ್ದಾರೆ. ಕಂಕುಳಲ್ಲಿ ತನ್ನ ಮರಿಯನ್ನು ಕೂರಿಸಿಕೊಂಡು ಬಂದ ಕೋತಿ ವರನನ್ನು ಏರುವ ಪರಿಯೇ ಅನನ್ಯವಾಗಿದೆ. ನಂತರ ಅವನೊಂದಿಗೆ ತಾನೂ ಫೋಟೋ ಶೂಟ್ ಮಾಡಿಸಿಕೊಳ್ಳುವುದಂತೂ ಅದ್ಭುತ. ನಂತರ ವಧುವರರು ಈ ಕೋತಿ ಮತ್ತಾಕೆಯ ಮಗುವಿನೊಂದಿಗೆ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಾರೆ. ಎಂಥ ಉಲ್ಲಾಸದ ಕ್ಷಣವಿದು!

ಅಮ್ಮಕೋತಿಯು ತನ್ನ ಮಗುವನ್ನು ನಿಮಗೆ ತೋರಿಸಲು ಬಂದಿದೆ ಎಂಥ ಚೆಂದದ ವಿಡಿಯೋ ಇದು ಎಂದಿದ್ದಾರೆ ಕೆಲವರು. ಈ ಕೋತಿ ಗಂಡನನ್ನು ಹುಡುಕುತ್ತಿದ್ದಳು, ಅಂತೂ ನಿಮ್ಮನ್ನು ಆಯ್ಕೆ ಮಾಡಿಕೊಂಡಳು ಅಭಿನಂದನೆ ಎಂದಿದ್ದಾರೆ ಮತ್ತೊಬ್ಬರು. ಇದು ಅದೃಷ್ಟವಲ್ಲದೆ ಇನ್ನೇನು? ಎಂದಿದ್ಧಾರೆ ಹಲವರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:34 pm, Mon, 26 December 22