Trending : ಹವ್ಯಾಸ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಬಹಳ ಮುಖ್ಯ. ಹವ್ಯಾಸಗಳೇ ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತವೆ. ಆದರೆ ಯಾವ ಹವ್ಯಾಸವನ್ನು ರೂಢಿಸಿಕೊಳ್ಳುತ್ತೇವೆ ಎನ್ನುವುದರ ಮೇಲೆ ನಮ್ಮ ಬದುಕು ನಿಲ್ಲುತ್ತದೆ. ಇಲ್ಲೊಬ್ಬಳು ವಿಚಿತ್ರವಾದ ಹವ್ಯಾಸವನ್ನು ರೂಢಿಸಿಕೊಂಡು ಅಪರೂಪದ ದಾಖಲೆ ನಿರ್ಮಿಸಿ ಜೊತೆಗೆ 6 ಲಕ್ಷ ರೂಪಾಯಿ ಬಹುಮಾನ ಪಡೆದಿದ್ದಾಳೆ. ಪಶ್ಚಿಮ ಬಂಗಾಳದ ಹೂಗ್ಲಿಯ ಶ್ರೀರಾಂಪುರದ ತ್ರಿಪರ್ಣ ಚಕ್ರವರ್ತಿ ಎಂಬ ತರುಣಿಯೇ ಬಹುಮಾನಿತೆ. 100 ದಿನಗಳ ಕಾಲ ಸತತ 9 ಗಂಟೆ ನಿದ್ದೆ ಮಾಡಿ ದಾಖಲೆ ನಿರ್ಮಿಸಿದ್ದಾಳೆ. ರಾಷ್ಟ್ರಮಟ್ಟದಲ್ಲಿ ಈ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಭಾಗವಹಿಸಲು 4.5 ಲಕ್ಷ ಜನರು ಅರ್ಜಿ ಸಲ್ಲಿಸಿದ್ದರು. ಈ ಪೈಕಿ 15 ಸ್ಪರ್ಧಿಗಳು ಆಯ್ಕೆಯಾಗಿದ್ದರು. ಕೊನೆಗೆ ನಾಲ್ಕು ಸ್ಪರ್ಧಿಗಳು ಅಂತಿಮ ಹಂತ ತಲುಪಿದರು.
पश्चिम बंगाल की लड़की ने सोने का रिकॉर्ड बनाया जीत लिए लाखों रुपये
बात दें कि इस लड़की ने 4 लाख कंटेस्टेंट को हराकर अच्छी नींद का खिताब अपने नाम किया। लगातार 100 दिन तक रोज 9 घंटे सोकर 6 लाख रुपए जीत लिए हैं।
मुझे उम्मीद है कि ये वाला टैलेंट आप में से भी कई लोगों के पास होगा।? pic.twitter.com/3QCMph2RZd
— Shubhankar Mishra (@shubhankrmishra) September 7, 2022
ಸ್ಪರ್ಧಿಗಳು ವೆಬ್ಸೈಟ್ ಮೂಲಕ ಈ ಸ್ಪರ್ಧೆಯ ಕುರಿತು ಮಾಹಿತಿ ತಿಳಿದುಕೊಂಡಿದ್ದರು. ಎಲ್ಲ ಸ್ಪರ್ಧಿಗಳಿಗೂ ಹಾಸಿಗೆ ಮತ್ತು ಸ್ಲೀಪ್ ಟ್ರ್ಯಾಕರ್ ಕೊಟ್ಟು ಮಲಗುವ ನಿಮ್ಮ ಕೌಶಲವನ್ನು ನೀವು ಪ್ರದರ್ಶಿಸಬೇಕು ಎಂದು ಹೇಳಲಾಗಿತ್ತು. ವಿಜೇತೆ ತ್ರಿಪರ್ಣ ಬಹುಮಾನದ ಹಣದಲ್ಲಿ ತನಗೆ ಅಗತ್ಯವಿರುವ ವಸ್ತುಗಳನ್ನು ಖರೀದಿಸಬೇಕೆಂಬ ಆಲೋಚನೆ ಇದೆ ಎಂದು ಹೇಳಿಕೊಂಡಿದ್ದಾಳೆ. ಅಮೆರಿಕ ಮೂಲದ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಈಕೆ ಸದ್ಯ ವರ್ಕ್ ಫ್ರಾಂ ಹೋಮ್ನಲ್ಲಿದ್ದಾಳೆ. ಈ ಕಾರಣದಿಂದಾಗಿ, ಅವಳು ರಾತ್ರಿಯೂ ಎಚ್ಚರವಾಗಿರಬೇರಬೇಕಾದ ಅನಿವಾರ್ಯತೆ ಇತ್ತು. ಅಂತೂ ಈ ಸ್ಪರ್ಧೆಯ ಮೂಲಕ ಎಲ್ಲ ನಿದ್ದೆಯನ್ನು ವಾಪಾಸು ಪಡೆದುಕೊಂಡಿದ್ದಾಳೆ ಎನ್ನಬಹುದೆ?
