Video: ನಿಮ್ಮ ಕಾಮ ತೃಷೆ ತೀರಿಸಲು ನಾವಿದ್ದೇವೆ, ದಯವಿಟ್ಟು ಅಮಾಯಕ ಹೆಣ್ಮಕ್ಕಳ ಬಾಳು ಹಾಳು ಮಾಡಬೇಡಿ; ಲೈಂಗಿಕ ಕಾರ್ಯಕರ್ತೆ

ವೇಶ್ಯೆಯರು ಅಥವಾ ಲೈಂಗಿಕ ಕಾರ್ಯಕರ್ತೆಯರನ್ನು ಜನರು ಕೀಳಾಗಿ ಕಾಣುತ್ತಾರೆ. ಮತ್ತು ದುಡ್ಡಿಗಾಗಿ ದೇಹ ಮಾರಿಕೊಂಡವಳು ಎಂದು ತುಚ್ಯವಾಗಿ ಮಾತನಾಡುತ್ತಾರೆ. ಆದ್ರೆ ಇದೀಗ ಕೊಲ್ಕತ್ತಾ ರೇಪ್ ಕೇಸ್ ಗೆ ಸಂಬಂಧಪಟ್ಟಂತೆ ಮಾತನಾಡಿದ ಲೈಂಗಿಕ ಕಾರ್ಯಕರ್ತೆಯೊಬ್ಬರ ಮಾತು ಎಲ್ಲರ ಮನ ಗೆದ್ದಿದೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನಿಮ್ಮ ಕಾಮ ತೃಷೆ ತೀರಿಸಲು ನಮ್ಮ ಬಳಿ ಬನ್ನಿ ಆದ್ರೆ ದಯವಿಟ್ಟು ಅಮಾಯಕ ಹೆಣ್ಣುಮಕ್ಕಳ ಜೀವ, ಜೀವನ ಹಾಳು ಮಾಡಬೇಡಿ ಎಂಬ ಸಂದೇಶವನ್ನು ಕೊಡುವ ಮೂಲಕ ಅವರು ಕೋಟ್ಯಾಂತರ ಜನರ ಹೃದಯ ಗೆದ್ದಿದ್ದಾರೆ.

Video: ನಿಮ್ಮ ಕಾಮ ತೃಷೆ ತೀರಿಸಲು ನಾವಿದ್ದೇವೆ, ದಯವಿಟ್ಟು ಅಮಾಯಕ ಹೆಣ್ಮಕ್ಕಳ ಬಾಳು ಹಾಳು ಮಾಡಬೇಡಿ; ಲೈಂಗಿಕ ಕಾರ್ಯಕರ್ತೆ
ವೈರಲ್​​​ ವಿಡಿಯೋ
Updated By: ಅಕ್ಷಯ್​ ಪಲ್ಲಮಜಲು​​

Updated on: Aug 23, 2024 | 3:32 PM

ಕೋಲ್ಕತ್ತಾದ ಆರ್‌ಜಿ ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 31 ವರ್ಷದ ಮಹಿಳಾ ಟ್ರೈನಿ ವೈದ್ಯೆಯ ಮೇಲೆ ಕಾಮುಕನೊಬ್ಬ ಅತ್ಯಾಚಾರ ಎಸಗಿ ಭೀಕರವಾಗಿ ಕೊಲೆ ಮಾಡಿದ ಸುದ್ದಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದು, ಆರೋಪಿಗೆ ಸರಿಯಾದ ಶಿಕ್ಷೆನೀಡುವಂತೆ ಹಾಗೂ ಈ ಪ್ರಕರಣದ ಕುರಿತು ಬೇಜವಾಬ್ದಾರಿ ತೋರಿದ ಇಲ್ಲಿನ ಸರ್ಕಾರದ ಬಗ್ಗೆ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದೆ. ಈ ನಡುವೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಲೈಂಗಿಕ ಕಾರ್ಯಕರ್ತೆಯೊಬ್ಬರು ಮಾತನಾಡಿದ್ದು, ನಿಮ್ಮ ಕಾಮ ತೃಷೆ ತೀರಿಸಲು ನಮ್ಮ ಬಳಿ ಬನ್ನಿ ಆದ್ರೆ ದಯವಿಟ್ಟು ಅಮಾಯಕ ಹೆಣ್ಣುಮಕ್ಕಳ ಜೀವ, ಜೀವನ ಹಾಳು ಮಾಡಬೇಡಿ ಎಂದು ಕಾಮುಕ ವ್ಯಕ್ತಿಗಳಿಗೆ ಉತ್ತಮ ಸಂದೇಶವನ್ನು ಕೊಟ್ಟಿದ್ದಾರೆ. ಇವರ ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಇವರ ಈ ಮಾತುಗಳು ಕೋಟ್ಯಾಂತರ ಜನರ ಹೃದಯ ಗೆದ್ದಿದೆ.

