Optical Illusion : ನಿಮ್ಮ ಸುಪ್ತಪ್ರಜ್ಞೆಯಲ್ಲಿ ಅಡಗಿರುವ ಭಯ ಯಾವುದು ಎಂದು ತಿಳಿದುಕೊಳ್ಳಿ

| Updated By: ಶ್ರೀದೇವಿ ಕಳಸದ

Updated on: Oct 03, 2022 | 11:28 AM

Subconscious Mind : ಇಲ್ಲಿರುವ ಚಿತ್ರವನ್ನು ನೋಡಿದಾಗ ಥಟ್ಟನೆ ನಿಮ್ಮ ಕಣ್ಣಿಗೆ ಬೀಳುವುದು ಏನು? ಅದು ಏನನ್ನು ಸಾಂಕೇತಿಸುತ್ತದೆ? ಮನೋವೈಜ್ಞಾನಿಕ ವಿಶ್ಲೇಷಣೆಯನ್ನಾಧರಿಸಿದ ಆಪ್ಟಿಕಲ್​ ಇಲ್ಲ್ಯೂಷನ್​ ಟೆಸ್ಟ್​ ನಿಮಗಾಗಿ.

Optical Illusion : ನಿಮ್ಮ ಸುಪ್ತಪ್ರಜ್ಞೆಯಲ್ಲಿ ಅಡಗಿರುವ ಭಯ ಯಾವುದು ಎಂದು ತಿಳಿದುಕೊಳ್ಳಿ
ನಿಮಗೆ ಮೊದಲಿಗೆ ಏನು ಕಾಣುತ್ತದೆ ಇಲ್ಲಿ? ಸೌಜನ್ಯ : ದಿ ಮೈಂಡ್ಸ್​ ಜರ್ನಲ್
Follow us on

Optical Illusion : ಆಪ್ಟಿಕಲ್ ಇಲ್ಲ್ಯೂಶನ್ ಮನೋವಿಶ್ಲೇಷಣೆಯ ಉತ್ತಮ ವಿಧಾನಗಳಲ್ಲಿ ಒಂದು. ಅಮೂರ್ತ ಚಿತ್ರದ ಮೂಲಕ ವ್ಯಕ್ತಿಯ ತನ್ನ ವ್ಯಕ್ತಿತ್ವದ ಒಳನೋಟಗಳನ್ನು ಪಡೆದುಕೊಳ್ಳಬಹುದು. ಸಾಮಾನ್ಯವಾಗಿ ಇಂಥ ಚಿತ್ರವನ್ನು ನೋಡಿದಾಗ ಸುಪ್ತಪ್ರಜ್ಞೆಯು ತನ್ನಷ್ಟಕ್ಕೆ ತಾನೇ ಚಿತ್ರದೊಳಗಿರುವುದನ್ನು ಗ್ರಹಿಸಲು ಪ್ರಚೋದನೆ ಕೊಟ್ಟುಕೊಳ್ಳುತ್ತದೆ. ಎಷ್ಟೋ ಸಲ ವ್ಯಕ್ತಿಗೆ ತನ್ನ ಸುಪ್ತಪ್ರಜ್ಞೆಯಲ್ಲಿ ಇಂಥದೊಂದು ಭಯ ಅಡಗಿದೆಯೇ ಎನ್ನುವುದು ಇಂಥ ಮನೋವಿಶ್ಲೇಷಣಾ ವಿಧಾನಗಳಿಗೆ ಒಳಗಾಗುವ ತನಕ ಗೊತ್ತೇ ಆಗಿರುವುದಿಲ್ಲ ಎನ್ನುತ್ತದೆ ‘ದಿ ಮೈಂಡ್ಸ್​ ಜರ್ನಲ್​’. ಇಂಥ ವ್ಯಕ್ತಿತ್ವ ಪರೀಕ್ಷೆಯನ್ನು ಶೀಘ್ರ ರೀತಿಯಲ್ಲಿ ಖಚಿತ ಫಲಿತಾಂಶಗಳಿಂದ ಕಂಡುಕೊಳ್ಳಬಹುದು. ಮೇಲೆ ಕೊಟ್ಟಿರುವ ಚಿತ್ರವನ್ನು ಗಮನಿಸಿ. ನಂತರ ನಿಮಗೆ ಕಂಡ ಆಕೃತಿಯ ವಿಶ್ಲೇಷಣೆ ಬಗ್ಗೆ ಓದಿ.

