300 ವರ್ಷಗಳಿಂದ ಈ ಹಳ್ಳಿಯ ಮನೆಗಳಿಗೆ ಬಾಗಿಲುಗಳೇ ಇಲ್ಲ, ಆದರೂ ಕಳ್ಳತನ ನಡೆದಿಲ್ಲ!

|

Updated on: Oct 14, 2024 | 10:21 AM

ರಾಜಸ್ಥಾನದ ಭಿಲ್ವಾರಾ ಜಿಲ್ಲೆಯಲ್ಲಿ ಒಂದು ವಿಶಿಷ್ಟ ಗ್ರಾಮವಿದೆ, ಇಲ್ಲಿನ ಮನೆಗಳಿಗೆ ಕಳೆದ 300 ವರ್ಷಗಳಿಂದ ಬಾಗಿಲುಗಳೇ ಇಲ್ಲ ಎಂಬುದು ಅಚ್ಚರಿ ಮೂಡಿಸಿದೆ ಅಷ್ಟೇ ಅಲ್ಲದೆ ಈ ಗ್ರಾಮದಲ್ಲಿ ಕಳ್ಳತನ ಕೂಡ ಇಲ್ಲಿಯವರೆಗೂ ಆಗಿಲ್ಲ. ಸಾಮಾನ್ಯವಾಗಿ ಪ್ರತಿಯೊಬ್ಬರೂ ಮನೆಯ ಬಾಗಿಲುಗಳು ನಮ್ಮನ್ನು ಜತೆಗೆ ಮನೆಯಲ್ಲಿರುವ ವಸ್ತುಗಳನ್ನು ರಕ್ಷಿಸುತ್ತದೆ ಎಂದು ನಂಬಲಾಗಿದೆ. ಆದರೆ ಈ ಹಳ್ಳಿಯಲ್ಲಿ ಎಲ್ಲವೂ ವಿಚಿತ್ರ.

300 ವರ್ಷಗಳಿಂದ ಈ ಹಳ್ಳಿಯ ಮನೆಗಳಿಗೆ ಬಾಗಿಲುಗಳೇ ಇಲ್ಲ, ಆದರೂ ಕಳ್ಳತನ ನಡೆದಿಲ್ಲ!
ಮನೆ
Image Credit source: India.com
Follow us on

ರಾಜಸ್ಥಾನದ ಭಿಲ್ವಾರಾ ಜಿಲ್ಲೆಯಲ್ಲಿ ಒಂದು ವಿಶಿಷ್ಟ ಗ್ರಾಮವಿದೆ, ಇಲ್ಲಿನ ಮನೆಗಳಿಗೆ ಕಳೆದ 300 ವರ್ಷಗಳಿಂದ ಬಾಗಿಲುಗಳೇ ಇಲ್ಲ ಎಂಬುದು ಅಚ್ಚರಿ ಮೂಡಿಸಿದೆ ಅಷ್ಟೇ ಅಲ್ಲದೆ ಈ ಗ್ರಾಮದಲ್ಲಿ ಕಳ್ಳತನ ಕೂಡ ಇಲ್ಲಿಯವರೆಗೂ ಆಗಿಲ್ಲ. ಸಾಮಾನ್ಯವಾಗಿ ಪ್ರತಿಯೊಬ್ಬರೂ ಮನೆಯ ಬಾಗಿಲುಗಳು ನಮ್ಮನ್ನು ಜತೆಗೆ ಮನೆಯಲ್ಲಿರುವ ವಸ್ತುಗಳನ್ನು ರಕ್ಷಿಸುತ್ತದೆ ಎಂದು ನಂಬಲಾಗಿದೆ. ಆದರೆ ಈ ಹಳ್ಳಿಯಲ್ಲಿ ಎಲ್ಲವೂ ವಿಚಿತ್ರ.

