ಜಗತ್ತಿನಲ್ಲಿ ನೀವು ಭೇಟಿ ನೀಡಬಹುದಾದ ಹಲವು ದೇಶಗಳಿವೆ, ಕೆಲವು ದೇಶಗಳಿಗೆ ವೀಸಾ ಅಗತ್ಯವಿಲ್ಲ ಇನ್ನೂ ಕೆಲವು ದೇಶಗಳಿಗೆ ವೀಸಾ ಕೂಡ ಬೇಕು. ಆದರೆ ಪಾಸ್ಪೋರ್ಟ್ ಇಲ್ಲದೆ ನೀವು ಯಾವ ದೇಶಕ್ಕೂ ಭೇಟಿ ನೀಡಲಾಗದು.
ಹಾಗೆಯೇ ಕಲಾವಿದ ಝಾಕ್ ಎಂಬುವವರು ಆನ್ಲೈನ್ನಲ್ಲಿ ಕೇವಲ 50 ಸಾವಿರ ರೂ.ಗೆ ಸಣ್ಣ ದೇಶವೊಂದನ್ನು ಖರೀದಿಸಿದ್ದಾರೆ.
ಆ ದೇಶದಲ್ಲಿರುವವರು ಒಬ್ಬರೇ, ಆದರೆ ಯಾರಾದರೂ ಭೇಟಿ ನೀಡಬೇಕಾದರೆ ಪಾಸ್ಪೋರ್ಟ್ ಅಗತ್ಯವಿದೆಯಂತೆ.
ಅಮೆರಿಕದ ಉತಾಹ್ ಮರುಭೂಮಿ ಪ್ರದೇಶದಲ್ಲಿ 2005ರಲ್ಲಿ ಕಲಾವಿದ ಜಾಕ್ ಲ್ಯಾಂಡ್ಸ್ಬರ್ಗ್ ಎಂಬುವವರು 2 ಎಕರೆ ಭೂಮಿ ಖರೀದಿಸಿದ್ದರು. ಕೇವಲ 610 ಡಾಲರ್ ಅಂದರೆ 50 ಸಾವಿರ ರೂಪಾಯಿಗೆ ಆನ್ಲೈನ್ ಸೈಟ್ನಿಂದ ಈ ಜಮೀನನ್ನು ಖರೀದಿಸಿದ್ದರು.
ಅವರು ಮೊದಲ ಬಾರಿಗೆ ಭೂಮಿಯನ್ನು ನೋಡಲು ಹೋದಾಗ ಅವರಿಗೆ ಗುರುತು ಸಿಗುವಂತೆ ಭೂಮಿಯ ಮೇಲೆ ಹಳದಿ ಹಾಗೂ ಕೆಂಪು ಬಣ್ಣದ ಧ್ವಜ ಇರಿಸಿದ್ದರು. ಅವರಿಗೆ ಆಮೇಲೆ ತನ್ನದೇ ಆದ ದೇಶ ರಚಿಸಬೇಕೆನಿಸಿತು.
ಮತ್ತಷ್ಟು ಓದಿ: ರಜೆ ಕಳೆಯಲು ಹಿಂದೆಂದೂ ನೋಡದ ಊರಿಗೆ ಹೋಗಿದ್ದ ಕುಟುಂಬ ಬಂಗಲೆಯ ಗೋಡೆಯ ಮೇಲಿದ್ದ ಚಿತ್ರ ಕಂಡು ವಾಪಸಾಗಿದ್ದೇಕೆ?
ಝಾಕಿಸ್ತಾನ್ ಎಂದು ನಾಮಕರಣ ಮಾಡಿದರು, ದೇಶವನ್ನು ಪ್ರವೇಶಿಸಲು ಪಾಸ್ಪೋರ್ಟ್ ಅಗತ್ಯವಿದೆ ಎನ್ನುವ ನಿಯಮವನ್ನೂ ತಂದರು.
ಝಾಕ್ ಅವರು ಭೂಮಿಯನ್ನು ಖರೀದಿಸಿದಾಗ ದೇಶವು ರಾಜಕೀಯವಾಗಿ ಕೆಟ್ಟ ದಿನಗಳನ್ನು ಎದುರಿಸುತ್ತಿದೆ ಎಂದು ಹೇಳಿದ್ದರು. ರಾಜಕಾರಣಿಗಳಿಗಿಂತ ಉತ್ತಮವಾಗಿ ದೇಶವನ್ನು ನಡೆಸಬಲ್ಲೆ ಎಂದು ಅವರು ಭಾವಿಸಿದರು.
ಝಾಕ್ ಈಗ ಪ್ರತಿ ವರ್ಷ ಕೆಲವು ದಿನಗಳವರೆಗೆ ಪಾಕಿಸ್ತಾನಕ್ಕೆ ಹೋಗುತ್ತಾರೆ. ತಮ್ಮ ಜಮೀನಿನಲ್ಲಿ ಪೆಟ್ರೋಲ್ ಗೇಟ್ ನಿರ್ಮಿಸಿ ರೋಬೋಟ್ ಕೂಡ ನಿರ್ಮಿಸಿದ್ದಾರೆ. ಅವರು ತಮ್ಮ ವೆಬ್‌ಸೈಟ್‌ನಿಂದ ನಿಜವಾದ ಪಾಸ್‌ಪೋರ್ಟ್‌ಗಳನ್ನು 40 ಡಾಲರ್ಗೆ ಮಾರಾಟ ಮಾಡುತ್ತಾರೆ.
ಜಮೀನಿನಲ್ಲಿ ಮನೆ ಕಟ್ಟಲು ಮನಸ್ಸಿಲ್ಲ
ಇಲ್ಲಿ ನೀರಿನ ಮೂಲವಿಲ್ಲದ ಕಾರಣ ಮನೆ ಕಟ್ಟಲು ಮನಸ್ಸಿಲ್ಲ, ಹತ್ತಿರದ ಪಟ್ಟಣ ಮೊಂಟೆಲ್ಲಾ ಸುಮಾರು 100 ಕಿ.ಮೀ ದುರದಲ್ಲಿದೆ. ಝಾಕ್ನ ಕೆಲವ ಸ್ನೇಹಿತರು ಝಾಕಿಸ್ತಾನ್ ನಿವಾಸಿಗಳು. ಆಗಾಗ ಅವರು ಅಲ್ಲಿ ಸೇರಿ ಮೋಜು, ಮಸ್ತಿ ಮಾಡುತ್ತಾರೆ.
ಝಾಕ್ ತನ್ನ ದೇಶವನ್ನು ಸುಧಾರಿಸಲು 8 ಲಕ್ಷ ರೂ ಖರ್ಚು ಮಾಡಿದ್ದಾರೆ, ಹವಾಮಾನವು ತುಂಬಾ ಕೆಟ್ಟದಾಗಿದೆ, ಹಗಲಿನಲ್ಲಿ ತೀವ್ರವಾದ ಶಾಖ ಮತ್ತು ರಾತ್ರಿಯಲ್ಲಿ ತೀವ್ರ ಚಳಿ ಇರುತ್ತದೆ. ಅವರು ಪ್ರತಿ ವರ್ಷ ತೆರಿಗೆ ಪಾವತಿಸುತ್ತಾರೆ, ಆದ್ದರಿಂದ ಅವರು ಮಾಡುತ್ತಿರುವುದು ಕಾನೂನುಬಾಹಿರವಲ್ಲ ಎಂದು ಹೇಳಬಹುದು.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:53 am, Fri, 12 April 24