Viral Video: ಮುತ್ತಾತ-ಮರಿಮೊಮ್ಮಗನ ಅಪೂರ್ವ ಸಂಗಮ,  ವೈರಲ್‌ ಆಯ್ತು ನಿಷ್ಕಲ್ಮಶ ಬಾಂಧವ್ಯದ ವಿಡಿಯೋ

| Updated By: ಅಕ್ಷಯ್​ ಪಲ್ಲಮಜಲು​​

Updated on: Jun 13, 2024 | 9:25 AM

ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಲಕ್ಷಾಂತರ ವಿಡಿಯೋಗಳು ಹರಿದಾಡುತ್ತಿರುತ್ತವೆ. ಅವುಗಳಲ್ಲಿ ಕೆಲವು ದೃಶ್ಯಗಳು ನಮ್ಮನ್ನು ನಕ್ಕು ನಲಿಸಿದರೆ, ಕೆಲವೊಂದು ವಿಡಿಯೋಗಳು ಕಣ್ಣಂಚಲಿ ನೀರು ತರಿಸುತ್ತವೆ. ಇದೀಗ ಅಂತಹದೇ ಹೃದಯಸ್ಪರ್ಶಿ ವಿಡಿಯೋವೊಂದು ವೈರಲ್‌ ಆಗಿದ್ದು, ಮರಿ ಮೊಮ್ಮಗ ಬಂದ ಖುಷಿಯಲ್ಲಿ ಮುತ್ತಾದ ಮಗುವನ್ನು ಎತ್ತಿ ಮುದ್ದಾಡಿದ್ದು ಮಾತ್ರಲ್ಲದೆ, ಪುಟಾಣಿ ಮಗುವನ್ನು ನೋಡಿ ಮುತ್ತಾತನ ಮನಸ್ಸು ಖುಷಿಯಲ್ಲಿ ಕುಣಿದಿದೆ. 

Viral Video: ಮುತ್ತಾತ-ಮರಿಮೊಮ್ಮಗನ ಅಪೂರ್ವ ಸಂಗಮ,  ವೈರಲ್‌ ಆಯ್ತು ನಿಷ್ಕಲ್ಮಶ ಬಾಂಧವ್ಯದ ವಿಡಿಯೋ
ವೈರಲ್​​ ವಿಡಿಯೋ
Follow us on

ಅದೇನೋ ಗೊತ್ತಿಲ್ಲ ಅಜ್ಜ ಅಜ್ಜಿಯಂದಿರಿಗೆ ತಮ್ಮ ಮೊಮ್ಮಕ್ಕಳು, ಮರಿ ಮೊಮ್ಮಕ್ಕಳೆಂದರೆ ಪಂಚಪ್ರಾಣ. ಬಾಲ್ಯದಿಂದ ಹಿಡಿದು ದೊಡ್ಡವರಾಗಿ ಬೆಳೆಯುವ ತನಕ ಮೊಮ್ಮಕ್ಕಳು ಅಜ್ಜ ಅಜ್ಜಿ ಪಾಲಿಗೆ ಪುಟ್ಟ ಮಕ್ಕಳೇ. ತಮ್ಮ ಮಡಿಲಲ್ಲಿ ಆಡಿ ಬೆಳೆದ ಮಕ್ಕಳನ್ನು ಅಜ್ಜ ಅಜ್ಜಿ ಸದಾ ಪ್ರೀತಿಯಿಂದ ಕಾಣುತ್ತಾರೆ. ಇನ್ನೂ ತಮ್ಮ ಮೊಮ್ಮಕ್ಕಳಿಗೆ ಮಕ್ಕಳಾದರಂತೂ ಈ ಹಿರಿ ಜೀವಗಳ ಖುಷಿಗೆ ಪಾರವೇ ಇರುವುದಿಲ್ಲ. ಇದಕ್ಕೆ ಉತ್ತಮ ನಿದರ್ಶನದಂತಿರುವ ಕುಟುಂಬದ ಹಿರಿಯ ಹಾಗೂ ಕಿರಿಯ ಸದಸ್ಯನ ಅಪೂರ್ವ ಸಂಗಮದ ಸುಂದರ ವಿಡಿಯೋವೊಂದು ಇದೀಗ ವೈರಲ್‌ ಆಗಿದ್ದು, ಮರಿ ಮೊಮ್ಮಗ ಬಂದ ಖುಷಿಯಲ್ಲಿ ಮುತ್ತಾದ ಮಗುವನ್ನು ಎತ್ತಿ ಮುದ್ದಾಡಿದ್ದು ಮಾತ್ರಲ್ಲದೆ, ಪುಟಾಣಿ ಮಗುವನ್ನು ನೋಡಿ ಮುತ್ತಾನ ಮನಸ್ಸು ಖುಷಿಯಲ್ಲಿ ಕುಣಿದಿದೆ.

ಈ ಮುತ್ತಾತ ಮರಿ ಮೊಮ್ಮಗುವಿನ ನಡುವೆ 92 ವರ್ಷಗಳ ಅಂತರವಿದ್ದು, ಮುತ್ತಾತ ಪ್ರತಿದಿನ ಮರಿಮೊಮ್ಮಗನನ್ನು ಎತ್ತಿ ಮುದ್ದಾಡಿಸುತ್ತಾ, ಪುಟಾಣಿ ಮಗುವಿನೊಂದಿಗೆ ಸಂತೋಷದಿಂದ ದಿನ ಕಳೆಯುತ್ತಿದ್ದಾರೆ. ಮುತ್ತಾತ ಮರಿಮೊಮ್ಮಗನ ಈ ನಿಶ್ಮಲ್ಮಶ ಬಾಂಧವ್ಯದ ವಿಡಿಯೋವನ್ನು ಕಂಟೆಂಟ್‌ ಕ್ರಿಯೆಟರ್‌ ಅಶುತೋಶ್‌ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ಕುಟುಂಬದ ಹಿರಿಯ ಸದಸ್ಯ ಕಿರಿಯ ಸದಸ್ಯನನ್ನು ಭೇಟಿಯಾದ ಕ್ಷಣ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್‌ ವಿಡಿಯೋದಲ್ಲಿ ಮುತ್ತಾತ ಇಳಿ ವಯಸ್ಸಿನಲ್ಲೂ ತನ್ನ ಮರಿ ಮೊಮ್ಮಗನ್ನು ಎತ್ತಿ ಮುದ್ದಾಡುತ್ತಾ, ಮಕ್ಕಳಂತೆ ಮರಿಮೊಮ್ಮಗನೊಂದಿಗೆ  ಖುಷಿಖುಷಿಯಿಂದ ಆಟವಾಡುತ್ತಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ವೇದಿಕೆಯಲ್ಲಿ ಗಡ್ಕರಿಗೆ ರಿಲ್ಯಾಕ್ಸೇಶನ್ ಗುಳಿಗೆ ನೀಡಿದ ಆರೋಗ್ಯ ಸಚಿವ ಜೆ.ಪಿ ನಡ್ಡಾ, ವಿಡಿಯೋ ವೈರಲ್‌ ‌

ಮೂರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 2 ಮಿಲಿಯನ್‌ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಮುತ್ತಾತ ಮತ್ತು ಮರಿ ಮೊಮ್ಮಗನ ಈ ನಿಶ್ಕಲ್ಮಶ ಬಂಧವನ್ನು ಕಂಡು ನೆಟ್ಟಿಗರು ಭಾವುಕರಾಗಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

 

Published On - 9:25 am, Thu, 13 June 24