ಬಾಲಕಿ

ಚಿತ್ರ ನೋಡಿದ ತಕ್ಷಣ ಮರದ ಕೆಳಗೆ ಕುಳಿತ ಪುಟ್ಟಬಾಲಕಿ ಕಣ್ಣಿಗೆ ಬಿದ್ದರೆ, ಬಾಲ್ಯದಲ್ಲಿ ಹತ್ತಿಕ್ಕಿದ ಸಾಕಷ್ಟು ಭಾವನೆಗಳ ಮೊತ್ತವೇ ನಿಮ್ಮೊಳಗಿನ ಭಯಕ್ಕೆ ಮೂಲ. ಏಕೆಂದರೆ ಬಾಲ್ಯಾವಸ್ಥೆಯಲ್ಲಿ ನಡೆದ ಹಲವಾರು ಘಟನೆಗಳು ಮಗುವಿನ ಮನಸ್ಸು, ಮೆದುಳಿನಲ್ಲಿ ಅಚ್ಚೊತ್ತಿರುತ್ತವೆ. ಅವುಗಳು ಏನೆಂದು ಪತ್ತೆಹಚ್ಚಿ ನಿವಾರಣೋಪಾಯ ಕಂಡುಕೊಳ್ಳದಿದ್ದರೆ ಪ್ರೌಢಾವಸ್ಥೆಯಲ್ಲಿ ಅವು ಭಯ, ವ್ಯಸನ ಅಥವಾ ದುರಾಸೆಗಳ ಸ್ವರೂಪದಲ್ಲಿ ಪ್ರಕಟಗೊಳ್ಳುತ್ತವೆ.

ಇದನ್ನೂ ಓದಿ
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಬಾಲ್ಯದಲ್ಲಿ ನಿಮ್ಮ ತಾಯಿಯೊಂದಿಗಿನ ಒಡನಾಟ, ಸಾಮಿಪ್ಯವೇ ನಿಮ್ಮ ಭಾವನಾತ್ಮಕ ಬೆಳವಣಿಗೆಗೆ ಚುಕ್ಕಾಣಿ. ಯಾವುದೋ ಕಾರಣದಿಂದ ಈ ವಿಷಯದಲ್ಲಿ ವ್ಯತ್ಯಾಸವಾದರೆ ಅಥವಾ ಪೂರ್ಣಪ್ರಮಾಣದ ಪ್ರೀತಿ, ವಾತ್ಸಲ್ಯ ದೊರೆಯದಿದ್ದರೆ, ಅದು ಭಯದ ರೂಪದಲ್ಲಿ ನಿಮಗರಿವಿಲ್ಲದೆಯೇ ನಿಮ್ಮೊಳಗೆ ಹುದುಗಿಕೊಂಡುಬಿಡುತ್ತದೆ. ಹಾಗಾಗಿ ಯಾವುದೇ ರೀತಿಯ ನಿರ್ಧಾರಗಳನ್ನು ಮತ್ತು ಜವಾಬ್ದಾರಿಗಳನ್ನು ತೆಗೆದುಕೊಳ್ಳುವಾಗ ನೀವು ತಲ್ಲಣಿಸುತ್ತೀರಿ. ನೀವು ಇಂದು ಏನಾಗಿದ್ದೀರೋ ಅದಕ್ಕೆ ನೀವಷ್ಟೇ ಹೊಣೆ ಅಲ್ಲ. ಆದರೆ ಪರಿಹಾರೋಪಾಯ ಕಂಡುಕೊಳ್ಳುವುದು ನಿಮ್ಮ ಜವಾಬ್ದಾರಿ.

