Viral Video: ‘ಭಾರತದ ಉಕ್ಕಿನ ಮಹಿಳೆ’ ಈಕೆಯ ಸಾಹಸಕ್ಕೆ ದಂಗಾಗಿರುವ ನೆಟ್ಟಿಗರು

|

Updated on: Jul 11, 2023 | 2:08 PM

Woman Power : ಆದರೆ ಒಬ್ಬ ಮಾತ್ರ 'ಇವು ನಕಲಿ ಟಯರುಗಳು' ಎಂದಿದ್ದಾನೆ. ಅದೇ ಗಂಡಸಾಗಿದ್ದರೆ? ಈತನನ್ನು ಸುಮಾರು 50 ಜನರು ದಬಾಯಿಸಿದ್ದಾರೆ; ಮಹಿಳೆಯ ಶಕ್ತಿ ಸಾಮರ್ಥ್ಯವನ್ನು ಎಂದೂ ಅನುಮಾನಿಸಬೇಡಿ, ಅವಮಾನಿಸಬೇಡಿ.

Viral Video: ಭಾರತದ ಉಕ್ಕಿನ ಮಹಿಳೆ ಈಕೆಯ ಸಾಹಸಕ್ಕೆ ದಂಗಾಗಿರುವ ನೆಟ್ಟಿಗರು
ವೇಟ್​ ಲಿಫ್ಟರ್​ ಕವಿ
Follow us on

Woman : ದೈಹಿಕವಾಗಿ ಮತ್ತು ಮಾನಸಿಕವಾಗಿ ಗಂಡಿಗಿಂತಲೂ ಹೆಣ್ಣು ಶಕ್ತಿವಂತಳು ಎನ್ನುವುದು ಈ ವಿಡಿಯೋ ನೋಡಿದಾಗ ಅರಿವಿಗೆ ಬಾರದೇ ಇರದು. ಈ ಮಹಿಳೆ ತನ್ನ ಬೆನ್ನಿನ ಮೇಲೆ ಮೂರು ಟಯರ್​ಗಳನ್ನು ಹೊತ್ತುಕೊಂಡಿದ್ದಾಳೆ. ಈಕೆಯ ದೈಹಿಕ ಶಕ್ತಿಯನ್ನು ನೋಡಿದ ನೆಟ್ಟಿಗರು ಬೆರಗುಗೊಂಡಿದ್ದಾರೆ. ನಿತ್ಯವೂ ಸರಳ ವ್ಯಾಯಾಮ ಮಾಡುವುದೇ ದುಸ್ತರ ಮತ್ತು ಸವಾಲಿನ ಕೆಲಸ. ಅಂಥದ್ದರಲ್ಲಿ ಈಕೆ ಇಷ್ಟೊಂದು ಭಾರವನ್ನು ತಡೆದುಕೊಳ್ಳುತ್ತಾಳೆಂದರೆ… ಈ ಕೆಳಗಿನ ವಿಡಿಯೋ ನೋಡಿ.

ಈ ವಿಡಿಯೋದಲ್ಲಿರುವವರು ಕವಿ ಎಂಬ ವೃತ್ತಿಪರ ವೇಟ್​ಲಿಫ್ಟರ್​. ಮೇ 13 ರಂದು ಈ ವಿಡಿಯೋ ಅನ್ನು ಅವರು ಹಂಚಿಕೊಂಡಿದ್ದಾರೆ. ಈತನಕ ಸುಮಾರು 16 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ. ಸುಮಾರು 2 ಮಿಲಿಯನ್​ ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ. ಸಹಸ್ರಾರು ಜನರು ಈಕೆಯ ಈ ಸಾಹಸವನ್ನು ಶ್ಲಾಘಿಸಿದ್ದಾರೆ.

ಇದನ್ನೂ ಓದಿ : Viral Optical Illusion: ಈ ಚಿತ್ರದಲ್ಲಿ ಅಡಗಿರುವ ಸಂಖ್ಯೆಯನ್ನು ಕಂಡುಹಿಡಿಯಬಹುದೆ?

ದೇವರೇ! ಇದು ಸಾಮಾನ್ಯರಿಗೆ ನೀಗುವಂಥದ್ದಲ್ಲ, ನೀವಿದನ್ನು ಸಾಧಿಸುತ್ತಿದ್ದೀರಿ, ಒಳ್ಳೆಯದಾಗಲಿ ಎಂದಿದ್ದಾರೆ ಒಬ್ಬರು. ಮಹಿಳೆ ದುರ್ಬಲಳು ಎನ್ನುವವರು ಈ ವಿಡಿಯೋ ನೋಡಿ ಒಮ್ಮೆ ಎಂದು ಕೆಲವರನ್ನು ಟ್ಯಾಗ್ ಮಾಡಿದ್ದಾರೆ ಒಂದಿಷ್ಟು ಜನ. ಬೆನ್ನುಮೂಳೆ ಮುರಿದರೆ ಯಾರೂ ಈಕೆಯನ್ನು ಕಾಪಾಡಲಾಗದು ಎಂದಿದ್ದಾರೆ ಒಂದಿಷ್ಟು ಜನ.

ಇದನ್ನೂ ಓದಿ : Viral Video: ಫ್ರೀಸ್ಟೈಲ್​ ಫುಟ್​ಬಾಲ್​ನಲ್ಲಿ ಲಿವ್​ ಕುಕ್​ ಗಿನ್ನೀಸ್ ವಿಶ್ವ​ ದಾಖಲೆ

ಈ ಟಯರ್​​ಗಳೇ ನಕಲಿ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಕ್ಕೆ ಸುಮಾರು 50 ಜನರು ಅವನ ವಿರುದ್ಧ ತಿರುಗಿ ಬಿದ್ದಿದ್ಧಾರೆ. ವೃತ್ತಿಪರ ವೇಟ್​ಲಿಫ್ಟರ್​ ಆಕೆ. ಆಕೆಯ ಶಕ್ತಿ, ಸಾಧನೆಯನ್ನು ಹೀಗೆ ಅವಮಾನಿಸಬೇಡಿ. ನೀವು ಈ ಸಾಹಸದಲ್ಲಿ ತೊಡಗಿಕೊಳ್ಳಲು ಸಾಧ್ಯವಾಗುತ್ತದೆಯೇ? ಎಂದು ಸರೀ ದಬಾಯಿಸಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 2:07 pm, Tue, 11 July 23