ಈ ಕುರಿತ ಪೋಸ್ಟ್ ಒಂದನ್ನು Lamist ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ರೆಸ್ಪೆಕ್ಟ್” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

ವೈರಲ್​​​​ ವಿಡಿಯೋ ಇಲ್ಲಿದೆ ನೋಡಿ:

ವೈರಲ್ ವಿಡಿಯೋದಲ್ಲಿ ಲೈಂಗಿಕ ಕಾರ್ಯಕರ್ತೆಯೊಬ್ಬರು ನಿಮಗೆ ಹೆಣ್ಣಿನ ಮೇಲೆ ಅಷ್ಟೊಂದು ಕಾಮವಿದ್ದರೆ ನಮ್ಮ ಬಳಿಗೆ ಬನ್ನಿ, ದಯವಿಟ್ಟು ಅಮಾಯಕ ಹೆಣ್ಣಿನ ಬದುಕನ್ನು ಹಾಳು ಮಾಡಬೇಡಿ ಎಂಬ ಉತ್ತಮ ಸಂದೇಶ ಕೊಡುವ ದೃಶ್ಯವನ್ನು ಕಾಣಬಹುದು. ಕೊಲ್ಕತ್ತಾ ರೇಪ್ ಕೇಸ್ ಬಗ್ಗೆ ರಿಪೋರ್ಟರ್ ಒಬ್ಬರ ಬಳಿ ಮಾತನಾಡುವಾಗ ಲೈಂಗಿಕ ಕಾರ್ಯಕರ್ತೆಯೊಬ್ಬರು ನಿಮ್ಮ ಕಾಮ ತೃಷೆಯನ್ನು ನಮ್ಮಂಥವರ ಬಳಿಗೆ ಬನ್ನಿ ಆದ್ರೆ ದಯವಿಟ್ಟು ಅಮಾಯಕ ಹೆಣ್ಣುಮಕ್ಕಳನ್ನು ಅತ್ಯಾಚಾರದ ಮೂಲಕ ಅವರ ಜೀವ, ಜೀವನವನ್ನು ಹಾಳು ಮಾಡಬೇಡಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಡೇಟಿಂಗ್ ನೈಟ್ ಕ್ಲಬ್ ಜತೆ ಸೇರಿ ಅಮಾಯಕ ಪುರುಷರನ್ನು ವಂಚಿಸುತ್ತಾರೆ ಈ ಯುವತಿಯರು

ಆಗಸ್ಟ್ 21 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಒಂದುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಹಾಗಾದ್ರೆ ವೇಶ್ಯಾವಾಟಿಕೆ ಮಾತ್ರ ಅತ್ಯಾಚಾರ ತಡೆಗಟ್ಟಲಿರುವ ಮಾರ್ಗವೇ?’ ಎಂಬ ಪ್ರಶ್ನೆ ಕೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಇಂತಹ ಹೇಳಿಕೆಯನ್ನು ಸಾರ್ವಜನಿಕವಾಗಿ ನೀಡಲು ಸಾಕಷ್ಟು ಧೈರ್ಯ ಬೇಕು. ಈ ಮಹಿಳೆಗೆ ನನ್ನದೊಂದು ಸೆಲ್ಯೂಟ್’ ಎಂದು ಹೇಳಿದ್ದಾರೆ.

ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