Trending: ಸಖತ್​​ ಟ್ರೆಂಡಿಂಗ್​​​ನಲ್ಲಿರುವ ​​​’Chin Tapak Dam Dam’ ಡೈಲಾಗ್ ಎಲ್ಲಿಂದ ಬಂತು ಗೊತ್ತಾ?

|

Updated on: Aug 06, 2024 | 5:50 PM

'Chin Tapak Dam Dam' ಎಂಬ ಡೈಲಾಗ್ ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​​ ಟ್ರೆಂಡ್​ ಸೆಟ್​​ ಕ್ರಿಯೇಟ್​ ಮಾಡಿದೆ. ಇದನ್ನು ಬಳಸಿ ಸಾಕಷ್ಟು ಜನರು ರೀಲ್ಸ್​​ ಕೂಡ ಮಾಡುತ್ತಿದ್ದಾರೆ. ಆದರೆ ಈ ಡೈಲಾಗ್​​ ಯಾವ ಮೂವಿಯದ್ದು, ಎಲ್ಲಿಂದ ಬಂತು ಎಂಬುದರ ಬಗ್ಗೆ ನಿಮಗೆ ತಿಳಿದಿದೆಯಾ?

Trending: ಸಖತ್​​ ಟ್ರೆಂಡಿಂಗ್​​​ನಲ್ಲಿರುವ ​​​Chin Tapak Dam Dam ಡೈಲಾಗ್ ಎಲ್ಲಿಂದ ಬಂತು ಗೊತ್ತಾ?
What is 'Chin Tapak Dam Dam'?
Follow us on

ಇನ್ಸ್ಟಾಗ್ರಾಮ್​​​ನಲ್ಲಿ ರೀಲ್ಸ್​​​ ಮಾಡುವ ಗೀಳು ನಿಮಗಿದ್ದರೆ ‘Chin Tapak Dam Dam’ ಡೈಲಾಗ್ ನೀವು ಕೇಳಿರುತ್ತೀರಿ. ಇದೀಗ ಸಾಕಷ್ಟು ಜನರು ಈ ರೀಲ್ಸ್​​​ ಮಾಡುತ್ತಿದ್ದು, ಈ ಡೈಲಾಗ್ ಸಖತ್​​ ಟ್ರೆಂಡಿಂಗ್​​ನಲ್ಲಿದೆ. ಆದರೆ ಈ ಡೈಲಾಗ್​​ ಯಾವ ಮೂವಿಯದ್ದು, ಎಲ್ಲಿಂದ ಬಂತು ಎಂಬುದರ ಬಗ್ಗೆ ನಿಮಗೆ ತಿಳಿದಿದೆಯಾ? ತಿಳಿದಿಲ್ಲವೆಂದಾದರೆ ‘Chin Tapak Dam Dam’ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

‘Chin Tapak Dam Dam’ ಎಂಬುದು ಜನಪ್ರಿಯ ಕಾರ್ಟೂನ್ ಶೋ ‘ಚೋಟಾ ಭೀಮ್’ ನಿಂದ ಬಂದ ಒಂದು ಸಂಭಾಷಣೆಯಾಗಿದೆ. ‘Chin Tapak Dam Dam’ ಇದು ‘ಚೋಟಾ ಭೀಮ್’ ಶೋನಲ್ಲಿ ಖಳನಾಯಕ ‘ಟಾಕಿಯಾ’ ಎಂಬ ಪಾತ್ರ ಬಳಸುವ ಡೈಲಾಗ್​​. ಟಕಿಯಾ ತನ್ನ ಮಾಂತ್ರಿಕ ಶಕ್ತಿಯನ್ನು ಪ್ರದರ್ಶಿಸುವ ಸಮಯದಲ್ಲಿ ಈ ಡೈಲಾಗ್​​ ಹೇಳುವುದನ್ನು ಕಾಣಬಹುದು. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಇಲ್ಲಿದೆ ನೋಡಿ.

‘Chin Tapak Dam Dam’ ಡೈಲಾಗ್ ಎಲ್ಲಿಂದ ಬಂತು ನೋಡಿ:

ಇದನ್ನೂ ಓದಿ: ಮಹಿಳೆಯ ತಲೆ ತುಂಬಾ ಹೇನು, ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿಸಿದ ಪ್ರಯಾಣಿಕರು

ಇದೀಗಾ ಸಖತ್​​​​ ಟ್ರೆಂಡಿಂಗ್ ಆಗಿದೆ. ಕೇವಲ ಚೋಟಾ ಭೀಮ್ ಅಭಿಮಾನಿಗಳು ಮಾತ್ರವಲ್ಲದೆ ವಿವಿಧ ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಡೈಲಾಗ್​ ಬಳಸಿ ರೀಲ್ಸ್​​ ಮಾಡುತ್ತಿದ್ದಾರೆ. ಕೆಲವರು ಇದನ್ನು ರಿಂಗ್‌ಟೋನ್ ಆಗಿ ಇಟ್ಟುಕೊಂಡಿದ್ದಾರೆ. ಅಷ್ಟರ ಮಟ್ಟಿಗೆ ಈ ಡೈಲಾಗ್​​​ ಜನಮೆಚ್ಚುಗೆ ಪಡೆದುಕೊಂಡಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