ಗೂಗಲ್​ನ ಮಾಜಿ ಎಂಡಿ ಕ್ಯಾಬ್​ ಡ್ರೈವರ್​ಗೆ ಹಣ ಪಾವತಿಸಲು ಮರೆತಾಗ…

| Updated By: ಶ್ರೀದೇವಿ ಕಳಸದ

Updated on: Dec 05, 2022 | 5:27 PM

Cab Driver : ‘ಪರ್ವಾಗಿಲ್ಲ ಸರ್. ಮತ್ತೆ ಯಾವಾಗಲಾದರೂ ಬರುತ್ತೀರಲ್ಲ’ ಎಂದಿದ್ದಾನೆ. ಆದರೆ ನಾವು ಸ್ಥಳೀಯ ನಿವಾಸಿಗಳಲ್ಲ ಎಂದು ಅವನಿಗೆ ಗೊತ್ತಿತ್ತು, ಹಾಗೆಯೇ ಹಣ ಎಷ್ಟು ಎಂದು ಕೇಳಿದರೂ ಅವನು ಹೇಳಲೇ ಇಲ್ಲ. ನಂತರ...

ಗೂಗಲ್​ನ ಮಾಜಿ ಎಂಡಿ ಕ್ಯಾಬ್​ ಡ್ರೈವರ್​ಗೆ ಹಣ ಪಾವತಿಸಲು ಮರೆತಾಗ...
ಪ್ರಾತಿನಿಧಿಕ ಚಿತ್ರ
Follow us on

Viral Video : ಗೂಗಲ್​ನ ಮಾಜಿ ಎಂಡಿ ಪರ್ಮಿಂದರ್ ಸಿಂಗ್​ ದೆಹಲಿ ವಿಮಾನ ನಿಲ್ದಾಣಕ್ಕೆ ಕ್ಯಾಬ್​ನಲ್ಲಿ ಪ್ರಯಾಣಿಸಿದ್ದಾರೆ. ಆದರೆ ಕ್ಯಾಬ್​ ಡ್ರೈವರ್​ಗೆ ಹಣ ಪಾವತಿಸುವುದನ್ನೇ ಮರೆತಿದ್ದಾರೆ. ಇದ್ದಕ್ಕಿದ್ದಂತೆ ನೆನಪಾಗಿ ಹೇಗೆ ಹಣ ಪಾವತಿಸುವುದು ಎಂದು ವಾಪಸ್​ ಡ್ರೈವರ್​ಗೆ ಫೋನ್ ಮಾಡಿ ಕೇಳಿದಾಗ, ‘ಪರ್ವಾಗಿಲ್ಲ ಸರ್. ಮತ್ತೆ ಯಾವಾಗಲಾದರೂ ಬರುತ್ತೀರಲ್ಲ’ ಎಂದಿದ್ದಾನೆ. ಆದರೆ ನಾವು ಸ್ಥಳೀಯ ನಿವಾಸಿಗಳಲ್ಲ ಎಂದು ಅವನಿಗೆ ಗೊತ್ತಿತ್ತು, ಹಾಗೆಯೇ ಹಣ ಎಷ್ಟು ಎಂದು ಕೇಳಿದರೂ ಅವನು ಹೇಳಲೇ ಇಲ್ಲ. ಆದರೂ ನನಗೆ ಸುಮ್ಮನಿರಲಾಗಲಿಲ್ಲ, ಒಂದಿಷ್ಟು ಹಣ ಪಾವತಿಸಿದೆ. ಈ ಘಟನೆಯಿಂದ ಅರಿವಿಗೆ ಬಂದಿದ್ದೇನೆಂದರೆ ಇನ್ನೂ ವಿನಮ್ರತೆ, ವಿನಯಶೀಲತೆ ಜೀವಂತವಾಗಿದೆ ಎನ್ನುವುದು ಎಂದು ಟ್ವೀಟ್ ಮಾಡಿದ್ದಾರೆ ಪರ್ಮಿಂದರ್ ಸಿಂಗ್.

ಇದೇ ಟ್ವೀಟಿನ ಥ್ರೆಡ್​ನಲ್ಲಿ ಪ್ರತಿಕ್ರಿಯಿಸಿದ ಅವರು, ಡ್ರೈವರ್​ನ ವಿವರಗಳನ್ನು ಅನುಮತಿ ಇಲ್ಲದೆ ಹಂಚಿಕೊಳ್ಳಲಾರೆ. ಆದರೆ ದೆಹಲಿ ಸುತ್ತಮುತ್ತ ನೀವು ಒಳ್ಳೆಯ ಕ್ಯಾಬ್​ ಡ್ರೈವರ್​ನನ್ನು ಹುಡುಕುತ್ತಿದ್ದರೆ ದಯವಿಟ್ಟು ನನಗೆ ಮೆಸೇಜ್ ಮಾಡಿ ಎಂದಿದ್ದಾರೆ.

ಎರಡು ದಿನಗಳ ಹಿಂದೆ ಹಂಚಿಕೊಂಡ ಈ ಪೋಸ್ಟ್​ ಅನ್ನು ಸುಮಾರು 950 ಜನರು ಮೆಚ್ಚಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ‘ಭಾರತದಲ್ಲಿ ಪ್ರಯಾಣಿಸುವಾಗ ಅನೇಕ ಪ್ರಯಾಣಿಕರು ಉತ್ತಮವಾದ ಮತ್ತು ಕೆಟ್ಟ ಅನುಭವಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಇಂಥ ರೂಢಿಗತವಾದ ಅನುಭವಗಳನ್ನು ಮುರಿದು ಯೋಚಿಸುವಂತೆ ಕೂಡಿತ್ತು ಈ ಅನುಭವ’ ಎಂದಿದ್ದಾರೆ ಎಲೆನ್ ಕೆರಿಯರ್​ ಇನ್​ಸ್ಟಿಟ್ಯೂಟ್​ನ ನಿರ್ದೇಶಕ ನವೀನ್ ಮಹೇಶ್ವರಿ.

ಇದನ್ನೂ ಓದಿ : ಪ್ರಯಾಣಿಕರೊಂದಿಗೆ ಸಂಸ್ಕೃತದಲ್ಲಿ ಮಾತನಾಡುವ ಕ್ಯಾಬ್​ ಡ್ರೈವರ್​, ವಿಡಿಯೋ ವೈರಲ್

ದೆಹಲಿಯಲ್ಲಿ ಕ್ಯಾಬ್​ ಡ್ರೈವರ್​ಗಳು ಹೇಗೆ ಸುಲಿಗೆ ಮಾಡುತ್ತಾರೆ ಎಂದು ಅನುಭವಿಸಿದವರಿಗೇ ಗೊತ್ತು. ಧನ್ಯವಾದ ನಾನು ನಿಮಗೆ ಮೆಸೇಜ್ ಮಾಡಿ ಆ ಡ್ರೈವರ್ ನಂಬರ್ ಪಡೆದುಕೊಳ್ಳುತ್ತೇನೆ ಎಂದಿದ್ದಾರೆ ಮತ್ತೊಬ್ಬರು. ಸರಳ ಮನಸಿನವರು ನಿಜಕ್ಕೂ ಘನತೆಯುಳ್ಳ ಮನುಷ್ಯರು ಎಂದಿದ್ದಾರೆ ಇನ್ನೊಬ್ಬರು.

ನಿಮ್ಮ ಅಭಿಪ್ರಾಯವೇನು ಈ ವಿಷಯವಾಗಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:26 pm, Mon, 5 December 22