ದಿ ಲ್ಯಾನ್ಸೆಟ್ ಚೈಲ್ಡ್ ಅಂಡ್ ಅಡೋಲೆಸೆಂಟ್ ಹೆಲ್ತ್ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನಾ ವರದಿಯ ಪ್ರಕಾರ, ಮಕ್ಕಳು ಒಂಬತ್ತು ಗಂಟೆಗಿಂತ ಕಡಿಮೆ ಅವಧಿ ನಿದ್ರಿಸಿದರೆ ಮೆದುಳಿನ ಕಾರ್ಯವಿಧಾನದಲ್ಲಿ ಕೆಲ ಬದಲಾವಣೆಗಳಾಗಿ ಸ್ಮರಣಶಕ್ತಿ, ಬೌದ್ಧಿಕ ಶಕ್ತಿ, ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಮಕ್ಕಳು ಪ್ರತೀ ರಾತ್ರಿ 9ರಿಂದ 12 ಗಂಟೆಗಳ ಕಡ್ಡಾಯವಾಗಿ ಮಲಗಬೇಕು.
ಇನ್ನು ವಯಸ್ಕರ ನಿದ್ರಾಹೀನತೆಗೆ ಮಾನಸಿಕ ಸಮಸ್ಯೆಗಳೂ ಕಾರಣ. ಖಿನ್ನತೆ, ಆತಂಕ ಇರುವವರಲ್ಲಿ ನಿದ್ರೆಯಲ್ಲಿ ಏರುಪೇರು ಉಂಟಾಗುತ್ತಿರುತ್ತದೆ. ಆಗ ಸ್ಮರಣಶಕ್ತಿ, ನಿರ್ಧಾರ ತೆಗೆದುಕೊಳ್ಳುವುದು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ವಿಷಯವಾಗಿ ಅವರಿಗೆ ಗೊಂದಲ ಉಂಟಾಗುತ್ತಿರುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಒಟ್ಟಿನಲ್ಲಿ ಸರಿಯಾಗಿ ನಿದ್ರೆ ಮಾಡಿ ಆರೋಗ್ಯ ಚೆನ್ನಾಗಿಟ್ಟುಕೊಳ್ಳಿ. ಇಲ್ಲವಾದರೆ ಹೀಗೆ ಸ್ಲೀಪಿಂಗ್ ಇಂಟರ್ನ್ಶಿಪ್ಗಳಿಗೆ ಹೋಗಿ ನಿದ್ರೆ ಮಾಡುವುದನ್ನು ಕಲಿಯಬೇಕಾಗುತ್ತದೆ. ಬಹುಮಾನ ಸಿಗುವುದು ಮಾತ್ರ ಒಬ್ಬರಿಗೆ!
ಮತ್ತಷ್ಟು ಟ್ರೆಂಡಿಂಗ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 10:47 am, Thu, 8 September 22