ಶೇರಿಂಗ್‌ ಇಸ್‌ ಕೇರಿಂಗ್: ವೇದಿಕೆಯಲ್ಲಿ ಗಡ್ಕರಿಗೆ ರಿಲ್ಯಾಕ್ಸೇಶನ್ ಗುಳಿಗೆ ನೀಡಿದ ಆರೋಗ್ಯ ಸಚಿವ ಜೆ.ಪಿ ನಡ್ಡಾ, ವಿಡಿಯೋ ವೈರಲ್‌ ‌

ಕೇಂದ್ರ ಆರೋಗ್ಯ ಸಚಿವರಾದ ಜೆಪಿ ನಡ್ಡಾ ಹಾಗೂ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್‌ ಗಡ್ಕರಿ ಅವರಿಗೆ ಸಂಬಂಧಪಟ್ಟ ಸುಂದರ ವಿಡಿಯೋವೊಂದು ಇದೀಗ ವೈರಲ್‌ ಆಗಿದ್ದು, ಯಾವುದೋ ಒಂದು ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಜೆಪಿ ನಡ್ಡಾ ಅವರು ನಿತಿನ್‌ ಗಡ್ಕರಿ ಅವರ ಜೊತೆ ಗಂಟಲು ರಿಲ್ಯಾಕ್ಸೇಶನ್‌ಗಾಗಿ ತೆಗೆದುಕೊಳ್ಳುವ ಆಯುರ್ವೇದಿಕ್‌ ಮಾತ್ರೆಯೊಂದನ್ನು ಶೇರ್ ಮಾಡಿಕೊಂಡು ತಿಂದಿದ್ದಾರೆ. ಹಲವರು ಈ ವಿಡಿಯೋ ನೋಡಿ ಈ ಇಬ್ಬರೂ ಗುಡ್ಕಾ ತಿನ್ನುತ್ತಿದ್ದಾರಾ ಎಂದು ಫುಲ್‌ ಕನ್ಫ್ಯೂಸ್‌ ಆಗಿದ್ದಾರೆ. ‌

ಶೇರಿಂಗ್‌ ಇಸ್‌ ಕೇರಿಂಗ್: ವೇದಿಕೆಯಲ್ಲಿ ಗಡ್ಕರಿಗೆ ರಿಲ್ಯಾಕ್ಸೇಶನ್ ಗುಳಿಗೆ ನೀಡಿದ ಆರೋಗ್ಯ ಸಚಿವ ಜೆ.ಪಿ ನಡ್ಡಾ, ವಿಡಿಯೋ ವೈರಲ್‌ ‌
ವೈರಲ್ ವಿಡಿಯೋ ಗಡ್ಕರಿ ಹಾಗೂ ಜೆಪಿ ನಡ್ಡಾ
Follow us
ಮಾಲಾಶ್ರೀ ಅಂಚನ್​
| Updated By: Digi Tech Desk

Updated on:Jun 12, 2024 | 5:19 PM

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ನಿರೀಕ್ಷಿತ ಫಲಿತಾಂಶ ಬಂದಿಲ್ಲದಿದ್ದರೂ ಬಿಜೆಪಿ ನೇತೃತ್ವದ ಎನ್‌.ಡಿ.ಎ ಮೈತ್ರಿಕೂಟ ಅಭೂತಪೂರ್ವ ಗೆಲುವನ್ನು ಸಾಧಿಸುವ ಮೂಲಕ ಸತತ ಮೂರನೆಯ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಈ ಮೈತ್ರಿಕೂಟಕ್ಕೆ ಮೂಲಕ ಸರ್ಕಾರ ರಚನೆಯಾಗಲು ಚಂದ್ರಬಾಬು ನಾಯ್ಡು ಕೂಡ ಕಾರಣ, ಅವರು ಇಂದು ಆಂಧ್ರಪ್ರದೇಶದ ವಿಧಾನಸಭೆಯಲ್ಲಿ ಗೆದ್ದು ಜನಸೇನಾ ಹಾಗೂ ಬಿಜೆಪಿ ಬೆಂಬಲದೊಂದಿಗೆ ಆಂಧ್ರದಲ್ಲಿ ಸರ್ಕಾರ ರಚನೆ ಮಾಡಿದ್ದಾರೆ. ಇಂದು ಅವರು ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಈ ವೇಳೆ ಪ್ರಧಾನಿ ಸೇರಿದಂತೆ ಕೇಂದ್ರದ ಅನೇಕ ಸಚಿವರು ಹಾಗೂ ನಾಯಕರು ಭಾಗವಹಿಸಿದರು. ಈ ವೇಳೆ  ವೇದಿಕೆಯ ಮೇಲೆ ಆರೋಗ್ಯ ಸಚಿವ ಜೆಪಿ ನಡ್ಡಾ ಅವರು ನಿತಿನ್‌ ಗಡ್ಕರಿ ಅವರ ಜೊತೆ ಗಂಟಲು ರಿಲ್ಯಾಕ್ಸೇಶನ್‌ಗಾಗಿ ತೆಗೆದುಕೊಳ್ಳುವ ʼಯೋಗಿ ಕಾಂತಿಕಾʼ ಆಯುರ್ವೇದಿಕ್‌ ಮಾತ್ರೆಯೊಂದನ್ನು ಶೇರ್ ಮಾಡಿಕೊಂಡು ತಿಂದಂತಹ ವಿಡಿಯೋವೊಂದು ವೈರಲ್‌ ಆಗಿದ್ದು, ಹಲವರು ಇವರಿಬ್ಬರೂ ಗುಟ್ಕಾ ತಿನ್ನುತ್ತಿದ್ದಾರೆ ಎಂದು ಕನ್ಫ್ಯೂಸ್‌ ಮಾಡಿಕೊಂಡಿದ್ದಾರೆ.

