Dog Lover: ಯಾರದೋ ಕಾರಂತೂ ಬಂದು ನಿಂತಿತು. ಯಾರಿರಬಹುದು? ಎಂದು ಮೂತಿಯನ್ನು ಇನ್ನಷ್ಟು ಚೂಪು ಮಾಡಿಕೊಂಡು ಕಾರಿನೆಡೆ ನೋಡುತ್ತ ನಿಲ್ಲುತ್ತದೆ ಈ ನಾಯಿ. ಆ ಕಾರಿನೊಳಗಿರುವವನು ತನ್ನನ್ನು ಸಾಕಿದವನು ಎಂಬುದು ಅರಿವಿಗೆ ಬರುತ್ತಿದ್ದಂತೆ ಶರವೇಗದಲ್ಲಿ ಬಿಡಿಸಿಕೊಂಡು ಓಡಿಹೋಗುತ್ತದೆ. ಮೂರು ವರ್ಷಗಳ ಕಾಲ ಅವನಿಂದ ದೂರವಿದ್ದ ನಾಯಿಗೆ ಆದ ಸಂತೋಷ (Happyness) ವರ್ಣಿಸಲಸಾಧ್ಯ. ಕುಣಿದು ಕುಪ್ಪಳಿಸುತ್ತ ಅತ್ತಿಂದಿತ್ತ ಓಡಾಡುತ್ತದೆ. ಈ ವಿಡಿಯೋ ಅನೇಕ ನೆಟ್ಟಿಗರ ಹೃದಯವನ್ನು ಕರಗಿಸುತ್ತಿದೆ. ಅನೇಕರು ಇಲ್ಲವಾದ ತಮ್ಮ ನಾಯಿಗಳನ್ನು ನೆನೆದು ಹನಿಗಣ್ಣಾಗುತ್ತಿದ್ದಾರೆ.
ವಿಶ್ವಾಸ, ನಿಷ್ಠೆಯಿಂದ ಮನುಷ್ಯನ ಮನಸ್ಸನ್ನು ಗೆಲ್ಲುವ ನಾಯಿಗಳು ಎಂಥವರನ್ನೂ ಮೆತ್ತಗಾಗಿಸುತ್ತವೆ. ಅವುಗಳ ಸ್ವಭಾವವೇ ಅಂಥದ್ದು. ಮೇ 29ರಂದು ಹಂಚಿಕೊಂಡಿರುವ ಈ ವಿಡಿಯೋ ಅನ್ನು ಈಗಾಗಲೇ 10.5 ಮಿಲಿಯನ್ಗಿಂತ ಹೆಚ್ಚು ಜನರು ನೋಡಿದ್ದಾರೆ. 1ಮಿಲಿಯನ್ಗಿಂತಲೂ ಹೆಚ್ಚು ಜನರು ಈ ವಿಡಿಯೋ ಮೆಚ್ಚಿದ್ದಾರೆ. ಸಹಸ್ರಾರು ಪ್ರತಿಕ್ರಿಯೆಗಳಿಂದ ಜನರು ಈ ವಿಡಿಯೋ ಅನ್ನು ಪ್ರೀತಿಸುತ್ತಿದ್ದಾರೆ.
ಇದನ್ನೂ ಓದಿ : Viral Video: 5 ಗಂಟೆ ಓಡಿಸಿದರೂ ಕೇವಲ ರೂ. 40 ಸಂಪಾದನೆ; ಕಣ್ಣೀರಿಟ್ಟ ಆಟೋ ಚಾಲಕ
ಪ್ರಾಣಿಗಳು ತಮ್ಮ ಪೋಷಕರನ್ನು ಎಂದಿಗೂ ಮರೆಯುವುದಿಲ್ಲ. ಅವು ಬಹಳ ಪ್ರೀತಿಸುತ್ತವೆ. ಈ ನಾಯಿ ತನ್ನ ಪೋಷಕನ ಕಾರನ್ನೂ ಸ್ವಾಗತಿಸುವ ರೀತಿ ನೋಡಿದಿರಾ? ಕೆಲ ವರ್ಷಗಳ ಹಿಂದೆ ನಾನು ಬಹಳ ಬೇಸರದಲ್ಲಿದ್ದಾಗ ನನ್ನ ನಾಯಿಯೇ ನನಗೆ ಆಪ್ತಮಿತ್ರನಂತೆ ಇತ್ತು. ಕಳೆದ ವರ್ಷ ನಾನು ಡ್ರೈವ್ ಮಾಡಿಕೊಂಡು ಎಲ್ಲೋ ಕಳೆದುಹೋಗಿದ್ದೆ. ನನ್ನ ನಾಯಿ ನನ್ನನ್ನು ವಾಪಾಸು ಮನೆಗೆ ಕರೆದುಕೊಂಡು ಬಂದಿತ್ತು, ನನ್ನ ಆಲೀವರ್ನನ್ನು ನಾನು ಬಹಳ ಪ್ರೀತಿಸುತ್ತೇನೆ. ನಮ್ಮ ನಾಯಿ ಅಪ್ಪನೊಂದಿಗೆ ದಿನಸಿ ತರಲು ಹೋಗುತ್ತಿತ್ತು. ಆದರೆ ಈಗ ಅದಿಲ್ಲ ಎಂದು ಬೇಸರಿಕೊಂಡಿದ್ದಾರೆ ಒಬ್ಬರು… ಹೀಗೆ ಅನೇಕರು ಭಾವುಕರಾಗಿ ಪ್ರತಿಕ್ರಿಯಿಸುತ್ತಿದ್ಧಾರೆ.
ಈ ವಿಡಿಯೋ ನೋಡಿದ ನಿಮಗೆ ನಿಮ್ಮ ಮನೆಯ ನಾಯಿಗಳ ಬಗ್ಗೆ ಪ್ರೀತಿ ಉಕ್ಕುತ್ತಿದೆಯೇ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