ಕೆನಡಾದ ಹಿಮಾವೃತ ಕಾಡಿನಲ್ಲಿ ಭಾಂಗ್ರಾ ನೃತ್ಯದ ಮೂಲಕ ಕ್ರಿಸ್​ಮಸ್​ ಶುಭಾಶಯ

Merry Christmas : ಸಾಮಾಜಿಕ ಜಾಲತಾಣಗಳ ಇನ್​ಫ್ಲ್ಯೂಯೆನ್ಸರ್​, ಕೆನಡಾದ ನಿವಾಸಿ ಗುರುದೀಪ್​ ಪಂಧೇರ್​ ಕೆನಡಾದ ಹಿಮಾಚ್ಛಾದಿತ ಕಾಡಿನಲ್ಲಿ ಭಾಂಗ್ರಾ ನೃತ್ಯ ಮಾಡುವ ಮೂಲಕ ಕ್ರಿಸ್​ಮಸ್​ ಶುಭಾಶಯ ಕೋರಿದ್ದಾರೆ.

ಕೆನಡಾದ ಹಿಮಾವೃತ ಕಾಡಿನಲ್ಲಿ ಭಾಂಗ್ರಾ ನೃತ್ಯದ ಮೂಲಕ ಕ್ರಿಸ್​ಮಸ್​ ಶುಭಾಶಯ
ಕೆನಡಾದ ಹಿಮಾಚ್ಛಾದಿತ ಕಾಡಿನಲ್ಲಿ ನರ್ತಿಸುತ್ತಿರುವ ಗುರುದೀಪ್ ಪಂಧೇರ್
Follow us
TV9 Web
| Updated By: ಶ್ರೀದೇವಿ ಕಳಸದ

Updated on:Dec 26, 2022 | 1:00 PM

Viral Video : ಕೆನಡಾದಲ್ಲಿ ವಾಸವಾಗಿರುವ ಗುರುದೀಪ್​ ಪಂಧೇರ್ ಎಂಬ ಸೋಶಿಯಲ್ ಮೀಡಿಯಾ ಇನ್​ಫ್ಲ್ಯೂಯೆನ್ಸರ್ ಹಿಮದಿಂದ ಆವರಿಸಿದ ಕೆನಡಾದ ಕಾಡಿನಲ್ಲಿ ಭಾಂಗ್ರಾ ನೃತ್ಯ ಮಾಡುವುದರ ಮೂಲಕ ಕ್ರಿಸ್​ಮಸ್​ ಶುಭಾಶಯಗಳನ್ನು ಕೋರಿದ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ಇವರ ಪೋಷಾಕನ್ನು, ಕೆನಡಾದ ಹಿಮಪರಿಸರವನ್ನು ಎಲ್ಲಕ್ಕಿಂತ ಹೆಚ್ಚಾಗಿ ಇವರ ಉತ್ಸಾಹ ಮತ್ತು ಇವರ ನೃತ್ಯವನ್ನು ಆಸ್ವಾದಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೂಲಕ ಭಾಂಗ್ರಾ ನೃತ್ಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವಲ್ಲಿ ಇವರು ಕಾರಣಕರ್ತರಾಗಿದ್ದಾರೆ. -30 ಡಿಗ್ರಿ ಸೆಲ್ಸಿಯಸ್ ಹವಾಮಾನದಲ್ಲಿಯೂ ಇವರು ಹೀಗೆ ಉತ್ಸಾಹದಿಂದ ಹೆಜ್ಜೆ ಹಾಕಿರುವುವುದು ನೆಟ್ಟಿಗರಲ್ಲಿ ಸ್ಫೂರ್ತಿ ತುಂಬಿದೆ.

‘ಯುಕಾನ್​ನ ಅರಣ್ಯದಿಂದ ನಿಮ್ಮೆಲ್ಲರಿಗೂ ಕ್ರಿಸ್ಮಸ್ ಶುಭಾಶಯಗಳನ್ನು ತಿಳಿಸುತ್ತಿದ್ದೇನೆ. ಸಂತೋಷ, ಭರವಸೆ ಮತ್ತು ಉತ್ತಮ ದಿನಗಳು ನಿಮ್ಮವಾಗಲಿ’ ಎಂಬ ಸಂದೇಶದೊಂದಿಗೆ ನೃತ್ಯ ಪ್ರದರ್ಶನ ಮಾಡಿದ್ದಾರೆ ಪಂಧೇರ್.

ಈ ವಿಡಿಯೋ ಅನ್ನು ಸುಮಾರು 2.5 ಲಕ್ಷ ಜನರು ವೀಕ್ಷಿಸಿದ್ದಾರೆ. 5,000 ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. 500ಕ್ಕೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ನೋಡಿ : ಭಾಂಗ್ರಾ ನೃತ್ಯ ಮಾಡಿದ ರಾವಣ ನೆಟ್ಟಿಗರ ಅಚ್ಚರಿ, ವಿಡಿಯೋ ವೈರಲ್

ನಿಮ್ಮೊಳಗ ಉಕ್ಕುತ್ತಿರುವ ಸಂತೋಷ ನಮಗೆಲ್ಲ ಸ್ಫೂರ್ತಿಯಾಗಿದೆ ಎಂದಿದ್ದಾರೆ ಅನೇಕರು. ಗುರುದೀಪ್​ ನೀವು ಅದ್ಭುತ, ಎಂದಿಗೂ ನೀವು ಇದೇ ರೀತಿಯಲ್ಲಿ ಯಶಸ್ವಿಯಾಗಿ ಸಂತೋಷವನ್ನು ಹಂಚುತ್ತ ಬಂದಿದ್ದೀರಿ, ನಿಮಗೂ ಶುಭಾಶಯ ಎಂದಿದ್ದಾರೆ ಕೆಲವರು. ಚಿಯರ್ಸ್​! ಯಾವಾಗಲೂ ನೀವು ನಮ್ಮನ್ನು ನಗಿಸುತ್ತೀರಿ, ಪಾಸಿಟಿವ್​ ವೈಬ್ಸ್​ ಹರಡುತ್ತೀರಿ, ಇದು ಜಗತ್ತಿಗೆ ಬೇಕು ಎಂದಿದ್ದಾರೆ. ರಕ್ತದ ಉತ್ತಮ ಪರಿಚಲನೆಗೆ ಮತ್ತು ಅದರಿಂದ ಉಕ್ಕುವ ಸಂಭ್ರಮಕ್ಕೆ ಭಾಂಗ್ರಾಗಿಂತ ಬೇರೆ ಏನೂ ಇಲ್ಲ ಎಂದಿದ್ದಾರೆ ಮತ್ತೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:47 pm, Mon, 26 December 22