ಈ ಕುರಿತ ವಿಡಿಯೋವನ್ನು Mrsinha ಎಂಬ ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಇದು ಕಾಂತಿಕಾ, ಇದು ಗಂಟಲಿನ ವಿಶ್ರಾಂತಿಗಾಗಿ ತೆಗೆದುಕೊಳ್ಳುವ ಆಯುರ್ವೇದಿಕ್‌ ಮಾತ್ರೆ; ಕೆಲವರು ಇದನ್ನು ಗುಟ್ಕಾ ಎಂದು ಹೇಳುತ್ತಾ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ” ಎಂಬ ಶಿರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

ವೈರಲ್ ವಿಡಿಯೋ:

ವೈರಲ್‌ ವಿಡಿಯೋದಲ್ಲಿ ಆಂಧ್ರ ಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುವ ಸಮಾರಂಭದಲ್ಲಿ  ಕೇಂದ್ರ ಆರೋಗ್ಯ ಸಚಿವರಾದ ಜೆಪಿ ನಡ್ಡಾ ಹಾಗೂ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್‌ ಗಡ್ಕರಿ ಅವರು ವೇದಿಯ ಮೇಲೆ ಅಕ್ಕಪಕ್ಕದಲ್ಲಿ ಕುಳಿತುಕೊಂಡು ಕಾಂತಿಕಾ ಹೆಸರಿನ ಆಯುರ್ವೇದಿಕ್‌ ಗುಳಿಗೆಯನ್ನು ಹಂಚಿಕೊಂಡು ತಿನ್ನುವಂತಹ ದೃಶ್ಯವನ್ನು ಕಾಣಬಹುದು. ನಡ್ಡಾ ಅವರು ಗುಳಿಗೆಯನ್ನು ನೀಡುವಾಗ ನನ್ಗೆ ಒಂದೇ ಸಾಕಪ್ಪಾ ಎಂದು ಗಡ್ಕರಿ ಒಂದು ಗುಳಿಗೆಯನ್ನು ತೆಗೆದು ಬಾಯಿಗೆ ಹಾಕುತ್ತಾರೆ.

ಇದನ್ನೂ ಓದಿ: ವೇದಿಕೆಯಲ್ಲಿ ಮಾಜಿ ರಾಜ್ಯಪಾಲೆ​​ ತಮಿಳ್​​ಸಾಯಿಗೆ ಗದರಿದ ಅಮಿತ್ ಶಾ, ಅಣ್ಣಾಮಲೈ ವಿರುದ್ಧ ನೀಡಿದ ಆ ಹೇಳಿಕೆ ಕಾರಣವೇ?

ಇಂದು ಮದ್ಯಾಹ್ನ ಹಂಚಿಕೊಳ್ಳಲಾದ ಈ ವಿಡಿಯೋ 71 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಕೆಲವರು ಇದನ್ನು ಗುಟ್ಕಾ ಎಂದು ಹೇಳಿದ್ರೆ ಇನ್ನೂ ಹಲವರು ಹೆಚ್ಚು ಮಾತನಾಡುವವರು ತಮ್ಮ ಗಂಟಲಿನ ವಿಶ್ರಾಂತಿಗಾಗಿ ಯಾವಾಗಲೂ ಈ ಮಾತ್ರೆಯನ್ನು ಸೇವನೆ ಮಾಡುತ್ತಾರೆ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 5:12 pm, Wed, 12 June 24

ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