Viral Video : ನಾಗರಹಾವು ಪ್ರಾಣಿ, ಮನುಷ್ಯರ ಮೇಲೆ ತನ್ನ ಅಟ್ಟಹಾಸ ತೋರಿಸಿದರೂ ಅದು ಹೆದರುವುದು ಮುಂಗುಸಿಗೆ ಮಾತ್ರ. ಶತಮಾನಗಳ ವೈರತ್ವ ಎಂಬಂತೆ ಮುಂಗುಸಿ ಕೂಡ ಎಲ್ಲೇ ನಾಗರಹಾವನ್ನು ಕಂಡರೂ ಎಗರಿ ಕಾದಾಟಕ್ಕಿಳಿದುಬಿಡುತ್ತದೆ. ಕರಿನಾಗರ ಮತ್ತು ಮುಂಗುಸಿಯ ಕಾಳಗದ ಈ ಬಿರುಸನ್ನು ನೇರವಾಗಿ ನೋಡಿದಲ್ಲಿ ಎದೆನಡುಗುವುದೇ, ಅಷ್ಟು ಆವೇಶ! ಈಗ ಈ ವಿಡಿಯೋದಲ್ಲಿ ಮುಂಗುಸಿ ಮತ್ತು ಕರಿನಾಗರ ಕಾದಾಟಕ್ಕಿಳಿದಿವೆ. ಮೈಮುರಿಗೆ ಹೊಡೆದು ತಪ್ಪಿಸಿಕೊಳ್ಳಲು ಹಾವು ನೋಡುತ್ತಿದೆ. ನಿನ್ನ ಬಿಡೆನು ಎಂದು ರೋಷಾವೇಷದಲ್ಲಿ ಹಾರಿಹಾರಿ ಮುಂಗುಸಿ ಹಾವನ್ನು ಸೆದೆಬಡೆಯಲು ನೋಡುತ್ತಿದೆ.
ತನ್ನ ಪುಟ್ಟದೇಹದೊಳಗೆ ಅಷ್ಟೊಂದು ದೈತ್ಯಶಕ್ತಿಯನ್ನು ಅದು ಹೇಗೆ ತಂದುಕೊಳ್ಳುತ್ತದೆಯೋ ಎಂಬ ಆಶ್ಚರ್ಯ ನೋಡಿದ ಯಾರಿಗೂ ಆಗುವುದು ಸಹಜ. ಮುಂಗುಸಿಗೆ ಹಾವು ಕಚ್ಚಿದರೂ ಅದು ಬದುಕುಳಿಯಬಲ್ಲುದು. ಇದೇ ಪ್ರಕೃತಿಯ ವೈಚಿತ್ರ್ಯ. ಸಾಮಾನ್ಯವಾಗಿ ಶೇ. 80 ರಷ್ಟು ಮುಂಗುಸಿ ಮತ್ತು ನಾಗರಹಾವಿನ ಕಾಳಗದಲ್ಲಿ ಮುಂಗುಸಿಯೇ ಗೆಲ್ಲುತ್ತವೆ. ಭಾರತದ ಮುಂಗುಸಿಗಳು ಸಾಮಾನ್ಯವಾಗಿ ಬೂದುಬಣ್ಣದಿಂದ ಕೂಡಿರುತ್ತವೆ. ಯೂಟ್ಯೂಬ್ನಲ್ಲಿ ಹಂಚಿಕೊಂಡಿರುವ ಈ ವಿಡಿಯೋ 2.7 ಲಕ್ಷ ಜನರನ್ನು ಸೆಳೆದಿದೆ.
ಮುಂಗುಸಿಗಳು ಸಾಮಾನ್ಯವಾಗಿ ನೆಲದಲ್ಲಿ ಬಿಲತೋಡಿ ವಾಸಿಸುತ್ತವೆ. ಅವುಗಳು ತೋಡುವ ಬಿಲದ ಪ್ರಮಾಣ ಎಷ್ಟಿರುತ್ತದೆ ಎಂದರೆ, ಕೆಲವೊಮ್ಮೆ ಚಕ್ಕಡಿಗಟ್ಟಲೆ ಮಣ್ಣನ್ನು ಎಳೆದು ಹಾಕಬಲ್ಲವು. ನೋಡಲು ಸಣ್ಣ ದೇಹವಾದರೂ ಅಗಾಧ ಶಕ್ತಿ ಅವುಗಳದ್ದು.
ಮತ್ತಷ್ಟೂ ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 3:04 pm, Sat, 26 November 22