ಶನಿ ಶಿಂಗ್ನಾಪುರ್​ ಎನ್ನುವ ಹಳ್ಳಿಯಲ್ಲಿ ಒಟ್ಟು 100 ಮನೆಗಳಿವೆ ಆದರೆ ಯಾವ ಮನೆಗೂ ಬಾಗಿಲುಗಳೇ ಇಲ್ಲ. ಅಷ್ಟೇ ಅಲ್ಲ ಈ ಗ್ರಾಮದ ಪೊಲೀಸ್ ಠಾಣೆಯಲ್ಲಿ ಒಂದೇ ಒಂದು ಕಳ್ಳತನ ಪ್ರಕರಣ ದಾಖಲಾಗಿಲ್ಲ.

ಈ ಗ್ರಾಮದಲ್ಲಿ ಯಾರ ಮನೆಯಲ್ಲಿ ಬಾಗಿಲು ಹಾಕಿಕೊಂಡರೂ ತಕ್ಷಣ ಅದನ್ನು ತೆಗೆದರೆ ಅವರು ತುಂಬಾ ಕೆಟ್ಟ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತಿತ್ತು ಹಾಗಾಗಿ ಅವರು ಮನೆಯ ಬಾಗಿಲುಗಳನ್ನು ಹಾಕುವುದನ್ನೇ ಬಿಟ್ಟಿದ್ದರು. ಈ ಗ್ರಾಮದ ಜನರಿಗೆ ಬಾಗಿಲು ಹಾಕಬೇಡಿ ಎಂದು ಕೇಳಿಕೊಂಡಿದ್ದರು.

ಶನಿ ಮಹಾತ್ಮ ಮಾತ್ರ ಗ್ರಾಮವನ್ನು ಕಾಪಾಡುತ್ತಾನೆ ಎನ್ನುತ್ತಾರೆ ಗ್ರಾಮಸ್ಥರು. ಈ ಕಾರಣಕ್ಕಾಗಿ ಯಾರೂ ತಮ್ಮ ಮನೆಗಳಿಗೆ ಬಾಗಿಲು ಹಾಕಿಕೊಳ್ಳುವುದಿಲ್ಲ.

ಪ್ರಾಣಿಗಳನ್ನು ತಡೆಯಲು ಇಲ್ಲಿನ ಜನರು ಮರದ ಬಲೆಗಳನ್ನು ಮಾತ್ರ ಅಳವಡಿಸುತ್ತಾರೆ. ಇದರಿಂದ ಸಾಕುಪ್ರಾಣಿಗಳು ಅಥವಾ ಬೀದಿ ಪ್ರಾಣಿಗಳು ಮನೆಯೊಳಗೆ ಬರುವಂತಿಲ್ಲ. ಯಾರಾದರೂ ಈ ಸಂಪ್ರದಾಯವನ್ನು ಮುರಿಯಲು ಪ್ರಯತ್ನಿಸಿದರೆ ಕೆಟ್ಟ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ಮತ್ತಷ್ಟು ಓದಿ: ಇಂಡೋನ್ಯೇಷ್ಯಾದಲ್ಲಿ ನಡೆಯುತ್ತೆ ಪ್ರವಾಸಿಗರ ಜೊತೆ ತಾತ್ಕಾಲಿಕ ಮದುವೆ, ಏನಿದು ವಿಚಿತ್ರ ಮದುವೆ ಪದ್ಧತಿ?

ಇದರಿಂದಾಗಿ ಈಗ ಗ್ರಾಮದಲ್ಲಿ ಯಾರೂ ಬಾಗಿಲು ಹಾಕುವ ತಪ್ಪನ್ನು ಮಾಡುವುದಿಲ್ಲ. ಶನಿದೇವರು ಹೊರಜಗತ್ತಿನ ಅಪಾಯಗಳಿಂದ ತಮ್ಮನ್ನು ರಕ್ಷಿಸುತ್ತಾರೆ ಎನ್ನುವ ನಂಬಿಕೆ ಅವರಿಗಿದೆ. ಗ್ರಾಮಸ್ಥರು ಸಹ ಯಾವುದೇ ಮನೆಯಲ್ಲಿ ಬೀಗ ಅಥವಾ ಬಾಗಿಲುಗಳನ್ನು ಅಳವಡಿಸದಿರಲು ನಿರ್ಧರಿಸಿದರು.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