Viral Video: ಮಹಾರಾಷ್ಟ್ರ; 45 ದಿನಗಳ ಮರಿಚಿರತೆ ಮರಳಿ ಅಮ್ಮನ ಮಡಿಲು ಸೇರಿದಾಗ

|

Updated on: Jul 10, 2023 | 2:35 PM

Maharashtra : ತಾಯಿಯಿಂದ ಮರಿ ಬೇರ್ಪಟ್ಟರೂ ಒಂದೇ, ಮರಿಯಿಂದ ತಾಯಿ ಬೇರ್ಪಟ್ಟರೂ ಒಂದೇ. ಎರಡೂ ಜೀವಗಳು ವಿಲವಿಲ ಒದ್ದಾಡಿ ಹೋಗುತ್ತವೆ. ಅದೃಷ್ಟ! ಇದೀಗ ಈ ಚಿರತೆಮರಿಗೆ ತನ್ನ ತಾಯಿ ವಾಪಾಸು ಸಿಕ್ಕಿದ್ದಾಳೆ.

Viral Video: ಮಹಾರಾಷ್ಟ್ರ; 45 ದಿನಗಳ ಮರಿಚಿರತೆ ಮರಳಿ ಅಮ್ಮನ ಮಡಿಲು ಸೇರಿದಾಗ
45 ದಿನಗಳ ಚಿರತೆ ಮರಿ
Follow us on

Reunion: ಇದ್ದಕ್ಕಿದ್ದಂತೆ ಮರಿಗೆ ಅಮ್ಮ ಕಾಣದಿದ್ದರೆ, ಅಮ್ಮನಿಗೆ ಮರಿ ಕಾಣದಿದ್ದರೆ ಹೇಗಾಗಬೇಡ? ಕ್ಷಣಗಳಲ್ಲೇ ಅವುಗಳ ಉಸಿರು ಮೇಲುಕೆಳಗಾಗಿರುತ್ತದೆ ಇನ್ನು ವಾರಗಟ್ಟಲೆ ಎಂದರೆ? ಇದೀಗ ತಾಯಿಯಿಂದ ಬೇರ್ಪಟ್ಟಿದ್ದ ಗಂಡುಚಿರತೆಮರಿಯೊಂದು ಮರಳಿ ತಾಯಿಯ ಮಡಿಲು ಸೇರಿದೆ. ಈ ಘಟನೆ ಮಹಾರಾಷ್ಟ್ರದಲ್ಲಿ (Maharashtra) ನಡೆದಿದೆ. ವನ್ಯಜೀವಿ ಎಸ್‌ಒಎಸ್ (Wildlife SOS) ಮತ್ತು ಮಹಾರಾಷ್ಟ್ರ ಅರಣ್ಯ ಇಲಾಖೆಯ ಜಂಟೀಕಾರ್ಯಾಚರಣೆಯಲ್ಲಿ ಪುಣೆ ಜಿಲ್ಲೆಯ ಚಾಸ್ ಗ್ರಾಮದ ಬಳಿ 45 ದಿನಗಳ ಚಿರತೆಮರಿಯನ್ನು ತನ್ನ ತಾಯಿಯ ಬಳಿ ಸೇರುವಂತೆ ಮಾಡಲಾಗಿದೆ. ಆ ನಂತರ ಮರಿಯನ್ನು ಪಶುವೈದ್ಯಕೀಯ ತಂಡವು ಚಿಕಿತ್ಸೆ ನೀಡಿ ವಾಪಾಸು ತಾಯಿಯ ಬಳಿ ಬಿಟ್ಟಿದೆ.

ಇದನ್ನೂ ಓದಿ : Viral: ಶಂಕರ್​ ಮಹಾದೇವನ್ ಬ್ರೆಥ್​ಲೆಸ್​ ಸಾಂಗ್;​ ಎಜಾಝ್​ ಮತ್ತು ಪ್ರಿನ್ಸಿ ವರ್ಷನ್​

ಒಂದು ವಾರದ ಹಿಂದೆ ಮಂಚಾರ್ ಅರಣ್ಯಪ್ರದೇಶದ ಬಳಿ ಇರುವ ಚಾಸ್ ಗ್ರಾಮದ ಮನೆಯೊಂದರಲ್ಲಿ ಚಿರತೆ ಮರಿ ಪತ್ತೆಯಾಗಿತ್ತು. ಈ ಪ್ರದೇಶದ ಸುತ್ತಮುತ್ತ ಆಗಾಗ ಚಿರತೆಗಳು ಓಡಾಡಿಕೊಂಡಿರುತ್ತವೆಯಾದ್ದರಿಂದ ಗ್ರಾಮಸ್ಥರು ಗಾಬರಿಗೆ ಬೀಳದೆ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿಯನ್ನು ರವಾನಿಸಿದರು. ಅರಣ್ಯಾಧಿಕಾರಿಗಳು ತಕ್ಷಣವೇ ಕಾರ್ಯಾಚರಣೆಗೆ ಮುಂದಾದರು. ಆ ಮನೆ ಮತ್ತು ಹೊಲದ ಬಳಿ ಟ್ರ್ಯಾಪ್ ಕ್ಯಾಮೆರಾಗಳನ್ನು ಅಳವಡಿಸಿ ಮರಿಯನ್ನು ರಕ್ಷಿಸಿದರು. ಆ ನಂತರ ಜುನ್ನಾರ್‌ನಲ್ಲಿರುವ ಮಾಣಿಕ್‌ದೋ ಚಿರತೆ ರಕ್ಷಣಾ ಕೇಂದ್ರಕ್ಕೆ ಅದನ್ನು ಕರೆತಂದರು.

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral Video: ಲಿಸಾ; ಕುತೂಹಲ ಕೆರಳಿಸಿರುವ ಒಡಿಶಾದ ಮೊದಲ ಎಐ ನ್ಯೂಸ್ ಆ್ಯಂಕರ್

ವನ್ಯಜೀವಿ ಎಸ್‌ಒಎಸ್‌ನ ಪಶುವೈದ್ಯಾಧಿಕಾರಿ ಅಖಿಲೇಶ್ ಢಗೆ, ‘ಮರಿಯು ಪ್ರಜ್ಞಾವಸ್ಥೆಯಲ್ಲಿತ್ತು ಮತ್ತು ಸ್ವಲ್ಪ ನಿರ್ಜಲೀಕರಣಗೊಂಡಿತ್ತು. ಅಗತ್ಯವಾದ ಚಿಕಿತ್ಸೆ ನೀಡಲಾಯಿತು. ನಂತರ ಆ ಸಂಜೆಯೇ, ಅದು ಪತ್ತೆಯಾದ ಸ್ಥಳಕ್ಕೆ ಅದನ್ನು ರವಾನಿಸುವ ವ್ಯವಸ್ಥೆಯನ್ನು ಮಾಡಲಾಯಿತು. ತಾಯಿ ಚಿರತೆಯು ನಿಧಾನವಾಗಿ ತನ್ನ ಬಾಯಿಯೊಳಗೆ ಮರಿಯನ್ನು ಎತ್ತಿಕೊಂಡು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿತು. ಇದನ್ನು ನಾವು ಅಳವಡಿಸಲಾಗಿದ್ದ ಕ್ಯಾಮೆರಾದ ಮೂಲಕ ನೋಡಿದೆವು’ ಎಂದಿದ್ದಾರೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್  ಮಾಡಿ

Published On - 2:34 pm, Mon, 10 July 23