ಚಿಟ್ಟೆ  

ಈ ಚಿತ್ರ ನೋಡಿದ ತಕ್ಷಣ ಚಿಟ್ಟೆ ನಿಮ್ಮ ಕಣ್ಣಿಗೆ ಮೊದಲು ಬಿದ್ದರೆ, ನಿಮ್ಮ ಸುಪ್ತಪ್ರಜ್ಞೆಯಲ್ಲಿ ಸಾವಿನ ಬಗ್ಗೆ ವಿಪರೀತ ಭಯ ಆವರಿಸಿಕೊಂಡಿದೆ ಎಂದರ್ಥ ಮತ್ತು ಜೀವಿಸಲು ಸಾಕಷ್ಟು ಅವಕಾಶಗಳಿದ್ದರೂ ಸಾವಿನ ಬಗ್ಗೆ ಯೋಚಿಸುತ್ತ ಆತಂಕದಲ್ಲೇ ದಿನ ಕಳೆಯುತ್ತಿರುತ್ತೀರಿ. ಆದರೆ ಅಧ್ಯಾತ್ಮದಲ್ಲಿ ಚಿಟ್ಟೆಯನ್ನು ಸಕಾರಾತ್ಮಕತೆಯ ಸಂಕೇತವೆಂದು ಗುರುತಿಸಲಾಗಿದೆ ಎಂಬ ವಿಷಯವೂ ನಿಮ್ಮ ಅರಿವಿನಲ್ಲಿರಲಿ. ಒಂದು ವಿಷಯಕ್ಕೆ ಅನೇಕ ದೃಷ್ಟಿಕೋನಗಳಿರುತ್ತವೆ. ಬೇಕಾದ ಕೋನವನ್ನು ಆಯ್ಕೆ ಮಾಡಿಕೊಂಡು ಹುದುಗಿರುವ ಭಯದಿಂದ ಹೊರಬರಲು ಪ್ರಯತ್ನಿಸುವ ಮಾರ್ಗವನ್ನು ಕಂಡುಕೊಳ್ಳಬೇಕು. ಎಲ್ಲವೂ ಮನೋಬಲದ ಮೇಲೆಯೇ ನಿಂತಿರುವುದು.

ಸ್ಟ್ರಾಬೆರಿ

ಸ್ಟ್ರಾಬೆರಿ ಮೊದಲು ಕಂಡಿತೆ? ಸ್ಟ್ರಾಬೆರಿ ಪ್ರೀತಿ ಮತ್ತು ಹೃದಯದ ಸಂಕೇತ. ಪ್ರೀತಿಯನ್ನು ಕಳೆದುಕೊಂಡ ನೋವು, ದುಃಖ ನಿಮ್ಮಲ್ಲಿ ಶಾಶ್ವತವಾಗಿರುತ್ತದೆ. ಮತ್ತೆ ಮತ್ತೆ ಪ್ರೀತಿಗಾಗಿ ಹಾತೊರೆಯುತ್ತಲೇ ಇರುತ್ತೀರಿ. ನೀವು ಬಯಸಿದ ಪ್ರೀತಿ ನಿಮಗೆ ದಕ್ಕುವುದೇ ಇಲ್ಲ. ನಿರೀಕ್ಷೆಯೇ ನೋವಿಗೆ ಮೂಲ. ಪ್ರೀತಿ ಎನ್ನುವುದರ ಸುಖ ಇರುವುದು ಕೊಡುವುದರಲ್ಲಿ.

(ವಿ.ಸೂ : ಇದು ಅಂತರ್ಜಾಲದ ಮಾಹಿತಿಯನ್ನಾಧರಿಸಿದೆ. ನಿಖರತೆಗಾಗಿ ಮನೋತಜ್ಞರ ಬಳಿ ಸಲಹೆ ಸೂಚನೆ ಪಡೆಯಿರಿ) 

ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 11:20 am, Mon, 3 October 22